ಜೂ.30: ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಹಿರಿಯಡಕ ಕಚೇರಿ ಉದ್ಘಾಟನೆ

ಕಾಪು: ತಾಲೂಕಿನ ಹಿರಿಯಡಕ ಬೊಮ್ಮರಬೆಟ್ಟು ಗ್ರಾಮಪಂಚಾಯತ್ ಬಳಿ‌ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರ ನೂತನ ಶಾಸಕರ ಕಚೇರಿಯ ಉದ್ಘಾಟನಾ ಸಮಾರಂಭ ಬೆಳಿಗ್ಗೆ 10 ಗಂಟೆಗೆ ಜರಗಲಿದೆ. ಇದರ ಜೊತೆಗೆ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತೊಂದರಲ್ಲಿ ಆರ್​ಆರ್​ಆರ್​ ಡೈರೆಕ್ಟರ್​ ರಾಜಮೌಳಿ ಸ್ಟೈಲಿಶ್​ ಲುಕ್:

ಬಾಹುಬಲಿ ಮತ್ತು ಆರ್‌ಆರ್‌ಆರ್‌ ನಂತಹ ಸಿನಿಮಾಗಳ ಮೂಲಕ ಇಡೀ ಜಗತ್ತೇ ತೆಲುಗು ಇಂಡಸ್ಟ್ರಿಯತ್ತ ನೋಡುವಂತೆ ಮಾಡಿದ್ದಾರೆ ಜಕಣ್ಣ. ಆರ್​ಆರ್​ಆರ್​, ನಾಟು ನಾಟು ಮೂಲಕ ತೆಲುಗು ಸಿನಿಮಾ ಖ್ಯಾತಿಯನ್ನು ಆಸ್ಕರ್‌ಗೆ ಕೊಂಡೊಯ್ದ ಈ ಸ್ಟಾರ್ ಡೈರೆಕ್ಟರ್ ಇದೀಗ ಮತ್ತೊಂದು ಮಾಸ್ಟರ್ ಪೀಸ್ ಮಾಡಲು ಸಿದ್ಧರಾಗಿದ್ದಾರೆ ನಿರ್ದೇಶಕ ರಾಜಮೌಳಿ ಖಾಸಗಿ ಮೊಬೈಲ್​​ ತಯಾರಿಕಾ ಕಂಪನಿ ಜಾಹೀರಾತಿನಲ್ಲಿ ಸಖತ್​ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ರಾಜಮೌಳಿ ಆವರು ತಮ್ಮ ಅಮೋಘ ಪ್ರತಿಭೆಯಿಂದ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿ ಇಡೀ ಚಿತ್ರರಂಗದಲ್ಲಿ ಭದ್ರ ಸ್ಥಾನ […]

ಮಂಡ್ಯದ ಮೈಶುಗರ್ ಕಾರ್ಖಾನೆಯಿಂದ 40 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಾಕಿ

ಮಂಡ್ಯ :ಇತ್ತೀಚೆಗಷ್ಟೇ ಪುನರಾರಂಭಗೊಂಡ ಮಂಡ್ಯದ ಮೈಶುಗರ್ ಕಾರ್ಖಾನೆ ಕೋಟಿ ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ ಮಂಡ್ಯ ಮೈಶುಗರ್ ಕಾರ್ಖಾನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸದೇ ಇರುವುದರಿಂದ ವಿದ್ಯುತ್​ ಬಾಕಿ ಮೊತ್ತ ಪಾವತಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ರಾಜ್ಯಾದ್ಯಂತ ವಿದ್ಯುತ್ ದರ ಏರಿಕೆಯಾಗಿದ್ದು ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯದ ಏಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆಯಾಗಿರುವ ಮೈಶುಗರ್ 2000ನೇ ಇಸವಿಯಿಂದಲೂ ಕರೆಂಟ್ ಬಿಲ್ ಕಟ್ಟದೇ 40 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ. ಕಾರ್ಖಾನೆಯ […]

ಏಷ್ಯಾಕಪ್​ ಮೂಲಕ ಕೆಎಲ್​ ರಾಹುಲ್​, ಜಸ್ಪ್ರೀತ್​ ಬೂಮ್ರಾ ಮತ್ತೆ ಭಾರತ ತಂಡಕ್ಕೆ

ನವದೆಹಲಿ: ಈಚೆಗೆ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಟಗಾರರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಗಾಯಗೊಂಡು ಕಳೆದ ನವೆಂಬರ್​ನಿಂದ ಕ್ರಿಕೆಟ್​ನಿಂದ ದೂರವುಳಿದಿರುವ ಬೂಮ್ರಾ, ಐಪಿಎಲ್​ನಲ್ಲಿ ಇಂಜ್ಯುರಿಯಾದ ಕೆಎಲ್​ ರಾಹುಲ್​ ಏಷ್ಯಾ ಕಪ್​ ವೇಳೆಗೆ ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದ ಕೆಎಲ್​ ರಾಹುಲ್​, ಶ್ರೇಯಸ್​ ಅಯ್ಯರ್​, ರಿಷಬ್​ ಪಂತ್​, ಜಸ್ಪ್ರೀತ್​ ಬೂಮ್ರಾ ಗಾಯಗೊಂಡಿದ್ದು, ತಂಡಕ್ಕೆ ಹಿನ್ನಡೆ ಉಂಟಾಗಿದೆ. ಏಷ್ಯಾ ಕಪ್​ ಮೂಲಕ ಗಾಯಾಳುಗಳಾದ ಕೆಎಲ್​ ರಾಹುಲ್​ ಮತ್ತು ಜಸ್ಪ್ರೀತ್​ ಬೂಮ್ರಾ ಭಾರತ ಕ್ರಿಕೆಟ್​ ತಂಡಕ್ಕೆ […]

ಜೀನ್ಸ್, ಟಿ ಶರ್ಟ್‌ ನಿಷೇಧ : ನೌಕರರಿಗೆ ಆದೇಶಿಸಿದ ಬಿಹಾರ ಶಿಕ್ಷಣ ಇಲಾಖೆ

ಪಾಟ್ನಾ (ಬಿಹಾರ): ಈ ಸಂಬಂಧ ಶಿಕ್ಷಣ ಇಲಾಖೆಯ ಆಡಳಿತದ ವಿಭಾಗದ ನಿರ್ದೇಶಕ ಸುಬೋಧ್ ಕುಮಾರ್ ಚೌಧರಿ ಬುಧವಾರ ಆದೇಶ ಹೊರಡಿಸಿದ್ದಾರೆ. ಕರ್ತವ್ಯದ ಸಂಸ್ಕೃತಿಗೆ ವಿರುದ್ಧವಾಗಿರುವ ಕಾರಣ ಕಚೇರಿಯಲ್ಲಿ ಜೀನ್ಸ್ ಮತ್ತು ಟಿ-ಶರ್ಟ್‌ಗಳಂತಹ ಕ್ಯಾಶುಯಲ್ ಬಟ್ಟೆಗಳನ್ನು ಧರಿಸದಂತೆ ಬಿಹಾರ ರಾಜ್ಯ ಶಿಕ್ಷಣ ಇಲಾಖೆಯ ಉದ್ಯೋಗಿಗಳಿಗೆ ಸೂಚಿಸಿದೆ. ಬಿಹಾರದ ಶಿಕ್ಷಣ ಇಲಾಖೆಯಲ್ಲಿ ಡ್ರೆಸ್ ಕೋಡ್​ ನಿಯಮ ಜಾರಿ ಮಾಡಲಾಗಿದೆ. ಕಚೇರಿಗಳಿಗೆ ಜೀನ್ಸ್ ಮತ್ತು ಟಿ-ಶರ್ಟ್‌ ಧರಿಸಬರುವಂತಿಲ್ಲ ಎಂದು ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ನೌಕರರು ಕಚೇರಿಯ ಕರ್ತವ್ಯದ ಸಂದರ್ಭದಲ್ಲಿ ಫಾರ್ಮಲ್ […]