BIG DADDY’‌ ಪೋಸ್ಟರ್​ ‘ಘೋಸ್ಟ್​’ ಒಡೆಯನಿಗೆ ಜನ್ಮದಿನದ ಸಂಭ್ರಮ

ಜುಲೈ 12 ಕರುನಾಡ ಚಕ್ರವರ್ತಿ ಶಿವ ರಾಜ್​​ಕುಮಾರ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆ ‘BIG DADDY’ ಎಂಬ ಸ್ಪೆಷಲ್​ ವಿಡಿಯೋ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಅದಕ್ಕೂ ಮುನ್ನ ಇಂದು ನಿರ್ದೇಶಕ ಶ್ರೀನಿ ಅವರ ಹುಟ್ಟುಹಬ್ಬದ ಸಲುವಾಗಿ ‘ಬಿಗ್​ ಡ್ಯಾಡಿ’ ಫಸ್ಟ್​ ಲುಕ್​ ಬಿಡುಗಡೆ ಮಾಡಿದೆ. ಶಿವಣ್ಣ ರೈಫಲ್​ ಹಿಡಿದು ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೂ ಕಾಣಿಸಿದ ಹೊಸ ಅವತಾರದಲ್ಲಿ ಹ್ಯಾಟ್ರಿಕ್​ ಹೀರೋ ನಿಮ್ಮ ಮುಂದೆ ಬರಲಿದ್ದಾರೆ.ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​ ಮತ್ತು ನಿರ್ದೇಶಕ ಶ್ರೀನಿ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಮೋಷನ್​ ಪೋಸ್ಟರ್​ನಿಂದಲೇ ಸಾಕಷ್ಟು ಟಾಕ್​ ಆಗುತ್ತಿರುವ ‘ಘೋಸ್ಟ್​’ ಸಿನಿಮಾದ ‘BIG DADDY’‌ ಫಸ್ಟ್​ ಲುಕ್​ ರಿಲೀಸ್​ ಆಗಿದೆ.ಕನ್ನಡ ಮಾತ್ರವಲ್ಲದೇ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​ ಸೌಂಡ್​ ಮಾಡುತ್ತಿರುವ ಸಿನಿಮಾ ‘ಘೋಸ್ಟ್​’.
ನಿರ್ದೇಶಕ ಶ್ರೀನಿ ಹುಟ್ಟುಹಬ್ಬದಂದೇ ‘ಘೋಸ್ಟ್​’ ಸಿನಿಮಾದ ಶಿವಣ್ಣನ ‘BIG DADDY’‌ ಲುಕ್​ ರಿಲೀಸ್​ ಆಗಿದೆ.

‘ಶ್ರೀನಿವಾಸ ಕಲ್ಯಾಣ’, ‘ಓಲ್ಡ್ ಮಾಂಕ್’ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಶ್ರೀನಿ ‘ಘೋಸ್ಟ್​’ ಕಥೆ, ಚಿತ್ರಕಥೆ ಬರೆದು ಆಯಕ್ಷನ್​ ಕಟ್​ ಹೇಳಿದ್ದಾರೆ. ಶ್ರೀನಿ ನಿರ್ದೇಶನವಾಗಿರುವುದರಿಂದ ‘ಘೋಸ್ಟ್’​ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಮುಗಿಲೆತ್ತರದಲ್ಲಿದೆ. ಜನ್ಮದಿನ ಆಚರಿಸಿಕೊಳ್ಳುತ್ತಿರುವ ‘ಘೋಸ್ಟ್’​ ಒಡೆಯನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸಿನಿಮಾ ಸೆಲೆಬ್ರಿಟಿಗಳು, ಸ್ನೇಹಿತರು, ಕುಟುಂಬಸ್ಥರು ಸೇರಿದಂತೆ ಅನೇಕರು ವಿಶ್​ ಮಾಡುತ್ತಿದ್ದಾರೆ..

‘ಘೋಸ್ಟ್’ ಪ್ಯಾನ್​ ಇಂಡಿಯಾ ಸಿನಿಮಾ: ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ‘ಘೋಸ್ಟ್’ ಚಿತ್ರ ತೆರೆ ಕಾಣಲಿದೆ. ಸದ್ಯ ಶಿವಣ್ಣನ ಲುಕ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಚಿತ್ರದಲ್ಲಿ ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಸಿನಿಮಾದ ಸಂಭಾಷಣೆ ಜವಾಬ್ದಾರಿ ಮಾಸ್ತಿ ಹಾಗೂ ಪ್ರಸನ್ನ ಅವರದ್ದು.

ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ ಘೋಸ್ಟ್‌ ಚಿತ್ರಕ್ಕಿದೆ. ಐದು ಸಾಹಸ ಸನ್ನಿವೇಶಗಳು ಚಿತ್ರದಲ್ಲಿದೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಂದೇಶ್ ನಾಗರಾಜ್ ಅರ್ಪಿಸಲಿದ್ದಾರೆ. ಸಂದೇಶ್ ಎನ್ ಸಿನಿಮಾವನ್ನು ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ‌ಮಾಡುತ್ತಿದ್ದಾರೆ.
ಶಿವಣ್ಣನಿಗೆ ‘BIG DADDY’ ಸರ್​ಪ್ರೈಸ್​: ಶಿವ ರಾಜ್​ಕುಮಾರ್​​ ಅವರ ಹುಟ್ಟುಹಬ್ಬದ ಸಲುವಾಗಿ ಬಹು ನಿರೀಕ್ಷಿತ “ಘೋಸ್ಟ್” ಚಿತ್ರತಂಡದಿಂದ ವಿಶೇಷ ವಿಡಿಯೋವೊಂದು ಅನಾವರಣಗೊಳ್ಳಲಿದೆ. ‘BIG DADDY’ ಎಂಬ ಸ್ಪೆಷಲ್​ ವಿಡಿಯೋ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಈ BIG DADDY ವಿಡಿಯೋವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರ ನಿರ್ಮಾಪಕರು ನಿರ್ಧರಿಸಿದ್ದಾರೆ