ಡಯಾಲಿಸಿಸ್ ಕೇಂದ್ರದ ಸಿಬ್ಬಂದಿಗಳ ಮುಷ್ಕರ: ರೋಗಿಗಳಿಗೆ ಅನಾನುಕೂಲವಾಗದಂತೆ ಕ್ರಮವಹಿಸಲು ಸುನಿಲ್ ಕುಮಾರ್ ಮನವಿ
ಕಾರ್ಕಳ: ರಾಜ್ಯಾದ್ಯಂತ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿನ 167 ಡಯಾಲಿಸಿಸ್ ಕೇಂದ್ರಗಳಲ್ಲಿ ಸುಮಾರು 900 ಡಯಾಲಿಸಿಸ್ ಸಿಬ್ಬಂದಿಗಳು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದರಿ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿಗಳು ವೇತನ ಹಾಗೂ ಇನ್ನಿತರ ಸೌಲಭ್ಯಗಳಿಗೆ ಆಗ್ರಹಿಸಿ ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಿರುವುದು ತಿಳಿದುಬಂದಿದೆ. ಕಾರ್ಕಳ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಒಟ್ಟು 05 ಜನ ಸಿಬ್ಬಂದಿಗಳು ಕರ್ತವ್ಯನಿರ್ವಹಿಸುತ್ತಿದ್ದು, ಡಯಾಲಿಸಿಸ್ ಕೇಂದ್ರದಲ್ಲಿ ನಿರಂತರವಾಗಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿ ದಿನ ಸುಮಾರು 15 ರಿಂದ 20 ರೋಗಿಗಳು ಡಯಾಲಿಸಿಸ್‌ಗೆ […]
ಅಮೇರಿಕಾಗೆ ಬರುವ ವಿಶೇಷ ಆಹ್ವಾನಿತರಿಗೆ ರುಚಿ ರುಚಿ ಅಡುಗೆ ಬಡಿಸುವ ಆಲೂರು ಆನಂದ ಪೂಜಾರಿ ಎಂಬ ಹೆಮ್ಮೆಯ ಕನ್ನಡಿಗ
ವಾಷಿಂಗ್ಟನ್ ಡಿಸಿ: ಕಳೆದ ಮೂರು ದಶಕಗಳಿಂದ ಅಮೇರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ನೆಲೆಸಿರುವ ಬೈಂದೂರು ಮೂಲದ ಅನಿವಾಸಿ ಭಾರತೀಯ ಆಲೂರು ಆನಂದ್ ಪೂಜಾರಿ ಅವರು ವುಡ್‌ಲ್ಯಾಂಡ್ಸ್, ಜ್ಯುವೆಲ್ ಆಫ್ ಇಂಡಿಯಾ ಮತ್ತು ಐ.ಬಿ.ಎಚ್ ನಂತಹ ಸಂಸ್ಥೆಗಳ ಪ್ರವರ್ತಕ. ವಾಷಿಂಗ್ಟನ್ ಡಿಸಿಯಲ್ಲಿರುವ ‘ವುಡ್‌ಲ್ಯಾಂಡ್ಸ್ ರೆಸ್ಟೊರೆಂಟ್’ ಸಸ್ಯಾಹಾರಿ ರೆಸ್ಟೋರೆಂಟ್ ರುಚಿಯನ್ನು ಸವಿಯದ ಭಾರತೀಯ ವಿವಿಐಪಿಗಳು ತೀರಾ ಕಡಿಮೆ. ಪ್ರಧಾನಮಂತ್ರಿ ನರೇಂದ್ರ ಮೋದಿಯಾಗಿರಲಿ ಅಥವಾ ಇನ್ನಾವ ರಾಜತಾಂತ್ರಿಕ ಅಧಿಕಾರಿಯೇ ಆಗಿರಲಿ ಇವರೆಲ್ಲರಿಗೂ ರುಚಿರುಚಿಯಾದ ಸಸ್ಯಾಹಾರಿ ಸವಿ ಭೋಜನ ತಯಾರಾಗುವುದು ಆನಂದ ಪೂಜಾರಿಯವರ ಹೋಟಲಿನಲ್ಲಿಯೆ. […]
ಒಬಿಸಿ ಮೋರ್ಚಾ ವತಿಯಿಂದ ಕುಯಿಲಾಡಿ ಸುರೇಶ್ ನಾಯಕ್ ಅವರಿಗೆ ಸನ್ಮಾನ
ಉಡುಪಿ: ಕಳೆದ ಮೂರು ವರ್ಷಗಳಿಂದ ಜಿಲ್ಲೆಯಾದ್ಯಂತ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟನಾತ್ಮಕವಾಗಿ ಸದೃಢಗೊಳಿಸುವ ಜೊತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಘಟಿತ ಪ್ರಯತ್ನದ ಮೂಲಕ ಉಡುಪಿ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಜಿಲ್ಲೆಯ ನೇತೃತ್ವ ವಹಿಸಿರುವ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರನ್ನು ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಜಿಲ್ಲಾ ಕಛೇರಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಎ. ಸುವರ್ಣ, […]
ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಿ; ಸ್ವಸ್ಥ ಸುಂದರ ಜೀವನ ನಿಮ್ಮದಾಗಿಸಿ
ಮನುಷ್ಯನ ಮೆದುಳು ಅತ್ಯುತ್ತಮ ಹೊಂದಾಣಿಕೆಯ ಸಾಮರ್ಥ್ಯವನ್ನು ಹೊಂದಿದೆ. ಆದರೆ ಕೆಲವೊಂದು ಕಾರಣಗಳಿಂದ ಮನುಷ್ಯನ ಮೆದುಳಿನ ಕಾರ್ಯಕ್ಷಮತೆ ಕುಂಠಿತವಾಗುತ್ತದೆ. ನ್ಯೂರೋಪ್ಲ್ಯಾಸ್ಟಿಸಿಟಿಯು ರಚನಾತ್ಮಕವಾಗಿ ಮತ್ತು ಕ್ರಿಯಾತ್ಮಕವಾಗಿ ಬದಲಾಯಿಸುವ ಮತ್ತು ಹೊಂದಿಕೊಳ್ಳುವ ನಮ್ಮ ಮೆದುಳಿನ ಗಮನಾರ್ಹ ಸಾಮರ್ಥ್ಯವಾಗಿದೆ. ಈ ಅಸಾಧಾರಣ ಲಕ್ಷಣವು ಹೊಸ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು, ಗಾಯಗಳಿಂದ ಗುಣವಾಗಲು ಮತ್ತು ಬದಲಾವಣೆಗಳಿಗೆ ಹೊಂದಿಕೊಳ್ಳಲು ನಮಗೆ ಸಹಾಯಮಾಡುತ್ತದೆ. ವಿಶೇಷವಾಗಿ ಕಲಿಕೆ ಅಥವಾ ಅನುಭವಕ್ಕೆ ಪ್ರತಿಕ್ರಿಯೆಯಾಗಿ ಅಥವಾ ಗಾಯದ ನಂತರ ಸಿನಾಪ್ಟಿಕ್ ಸಂಪರ್ಕಗಳನ್ನು ರೂಪಿಸುವ ಮತ್ತು ಮೆದುಳಿನ ಸಾಮರ್ಥ್ಯವನ್ನು ಮರುಸಂಘಟಿಸುವ ಕ್ರಿಯೆಗೆ ನ್ಯೂರೋಪ್ಲ್ಯಾಸ್ಟಿಸಿಟಿ […]
ವಿದ್ವಾನ್ ರಘುಪತಿ ಭಟ್ ಅವರ ‘ನಾನು ಮತ್ತು ನಾನು’ ಕವನ ಸಂಕಲನ ಬಿಡುಗಡೆ
ಉಡುಪಿ: ವಿದ್ವಾನ್ ರಘುಪತಿ ಭಟ್ ಅವರ ನಾನು ಮತ್ತು ನಾನು ಎಂಬ ಕವನ ಸಂಕಲನವನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ತಮ್ಮ ಅಮೃತ ಹಸ್ತದಿಂದ ಶನಿವಾರ ಸಂಜೆ ಮಠದ ಚಾವಡಿಯಲ್ಲಿ ಬಿಡುಗಡೆಗೊಳಿಸಿದರು. ಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ರಘಪತಿ ಭಟ್, ಮಠದ ವಿದ್ಯಾರ್ಥಿಯಾಗಿದ್ದು ಇದೀಗ ಸಾಹಿತ್ಯ ಲೋಕಕ್ಕೆ ದ್ವಿತೀಯ ಹೊತ್ತಗೆ ‘ನಾನು ಮತ್ತು ನಾನು’ ಕವನ ಸಂಕಲ ಕೃತಿಯನ್ನು ಬಿಡುಗಡೆಗೊಳಿಸಿ ಸಂತಸವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕವಿ ವಿದ್ವಾನ್ ರಘುಪತಿ ಭಟ್, ಎಕ್ಸ್ ಪರ್ಟ್ […]