ನಾಯಕಿ ರಮ್ಯಾ ಇರ್ತಾರಾ ‘ಸಂಜು ವೆಡ್ಸ್ ಗೀತಾ’ ಪಾರ್ಟ್ 2 ಘೋಷಣೆ
ನಟ ಶ್ರೀನಗರ ಕಿಟ್ಟಿ ಹಾಗೂ ಮೋಹಕ ತಾರೆ ರಮ್ಯಾರ ಕೆಮಿಸ್ಟ್ರಿ ಸಿನಿಪ್ರೇಮಿಗಳನ್ನು ವಿಶೇಷವಾಗಿ ಆಕರ್ಷಿಸಿತ್ತು. ಸಿನಿಮಾದ ಹಾಡುಗಳು, ಸಂಭಾಷಣೆಗಳು ಬಹಳ ಹಿಟ್ ಆಗಿದ್ದವು. ಚಿತ್ರೀಕರಣ ಮಾಡಿದ್ದ ವಿಧಾನವೂ ಕನ್ನಡಿಗರಿಗೆ ಹಿಡಿಸಿತ್ತು. ಇದೀಗ ಸುಮಾರು 12 ವರ್ಷಗಳ ಬಳಿಕ ‘ಸಂಜು ವೆಡ್ಸ್ ಗೀತಾ ಪಾರ್ಟ್ 2’ ತಯಾರಿಗೆ ಸಿದ್ಧತೆ ನಡೆಯುತ್ತಿದೆ.2011ರಲ್ಲಿ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಆದ ಸಿನಿಮಾ ‘ಸಂಜು ವೆಡ್ಸ್ ಗೀತಾ’. ಒಂದು ದಶಕ ಕಳೆದರೂ ಇಂದಿಗೂ ಚಿತ್ರದ ಕ್ರೇಜ್ ಕಡಿಮೆಯಾಗಿಲ್ಲ.’ಸಂಜು ವೆಡ್ಸ್ ಗೀತಾ’ ಪಾರ್ಟ್ 2 […]
ಬಂಟ್ವಾಳದ ಭಕ್ತರು ಸೇರಿದಂತೆ ಕರಾವಳಿಯ 20 ಮಂದಿ ಸೇಫ್: ಅಮರನಾಥ ಯಾತ್ರೆ
ಬಂಟ್ವಾಳ (ದಕ್ಷಿಣ ಕನ್ನಡ) :ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಯಿಂದ ನಾವು 20 ಮಂದಿ ಇದ್ದೇವೆ ಎಂದು ಹೇಳಿರುವ ಸಂತೋಷ್, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದಿಂದ ಒಟ್ಟು 5 ಯಾತ್ರಾರ್ಥಿಗಳು, ಮಂಗಳೂರು ಅಡ್ಯಾರಿನಿಂದ 8, ಪುತ್ತೂರು, ಉಡುಪಿ, ಮೂಡಬಿದಿರೆಯಿಂದ ತಲಾ ಒಬ್ಬರು, ಸಜೀಪದಿಂದ 3, ಉಪ್ಪಿನಂಗಡಿ ಕರಾಯದಿಂದ ಒಬ್ಬರು ಹೀಗೆ ಒಟ್ಟು 20 ಯಾತ್ರಾರ್ಥಿಗಳು ಯಾತ್ರೆಗೆ ತೆರಳಿದ್ದಾಗಿ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆ ಮತ್ತು ಭೂಕುಸಿತ ಉಂಟಾಗುತ್ತಿದ್ದು, ಅಮರನಾಥ […]
ನವವಧುವಿನಂತೆ ಶೃಂಗಾರಗೊಂಡ ಐತಿಹಾಸಿಕ ಹಂಪಿಯಲ್ಲಿ ಜಿ-20 ಶೃಂಗಸಭೆ
ವಿಜಯನಗರ: ಜಿ-20 ಶೃಂಗಸಭೆಗೆ ಈ ಬಾರಿಯ ಅಧ್ಯಕ್ಷೀಯ ರಾಷ್ಟ್ರ ಭಾರತವಾಗಿದೆ. ಅದಕ್ಕಾಗಿಯೇ ಅತೀ ಮುಖ್ಯವಾದ ಜಿ 20 ಶೃಂಗಸಭೆಯ ಮೂರನೇ ಪ್ರಮುಖ ಸಭೆ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಇಂದಿನಿಂದ 16ರ ವರೆಗೆ ನಡೆಯಲಿದೆ. ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಹಲವಾರು ಉನ್ನತ ಸಭೆಗಳು ಹಂಪಿಯಲ್ಲಿ ನಡೆಯಲಿವೆ ವಿಶ್ವ ಪರಂಪರೆಯ ತಾಣವಾಗಿರುವ ಹಂಪಿ ದೇಶ ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದಿದೆ. ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಇಂದಿನಿಂದ 16 ರವರೆಗೆ ಜಿ-20 […]
BIG DADDY’ ಪೋಸ್ಟರ್ ‘ಘೋಸ್ಟ್’ ಒಡೆಯನಿಗೆ ಜನ್ಮದಿನದ ಸಂಭ್ರಮ
ಜುಲೈ 12 ಕರುನಾಡ ಚಕ್ರವರ್ತಿ ಶಿವ ರಾಜ್ಕುಮಾರ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆ ‘BIG DADDY’ ಎಂಬ ಸ್ಪೆಷಲ್ ವಿಡಿಯೋ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಅದಕ್ಕೂ ಮುನ್ನ ಇಂದು ನಿರ್ದೇಶಕ ಶ್ರೀನಿ ಅವರ ಹುಟ್ಟುಹಬ್ಬದ ಸಲುವಾಗಿ ‘ಬಿಗ್ ಡ್ಯಾಡಿ’ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಶಿವಣ್ಣ ರೈಫಲ್ ಹಿಡಿದು ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೂ ಕಾಣಿಸಿದ ಹೊಸ ಅವತಾರದಲ್ಲಿ ಹ್ಯಾಟ್ರಿಕ್ ಹೀರೋ ನಿಮ್ಮ ಮುಂದೆ ಬರಲಿದ್ದಾರೆ.ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಮತ್ತು ನಿರ್ದೇಶಕ ಶ್ರೀನಿ […]
ಆಗಸ್ಟ್ನಲ್ಲಿ ಎರಡನೇ ಆವೃತ್ತಿ ಆರಂಭ…ಮಹಾರಾಜ ಟ್ರೋಫಿಗೆ ಸೇರಿದ ಶಿವಮೊಗ್ಗ, ಮಂಗಳೂರು ತಂಡ
ಬೆಂಗಳೂರು: ಆಗಸ್ಟ್ 14 ರಿಂದ ಆಗಸ್ಟ್ 30, 2023ರ ವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ಕಳೆದ ವರ್ಷದ ಚಾಂಪಿಯನ್ ಗುಲ್ಬರ್ಗ ಮಿಸ್ಟಿಕ್ಸ್, ಹುಬ್ಬಳ್ಳಿ ಟೈಗರ್ಸ್, ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್, ಮೈಸೂರು ವಾರಿಯರ್ಸ್ ಮತ್ತು ಮಂಗಳೂರು ಹಾಗೂ ಶಿವಮೊಗ್ಗದ ಈ ವರ್ಷ ಸೇರಿಕೊಂಡ ಎರಡು ಹೊಸ ತಂಡಗಳಾಗಿವೆ. ಎಲ್ಲಾ 33 ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಮಹಾರಾಜ ಟ್ರೋಫಿ ಕೆಎಸ್ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ- KSCA) ಟಿ20 ಎರಡನೇ ಆವೃತ್ತಿಯೊಂದಿಗೆ ಈ ಆಗಸ್ಟ್ನಲ್ಲಿ ಆರಂಭವಾಗಲಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ […]