Google Playನಲ್ಲಿವೆ ಈ ಅಪಾಯಕಾರಿ ಆಯಪ್ಗಳು, ಬಳಕೆದಾರರ ಮಾಹಿತಿ ಕದ್ದು ಚೀನಾಗೆ ರವಾನೆ

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) :”ನಮ್ಮ ಎಂಜಿನ್ Google Play Store ನಲ್ಲಿ ಅಡಗಿರುವ ಎರಡು ಸ್ಪೈವೇರ್ಗಳನ್ನು ಪತ್ತೆಹಚ್ಚಿದೆ. 1.5 ಮಿಲಿಯನ್ ಬಳಕೆದಾರರ ಮೇಲೆ ಪರಿಣಾಮ ಬೀರಬಹುದಾದ ಆಯಪ್ ಇವಾಗಿವೆ. ಎರಡೂ ಅಪ್ಲಿಕೇಶನ್‌ಗಳು ಒಂದೇ ಡೆವಲಪರ್‌ನಿಂದ ತಯಾರಿಸಲ್ಪಟ್ಟಿವೆ. ಇವು ಫೈಲ್ ಮ್ಯಾನೇಜ್‌ಮೆಂಟ್ ಅಪ್ಲಿಕೇಶನ್‌ಗಳಂತೆ ಕಾಣಿಸುತ್ತವೆಯಾದರೂ ಎರಡೂ ಒಂದೇ ರೀತಿಯ ದುರುದ್ದೇಶಪೂರಿತ ನಡವಳಿಕೆಗಳನ್ನು ಹೊಂದಿವೆ” ಎಂದು ಸೈಬರ್ ಸೆಕ್ಯೂರಿಟಿ ಕಂಪನಿ Pradeo ಹೇಳಿದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ಸುಮಾರು 1.5 ಮಿಲಿಯನ್ ಬಾರಿಗಿಂತಲೂ ಹೆಚ್ಚು ಡೌನ್ಲೋಡ್ ಆಗಿರುವ 2 ಆಯಪ್ಗಳು […]
ಮೊದಲ ಟಿ20ಯಲ್ಲಿ ಬಾಂಗ್ಲಾ ವನಿತೆಯರನ್ನು ಮಣಿಸಿದ ಭಾರತ : ಹರ್ಮನ್ಪ್ರೀತ್ ಅರ್ಧಶತಕ

ಢಾಕಾ (ಬಾಂಗ್ಲಾದೇಶ): ಶೇರ್-ಎ- ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ನೀಡಿದ್ದ 114 ರನ್ನ ಸುಲಭ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಭಾರತ 3.4 ಓವರ್ ಮತ್ತು 7 ವಿಕೆಟ್ನಿಂದ ಭಾರತ ಗೆದ್ದುಕೊಂಡಿದೆ.ಬಾಂಗ್ಲಾದೇಶ ಪ್ರವಾಸದಲ್ಲಿರುವ ಭಾರತದ ವನಿತೆಯರ ಕ್ರಿಕೆಟ್ ತಂಡ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಅರ್ಧ ಶತಕದ ನೆರವಿನಿಂದ ಮೊದಲ ಟಿ 20 ಪಂದ್ಯವನ್ನು ಗೆದ್ದುಕೊಂಡಿದೆ.ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು ಭರ್ಜರಿ ಜಯ ದಾಖಲಿಸಿದ್ದಾರೆ. ಬೆನ್ನತ್ತಿದ […]
ಇದು ವೈದ್ಯಕೀಯ ಪ್ರಶ್ನೆಗಳಿಗೆ ಉತ್ತರಿಸುವ ವಿಶೇಷ AI :ಗೂಗಲ್ನ Med-PaLM 2

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಗೂಗಲ್ನ AI ಸಾಫ್ಟವೇರ್ Med-PaLM 2 (PALM 2 ನ ರೂಪಾಂತರ) ಅನ್ನು ಯುಎಸ್ ಮೂಲದ ಲಾಭರಹಿತ ಸಂಸ್ಥೆಯಾದ ಮೇಯೊ ಕ್ಲಿನಿಕ್ ಸಂಶೋಧನಾ ಆಸ್ಪತ್ರೆ ಸೇರಿದಂತೆ ಇನ್ನೂ ಕೆಲವೆಡೆ ಏಪ್ರಿಲ್ನಿಂದ ಪರೀಕ್ಷಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ವೈದ್ಯಕೀಯ ಮಾಹಿತಿ ಕುರಿತಾದ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸುವಂಥ ಕೃತಕ ಬುದ್ಧಿಮತ್ತೆ (artificial intelligence -AI) ಪ್ರೋಗ್ರಾಂ ಅನ್ನು ಗೂಗಲ್ ಪರೀಕ್ಷಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.ಆರೋಗ್ಯ ವಿಷಯಕ್ಕೆ ಸಂಬಂಧಿಸಿದ ವೈದ್ಯಕೀಯ ಪ್ರಶ್ನೆಗಳಿಗೆ ನಿಖರವಾಗಿ […]
ಹಾಲಿಗೆ ಮತ್ತೆ 5 ರೂ. ಪ್ರೋತ್ಸಾಹಧನ ಹೈನುಗಾರರಿಗೆ ಸಿಹಿ ಸುದ್ದಿ

ಮೈಸೂರು:ಸಹಕಾರ ಸಚಿವ ಕೆ.ಎನ್. ರಾಜಣ್ಣ ಈ ಬಗ್ಗೆ ಮಾಹಿತಿ ನೀಡಿ, ಈಗಾಗಲೇ ಸರ್ಕಾರದಿಂದ 5 ರೂಪಾಯಿ ಪ್ರೋತ್ಸಾಹಧನ ನೀಡುತ್ತಿದ್ದು, ಹೈನುಗಾರಿಕೆ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೆ ಲೀಟರ್ ನೀಡುವ 5 ರೂ.ಚಿಂತನೆ ಇದೆ. ಮಂಗಳವಾರ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲು ಖರೀದಿ ಮತ್ತು ಮಾರಾಟ ದರ ಕಡಿಮೆ ಇದ್ದು, ಹಾಲು ಉತ್ಪಾದಕರಿಗೆ ನೆರವಾಗಬೇಕಿದೆ. ಹೀಗಾಗಿ ಹೈನುಗಾರರು ಮತ್ತು ಗ್ರಾಹಕರಿಗೆ ಹೊರೆಯಾಗದಂತೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಹಾಲಿಗೆ […]
ಕಲಘಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಿ.ಎಂ.ನಿಂಬಣ್ಣವರ್ ವಿಧಿವಶ

ಹುಬ್ಬಳ್ಳಿ: ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಕಲಘಟಗಿ ಕ್ಷೇತ್ರದ ಮಾಜಿ ಶಾಸಕ ಸಿ.ಎಂ.ನಿಂಬಣ್ಣವರ್ (76) ಹೃದಯಾಘಾತದಿಂದ ನಿಧನರಾದರು. ಪುತ್ರಿಯ ಮನೆಗೆ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿದೆ ಎನ್ನಲಾಗಿದೆ. ಸಿ.ಎಂ.ನಿಂಬಣ್ಣವರ್ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ದಾಖಲಿಸಿದ್ದರು. ಮಾಜಿ ಶಾಸಕರ ಅಗಲಿಕೆಗೆ ರಾಜಕೀಯ ಮುಖಂಡರು, ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.ಮೃತದೇಹವನ್ನು ಸಂಜೆ ಅಥವಾ ನಾಳೆ ಬೆಳಿಗ್ಗೆ ಕಲಘಟಗಿಗೆ ತರುವ ಸಾಧ್ಯತೆ ಇದೆ.