ಕ್ರಿಯೇಟಿವ್ ಕಾಲೇಜಿನ ಉಪನ್ಯಾಸಕ ಲೇಖಕ ಬಿ ರಾಘವೇಂದ್ರ ರಾವ್ ಅವರ 56ನೇ ಕೃತಿ “ಹಾವಿನ ಮನೆ” ಬಿಡುಗಡೆ
ರಾಘವೇಂದ್ರ ರಾವ್ ಅವರು ಈಗಾಗಲೇ 55 ಕೃತಿಗಳನ್ನು ಪೂರೈಸಿದ್ದು, 56ನೇ ಕೃತಿ “ಹಾವಿನ ಮನೆ” ಪತ್ತೆದಾರಿ ಕಾದಂಬರಿ ಇತ್ತೀಚೆಗೆ ಬೆಂಗಳೂರಿನ ರಮಣಶ್ರೀ ಹೋಟೇಲಿನಲ್ಲಿ ವೀರಲೋಕ ಪ್ರಕಾಶನದ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮದಲ್ಲಿ ಶಿವಾಜಿ ಸುರತ್ಕಲ್ ಚಲನಚಿತ್ರ ಖ್ಯಾತಿಯ ನಿರ್ದೇಶಕರಾದ ಆಕಾಶ್ ಶ್ರೀವತ್ಸ ಅವರು ಬಿಡುಗಡೆಗೊಳಿಸಿದರು. ಕನ್ನಡ ಸಾಹಿತ್ಯಕ್ಕೆ ಪತ್ತೆದಾರಿ ಸಾಹಿತ್ಯದ ಅಗತ್ಯವಿದೆ. ಅದಕ್ಕೆ ಬಹುದೊಡ್ಡ ಓದುಗ ವರ್ಗವಿದೆ. ಈ ನಿಟ್ಟಿನಲ್ಲಿ ರಾಘವೇಂದ್ರ ರಾವ್ (ಅನು ಬೆಳ್ಳೆ) ಅವರ ʼಹಾವಿನ ಮನೆʼ ಮಹತ್ವದ ಕೃತಿಯಾಗಬಲ್ಲದು ಎಂದು ಅಭಿಪ್ರಾಯಪಟ್ಟರು. […]
ವೆಂಡೀಸ್ ಸೀಕ್ರೆಟ್ಸ್ ನಲ್ಲಿ ಮಾನ್ಸೂನ್ ಸೇಲ್: ಮಹಿಳೆಯರ ನೈಟ್ ವೇರ್ ಮೇಲೆ 20% ರಿಯಾಯತಿ!!
ಮಣಿಪಾಲ: ಸಿಂಡಿಕೇಟ್ ಸರ್ಕಲ್ ಬಳಿಯಿರುವ ಸಾಯಿ ಕೃಪಾ ಅಪಾರ್ಟ್ಮೆಂಟ್ನಲ್ಲಿರುವ ಮಹಿಳೆಯರ ಒಳ ಉಡುಪುಗಳಿಗೆ ಹೆಸರುವಾಸಿಯಾಗಿರುವ ವೆಂಡೀಸ್ ಸೀಕ್ರೆಟ್ಸ್ ನಲ್ಲಿ ಮಾನ್ಸೂನ್ ಸೇಲ್. ನೈಟ್ ವೇರ್ ಮತ್ತು ಕಾಟನ್ ಇನ್ನರ್ ವೇರ್ ಗಳ ಮೇಲೆ 20% ರಿಯಾಯತಿ, 1000 ರೂ ಮೇಲ್ಪಟ್ಟ ಬಿಲ್ ಗಳಿಗೆ ಹೆಚ್ಚುವರಿ 5 % ರಿಯಾಯತಿ ಲಭ್ಯ. ಆಫರ್ ಕೇವಲ ಜುಲೈ 31 ರ ವರೆಗೆ ಮಾತ್ರ ವಿಳಾಸ: 16 ಸಾಯಿ ಕೃಪಾ ಅಪಾರ್ಟ್ಮೆಂಟ್, ಸಿಂಡಿಕೇಟ್ ಸರ್ಕಲ್, ಮಣಿಪಾಲ ದೂರವಾಣಿ: 9731651714
ಅನಂತಪದ್ಮನಾಭ ದೇವಸ್ಥಾನದಲ್ಲಿ ಭಾಗವತ ಸಪ್ತಾಹ ಕಾರ್ಯಕ್ರಮ
ಪಣಿಯಾಡಿ: ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸೇವಾ ರೂಪವಾಗಿ ನಡೆಯುತ್ತಿರುವ ಶಾಕಾಲ ಋಕ್ ಸಂಹಿತಾ ಯಾಗ ಹಾಗೂ ಭಾಗವತ ಸಪ್ತಾಹ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಭಾಗವಹಿಸಿದರು. ಭಾಗವತ ಪುರಾಣವು ಎಲ್ಲಾ ಪುರಾಣಗಳ ರಾಜ ಮತ್ತು ಸಾರವಾಗಿದೆ. ಪುರಾಣ ಎಂದರೆ ಪುರಾತನ ಕಾಲದಲ್ಲಿ ನಡೆದ ಹಳೆಯ ವಿಷಯಗಳನ್ನು ಹೇಳುವುದು ಎಂದರ್ಥ. ಇದು ಅಪ್ರಸ್ತುತ ಎಂದು ಜನರು ತಿಳಿದಿರುತ್ತಾರೆ. ಆದರೆ ಪುರಾಣವು ಅಂದೂ ಇಂದೂ ಹೊಸತು ಮತ್ತು ಸಾರ್ವಕಾಲಿಕವಾಗಿ ಪ್ರಸ್ತುತವಾಗಿರುವ ವಿಷಯವಾಗಿದೆ. ಭಗವಂತನ ಅವತಾರಗಳ ವರ್ಣನೆಯನ್ನು ತಿಳಿಸುವ […]
ಸುಧಾಮೂರ್ತಿಯವರ ‘ಗ್ರ್ಯಾಂಡ್ ಮಾ’ಸ್ ಬ್ಯಾಗ್ ಆಫ್ ಸ್ಟೋರೀಸ್’ ಪುಸ್ತಕಕ್ಕೆ ಬಾಲ ಸಾಹಿತ್ಯ ಪುರಸ್ಕಾರದ ಗರಿ
ನವದೆಹಲಿ: ಆಡು ಮುಟ್ಟದ ಸೊಪ್ಪಿಲ್ಲ, ಸುಧಾ ಮೂರ್ತಿಯವರು ಕೈಯಾಡಿಸದ ಕ್ಷೇತ್ರವಿಲ್ಲ. ಉದ್ಯೋಗ, ಉದ್ಯಮ, ಸಮಾಜ ಸೇವೆ, ಸಾಹಿತ್ಯ ಮುಂತಾದ ಹತ್ತು ಹಲವು ಆಯಾಮಗಳಲ್ಲಿ ತನ್ನದೇ ಛಾಪು ಮೂಡಿಸಿರುವ ಸುಧಾಮೂರ್ತಿ ಒಳ್ಳೆಯ ಬರಹಗಾರ್ತಿಯೂ ಹೌದು. ಇದೀಗ ಸುಧಾಮೂರ್ತಿಯವರರು ಬರೆದಿರುವ ಮಕ್ಕಳ ಪುಸ್ತಕಕ್ಕೆ ಪ್ರಶಸ್ತಿಯೊಂದು ಅರಸಿ ಬಂದಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ 2023ರ ಪ್ರಶಸ್ತಿಗೆ ಸುಧಾಮೂರ್ತಿಯವರನ್ನು ಆಯ್ಕೆ ಮಾಡಲಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ವರ್ಷದ ಬಾಲ ಸಾಹಿತ್ಯ ಪುರಸ್ಕಾರ ಹಾಗೂ ಯುವ ಪುರಸ್ಕಾರ ವಿಜೇತರ […]
ಯಶ್ ಪಾಲ್ ಸುವರ್ಣ ಅವರಿಗೆ ಜೀವ ಬೆದರಿಕೆ ಒಡ್ದಿದ ಪ್ರಕರಣ: ಎರಡನೇ ಆರೋಪಿಯೂ ಪೊಲೀಸ್ ಬಲೆಗೆ
ಉಡುಪಿ: ಶಾಸಕ ಯಶ್ ಪಾಲ್ ಸುವರ್ಣ ಅವರಿಗೆ ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕಾಪು ಪೊಲೀಸರು ಜೂ. 22ರಂದು ಮುಂಬಯಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಬಜ್ಪೆ ನಿವಾಸಿ ಮಹಮ್ಮದ್ ಆಸಿಫ್ (32) ಬಂಧಿತ ಆರೋಪಿ. ಕಳೆದ ವರ್ಷ ಶಾಲೆಗಳಲ್ಲಿ ಹಿಜಾಬ್ ನಿಷೇಧ ಕುರಿತು ವಿವಾದವಾಗಿದ್ದ ಸಂದರ್ಭದಲ್ಲಿ ಯಶ್ ಪಾಲ್ ಸುವರ್ಣ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಜೀವ ಬೆದರಿಕೆಯೊಡ್ಡಿದ್ದರು. ಈ ಬಗ್ಗೆ ಆರೋಪಿಗಳನ್ನು ಬಂಧಿಸುವಂತೆ ಕಾಪು ಕ್ಷೇತ್ರ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು […]