ಜುಲೈ 3 ರಿಂದ 5 ರ ವರೆಗೆ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳ ಪರಿಶೀಲನೆ

ಉಡುಪಿ: ಪ್ರಸಕ್ತ ಸಾಲಿನ ಮೀನುಗಾರಿಕೆ ಋತುವಿನ ಅವಧಿಗೆ ಮೀನುಗಾರಿಕೆ ಪರವಾನಗಿ ಮತ್ತು ಡೀಸಿಲ್ ಪಾಸ್ ಪುಸ್ತಕ ಪಡೆಯಲು, ಮೀನುಗಾರಿಕೆ ನಿರ್ದೇಶಕರು, ಬೆಂಗಳೂರು ರವರ ನಿರ್ದೇಶನದಂತೆ , ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಧಕ್ಕೆಯಲ್ಲಿ ನಿಲುಗಡೆಯಾಗಿರುವ ಜಿಲ್ಲೆಯ ಎಲ್ಲಾ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳ ಭೌತಿಕ ಪರಿಶೀಲನೆ ಮತ್ತು ಸಮೀಕ್ಷೆ ನಡೆಸಲು ಮತ್ತು ಮೀನುಗಾರಿಕೆ ಪರವಾನಗಿ ಮತ್ತು ಡೀಸಿಲ್ ಪಾಸ್ ಪುಸ್ತಕ ವಿತರಿಸುವ ಸಲುವಾಗಿ ಮೀನುಗಾರಿಕೆ ಜಂಟಿ ನಿರ್ದೇಶಕರು, ಉಡುಪಿ ರವರು ತಂಡಗಳನ್ನು ರಚಿಸಿ ಮೀನುಗಾರಿಕಾ ದೋಣಿಗಳ ಪರಿಶೀಲನೆ ನಡೆಸಿ ವರದಿ […]

ಉಡುಪಿಯಲ್ಲಿ ಶೇ.100ರಷ್ಟು ವಿದ್ಯುತ್ ಸಂಪರ್ಕದ ಗುರಿ: ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ವಿದ್ಯುತ್ ಸಂಪರ್ಕ ಅಭಿಯಾನ

ಉಡುಪಿ: ಆಸರೆ ಚಾರಿಟೇಬಲ್ ಟ್ರಸ್ಟ್(ರಿ) ಕಡಿಯಾಳಿ ವತಿಯಿಂದ ಜೂ. 27ರಂದು ಉಡುಪಿ ನಗರದ ಸುಬ್ರಹ್ಮಣ್ಯ ನಗರದಲ್ಲಿ 3 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಒದಗಿಸಲಾಯಿತು. ಫಲಾನುಭವಿಗಳಾದ ಅಮಿತ, ಶೀಲಾ ಹಾಗೂ ಸದಾಶಿವ ಇವರ ಮನೆಗೆ ದಾನಿಗಳಾದ ಖ್ಯಾತಿ ಭಟ್ ಮತ್ತು ಸ್ತುತಿ ಭಟ್, ಮಂಜುಳಾ ಶೆಣೈ ವಿದ್ಯುತ್ ಸಂಪರ್ಕ ಒದಗಿಸಿರುತ್ತಾರೆ. ನಗರಸಭೆ ಸ್ಥಾಯಿ ಸಮಿತಿ ಸದಸ್ಯ ಶ್ರೀಶ ಕೊಡವೂರು, ಶೀಲಾ ಅವರ ಮನೆಯ  ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿದರು. ಶೀಲಾ ಅವರ ಮನೆಗೆ ಉಚಿತ ವಿದ್ಯುತ್ ಸೌಲಭ್ಯ […]

ಬೆಲೆ ಏರಿಕೆಯ ಬರೆಯ ಮಧ್ಯೆ ನಂದಿನ ಹಾಲಿನ ದರ ಏರಿಕೆ ಹೊರೆ: ದರ ಪರಿಷ್ಕರಣೆಗೆ ಹಾಲು ಒಕ್ಕೂಟಗಳ ಪಟ್ಟು

ಬೆಂಗಳೂರು: ದಿನಬಳಕೆಯ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದ್ದು, ವಿದ್ಯುತ್ ದರ ಏರಿಕೆಯ ಆಘಾತದ ಬೆನ್ನಲ್ಲೇ ನಂದಿನಿ ಹಾಲಿನ ದರವೂ ಲೀಟರಿಗೆ 5 ರೂ. ಏರುವ ಭಯ ಗ್ರಾಹಕರಲ್ಲಿ ಶುರುವಾಗಿದೆ. ನಂದಿನ ಹಾಲಿನ ದರ ಪರಿಷ್ಕರಣೆಗೆ 14 ಹಾಲಿನ ಒಕ್ಕೂಟಗಳು ಪಟ್ಟು ಹಿಡಿದಿವೆ. ಈ ಹಿಂದೆ ಬೊಮ್ಮಾಯಿ ಸರ್ಕಾರದ ಸಂಧರ್ಭದಲ್ಲಿಯೂ ಹಾಲಿನ ದರ ಏರಿಕೆ ಬಗ್ಗೆ ಒಕ್ಕೂಟಗಳು ಮನವಿ ಮಾಡಿದ್ದವು. ಬೊಮ್ಮಾಯಿ ಸರ್ಕಾರ ಲೀಟರಿಗೆ 2 ರೂ ಏರಿಕೆ ಮಾಡುವಂತೆ ಒಪ್ಪಿಗೆ ನೀಡಿತ್ತು. ಇದೀಗ ಸರಕಾರ ಬದಲಾಗಿದ್ದು, ದರ […]

ತಿರುಮಲ: ಪೇಜಾವರಮಠದ ನವೀಕರಣಗೊಳ್ಳಲಿರುವ ಶಾಖೆ ಉಡುಪಿಮಠದ ಶಿಲಾನ್ಯಾಸ

ತಿರುಮಲ: ಪ್ರಸಿದ್ಧ ಕ್ಷೇತ್ರದಲ್ಲಿರುವ ಪೇಜಾವರ ಮಠದ ಶಾಖೆ ಉಡುಪಿಮಠ ವನ್ನು ಯಾತ್ರಿಗಳ ಅನುಕೂಲಕ್ಕಾಗಿ ನವೀಕರಣಗೊಳಿಸಲಾಗುತ್ತಿದೆ. ನೂತನ ಕಟ್ಟಡಕ್ಕೆ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬುಧವಾರ ಬೆಳಿಗ್ಗೆ ಸುಮುಹೂರ್ತದಲ್ಲಿ ಶಿಲಾನ್ಯಾಸ ನೆರವೇರಿಸಿ ಶುಭ ಸಂದೇಶ ನೀಡಿದರು‌. ಕಾರ್ಯಕ್ರಮದಲ್ಲಿ ಶ್ರೀ ಮಠದ ಅಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು. ಸುಮಾರು ಒಂದೂವರೆ ವರ್ಷದೊಳಗೆ ನೂತನ ಕಟ್ಟಡ ನಿರ್ಮಾಣ ಕಾರ್ಯವು ಪೂರ್ಣಗೊಳ್ಳುವ ನಿರೀಕ್ಷೆಯಿದ್ದು ಅಲ್ಲಿಯ ತನಕ ಯಾತ್ರಿಗಳಿಗೆ ಉಡುಪಿ ಮಠವು ಲಭ್ಯವಿರುವುದಿಲ್ಲ.

ಜೂನ್ 30ರೊಳಗೆ ಶರಣಾಗಿ; ಇಲ್ಲದಿದ್ದರೆ ಮನೆ ಜಪ್ತಿಗೆ ತಯಾರಾಗಿ: ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳಿಗೆ ಎನ್.ಐ.ಎ ವಾರ್ನಿಂಗ್

ಸುಳ್ಯ: ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿಗಳು ಸ್ವಯಂ ಪ್ರೇರಿತವಾಗಿ ಜೂನ್‌.30ರೊಳಗೆ ಹಾಜರಾಗಬೇಕು ಎಂದು ಎನ್‌ಐಎ ಕೋರ್ಟ್‌ ಆದೇಶ ಹೊರಡಿಸಿದೆ. ಒಂದು ವೇಳೆ ಜೂನ್‌.30ರೊಳಗೆ ಶರಣಾಗದಿದ್ದಲ್ಲಿ ಆರೋಪಿಗಳ ಆಸ್ತಿಯನ್ನು ಜಪ್ತಿ ಮಾಡಲಾಗುವುದು ಎಂದು ಎನ್‌ಐಎ ಕೋರ್ಟ್‌ ಹೇಳಿದೆ. ಈ ಬಗ್ಗೆ ಸುಳ್ಯದಲ್ಲಿ ಧ್ವನಿವರ್ಧಕದ ಮೂಲಕ ಸಂದೇಶ ನೀಡಲಾಗಿದೆ. ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಮಾಡಿದ ಆರೋಪಿಗಳ ಸುಳಿವು ಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿಯೂ ಘೋಷಿಸಲಾಗಿದೆ. 2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ […]