ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ: ಮೈಸೂರು ಜಿಲ್ಲೆಯಲ್ಲಿ 19 ಬೆಳೆಗಳಿಗೆ ರೈತರು ಮಾಡಿಸಬಹುದು ಬೆಳೆ ವಿಮೆ
ಮೈಸೂರು: 2023 -24ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ – ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಕರ್ನಾಟಕ ಸರ್ಕಾರದ ವತಿಯಿಂದ ಜಾರಿಗೊಳಿಸುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ ಇದಕ್ಕೆ ನಾಳೆ ಅಂತಿಮ ದಿನವಾಗಿದೆ. ಜಿಲ್ಲೆಗೆ ಅಧಿಸೂಚನೆ ಮಾಡಿರುವ ಬೆಳೆಗಳ ವಿಮಾ, ವಿಮಾ ಕಂತು ಮತ್ತು ಅಂತಿಮ ನೊಂದಣಿ ದಿನಾಂಕದ ವಿವರ: ಎಳ್ಳಿನ ಬೆಳೆಗೆ (ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ ಮೊತ್ತ 11,635.13 ರೂ.ಗಳಿದ್ದು ವಿಮಾ ಕಂತು 232.70 ರೂ., ಸೂರ್ಯಕಾಂತಿ ಬೆಳೆಗೆ(ಮಳೆಯಾಶ್ರಿತ) ಪ್ರತಿ ಎಕರೆಗೆ ವಿಮಾ […]
ಹಲವು ಭಾರತೀಯರಿಗೆ ರಾಮ್ ಚರಣ್, ಜೂ. ಎನ್ಟಿಆರ್ ಸೇರಿ ಸಿಕ್ತು ಆಸ್ಕರ್ ಸದಸ್ಯತ್ವ
ನಟನಾ ವಿಭಾಗದಲ್ಲಿ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಸದಸ್ಯರಾಗಿ ಸ್ಥಾನ ಪಡೆದಿದ್ದಾರೆ. ಈ ಬಾರಿ ಆಸ್ಕರ್ ತೀರ್ಪುಗಾರರಲ್ಲಿ ಒಟ್ಟು 398 ಹೊಸ ಸದಸ್ಯರಿಗೆ ಸ್ಥಾನ ನೀಡುತ್ತಿರುವುದಾಗಿ ಅಕಾಡೆಮಿ ತಂಡ ಪ್ರಕಟಿಸಿದೆ. ವಿಶ್ವ ಶ್ರೇಷ್ಠ ಪ್ರಶಸ್ತಿ ಆಸ್ಕರ್ ಜೊತೆಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ‘RRR’ ತಂಡ ಮತ್ತೊಂದು ಅಪರೂಪದ ಗೌರವಕ್ಕೆ ಪಾತ್ರವಾಗಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಸೇರಿ ಹಲವು ಭಾರತೀಯ ಸಿನಿ ಗಣ್ಯರು ಆಸ್ಕರ್ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಸಂಗೀತ ನಿರ್ದೇಶಕ […]
ಅನಿಮಲ್ ಸೆಟ್ನಿಂದ ನಟನ ಫೋಟೋ ವೈರಲ್ – ರಗಡ್ ಲುಕ್ನಲ್ಲಿ ರಣ್ಬೀರ್ ಕಪೂರ್
ಈ ನಟರು ಮೊದಲ ಬಾರಿ ಒಟ್ಟಿಗೆ ನಟಿಸಿದ್ದು, ಅನಿಮಲ್ ಶೂಟಿಂಗ್ ಸೆಟ್ನಿಂದ ನಟ ರಣ್ಬೀರ್ ಕಪೂರ್ ಅವರ ಫೋಟೋ ವೈರಲ್ ಆಗಿದೆ. ಅನಿಮಲ್ ಶೂಟಿಂಗ್ ಸೆಟ್ನಿಂದ ನಟ ರಣ್ಬೀರ್ ಕಪೂರ್ ಅವರ ಫೋಟೋ ವೈರಲ್ ಆಗಿದೆ.ಅನಿಮಲ್ 2023ರ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಕಬೀರ್ ಸಿಂಗ್ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಆಯಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ಬಾಲಿವುಡ್ ಬಹುಬೇಡಿಕೆ ನಟ ರಣ್ಬೀರ್ ಕಪೂರ್ ಸ್ಕ್ರೀನ್ ಶೇರ್ ಮಾಡಿದ್ದಾರೆ.ಬಾಲಿವುಡ್‌ನ ಬಹುಬೇಡಿಕೆ, […]
ಹೆಚ್ಚುತ್ತಿರುವ ಡೆಂಘೀ.. ಇದುವೆರೆಗೆ ಸಾವನ್ನಪ್ಪಿದವರ ಸಂಖ್ಯೆ 39ಕ್ಕೆ ಏರಿಕೆ
ತಿರುವನಂತಪುರಂ: ಕಾಸರಗೋಡು ಜಿಲ್ಲೆಯ ಚೆಮ್ಮನಾಡು ಮೂಲದ ಅಶ್ವತಿ (28) ಜ್ವರದಿಂದ ಸಾವನ್ನಪ್ಪಿದವರು. ಈ ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರು ವರ್ಷದ ಮಗು ಇರುವ ಈ ಮಹಿಳೆ ಜ್ವರದಿಂದ ಸಾವನ್ನಪ್ಪಿರುವುದು ಇಂದು ಬೆಳಗ್ಗೆ ದೃಢಪಟ್ಟಿದೆಕೇರಳದಲ್ಲಿ ಜ್ವರ ಬಾಧಿತರು ಹಾಗೂ ಜ್ವರದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಬೆಳಗ್ಗೆ ಜ್ವರದಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಆರೋಗ್ಯ ಇಲಾಖೆಯ ವೆಬ್ಸೈಟ್ನಲ್ಲಿ ಕೊನೆಯದಾಗಿ ಜೂನ್ 27 ರಂದು ಜ್ವರ ಬಾಧಿತರು ಹಾಗೂ ಸಾವನ್ನಪ್ಪಿದವರ ಅಂಕಿ ಅಂಶ ಪ್ರಕಟವಾಗಿತ್ತು. . […]
ಜುಲೈ 1ರಿಂದ 2ನೇ ಟೋಲ್ ಆರಂಭ :ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್
ಮಂಡ್ಯ : ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನ ಸವಾರರು ಇನ್ನು ಮುಂದೆ ಮತ್ತೊಂದು ಟೋಲ್ ಪಾವತಿಸಬೇಕಾಗಿದೆ. ಈ ಟೋಲ್‌ನಲ್ಲಿ ಒಂದು ಕಾರಿಗೆ ಏಕಮುಖ ಸಂಚಾರಕ್ಕೆ 165 ರೂ. ವಸೂಲಿ ಮಾಡಲಾಗುತ್ತಿದೆ. ಇದೀಗ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಎರಡನೇ ಹಂತದ ಟೋಲ್ ಜುಲೈ 1 ರಿಂದ ಆರಂಭವಾಗಲಿದೆ ಈಗಾಗಲೇ ರಾಮನಗರ ಜಿಲ್ಲೆಯ ಕಣಮಿಣಕಿ ಟೋಲ್ ಆರಂಭವಾಗಿದೆ. ಶುಲ್ಕದ ವಿವರ : ಕಾರು, ಜೀಪು, ವ್ಯಾನ್ – 155 ರೂ. ಲಘು ವಾಣಿಜ್ಯ […]