ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್ 2 ಸಿನಿಮಾ ಹಾಡು ಬಳಕೆ ಆರೋಪ: ಹೈಕೋರ್ಟ್ ವತಿಯಿಂದ ತೀರ್ಪು ತಡೆ
ಬೆಂಗಳೂರು : ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್ 2 ಸಿನಿಮಾದ ಹಾಡು ಬಳಕೆ ಮಾಡಿಕೊಂಡು ಹಕ್ಕುಸ್ವಾಮ್ಯ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತಿತರರ ವಿರುದ್ಧ ದಾಖಲಾಗಿದ್ದ ಪ್ರಕರಣದ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗು ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ತಮ್ಮ ವಿರುದ್ಧ ದಾಖಲಾಗಿದ್ದ […]
ಪಿಡಿಎಫ್ ಓದಿ ಹೇಳಲಿರುವ Google Chrome: ಹೊಸ ಅಪ್ಡೇಟ್ ಇಮೇಜ್ ಟು ಟೆಕ್ಸ್ಟ್ ಫೀಚರ್ ಕೂಡ ಶೀಘ್ರ ಲಭ್ಯ
ಸ್ಯಾನ್ ಫ್ರಾನ್ಸಿಸ್ಕೋ :ಕ್ರೋಮ್ ಆಪರೇಟಿಂಗ್ ಸಿಸ್ಟಮ್ ಬಳಸುವಾಗ Chrome ಬ್ರೌಸರ್ನಲ್ಲಿ ಪಿಡಿಎಫ್ ಡಾಕ್ಯುಮೆಂಟ್ಗಳನ್ನು ಪಠ್ಯವಾಗಿ ಪರಿವರ್ತಿಸುವ ವೈಶಿಷ್ಟ್ಯಗಳನ್ನು ಕಂಪನಿ ಸೇರಿಸುತ್ತಿದೆ. ಸ್ಕ್ರೀನ್ ರೀಡರ್ ಮೇಲೆ ಅವಲಂಬಿತವಾಗಿರುವ ಅಂಧರು ಅಥವಾ ಕಡಿಮೆ ದೃಷ್ಟಿ ಹೊಂದಿರುವ ಜನ ಪಿಡಿಎಫ್ ಡಾಕ್ಯುಮೆಂಟ್ಗಳನ್ನು ಓದಲು ಅನುಕೂಲವಾಗುವಂತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಕ್ರೋಮ್ ಬ್ರೌಸರ್ ಬಿಲ್ಟ್ ಇನ್ ವೈಶಿಷ್ಟ್ಯವನ್ನು ತಯಾರಿಸಲಿದೆ ಎಂದು ಗೂಗಲ್ ಹೇಳಿದೆ.ದೃಷ್ಟಿಮಾಂದ್ಯರು ಪಿಡಿಎಫ್ ಡಾಕ್ಯುಮೆಂಟ್ಗಳನ್ನು ಓದಲು ಸಾಧ್ಯವಾಗುವಂತೆ ಗೂಗಲ್ ಕ್ರೋಮ್ ಬ್ರೌಸರ್ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಅಂದರೆ ಸ್ಕ್ರೀನ್ ರೀಡರ್ ಬಳಕೆದಾರರು […]
ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ನಿರ್ಧಾರ ತೆಗೆದುಕೊಂಡಿದೆ ನಾಸಾ
ಚೆನ್ನೈ : ಭಾರತೀಯ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಅಮೆರಿಕ ನಿರ್ಧರಿಸಿದೆ.1984ರಲ್ಲಿ ರಷ್ಯಾ ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. 1984ರಲ್ಲಿ ರಷ್ಯಾ ಭಾರತದ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಅದರ ನಂತರ ಈಗ ಅಮೆರಿಕ ಅಂಥದೇ ಯೋಜನೆ ರೂಪಿಸಿರುವುದು ಗಮನಾರ್ಹ.ಈಗ ಅದೇ ಹಾದಿಯಲ್ಲಿ ಸಾಗಿರುವ ಅಮೆರಿಕ ಭಾರತೀಯ ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ನಿರ್ಧರಿಸಿದೆ. ಆದರೆ ಈ ಬಾರಿ ಅಮೆರಿಕವು ಮುಂದಿನ ವರ್ಷ ಭಾರತದ ಗಗನಯಾನಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಿದೆ. ಭಾರತದ ಸ್ವಂತ ಬಾಹ್ಯಾಕಾಶ ಕಾರ್ಯ ಯೋಜನೆಯಾದ […]
ಏಕದಿನ, ಟೆಸ್ಟ್ಗೆ ಟೀಂ ಇಂಡಿಯಾ ಪ್ರಕಟ- ಜೈಸ್ವಾಲ್, ರುತುರಾಜ್ ಇನ್, ಪೂಜಾರಾ ಔಟ್
ಜುಲೈ 12ರಿಂದ ಡೊಮಿನಿಕಾದಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್ ಮತ್ತು ಮುಖೇಶ್ ಕುಮಾರ್ ಅವರಿಗೆ ಇದೇ ಮೊದಲ ಬಾರಿಗೆ ಅವಕಾಶ ದೊರೆತಿದೆ.ಭಾರತದ 2023-25ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರವಾಸದ ಆರಂಭಿಕ ಪಂದ್ಯಗಳಿಗೆ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. 18 ತಿಂಗಳ ನಂತರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅಜಿಂಕ್ಯ ರಹಾನೆ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅವರಿಗೆ ಉಪನಾಯಕನ […]
ಜೂ. 27ರಂದು ಕೆಂಪೇಗೌಡ ಜಯಂತಿ ರಾಜ್ಯದ ಎಲ್ಲ ತಾಲ್ಲೂಕುಗಳಲ್ಲೂಆಚರಣೆ : ಡಿ.ಕೆ.ಶಿವಕುಮಾರ್
ಬೆಂಗಳೂರು: ವಿಧಾನಸೌಧದಲ್ಲಿ ಗುರುವಾರ ಕೆಂಪೇಗೌಡ ಜಯಂತಿ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದ ಎಲ್ಲ ತಾಲ್ಲೂಕುಗಳಲ್ಲೂ ಜೂನ್ 27ರಂದು ಕೆಂಪೇಗೌಡ ಜಯಂತಿ ಆಚರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಪ್ರಶಸ್ತಿ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಚಿವ ಬಿ.ಎಲ್.ಶಂಕರ್ ನೇತೃತ್ವದ ಸಮಿತಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಿದೆ ಎಂದು ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ಜೂನ್ 27ರ ಬೆಳೆಗ್ಗೆ 9ಕ್ಕೆ ಕೆಂಪೇಗೌಡರ ನಾಲ್ಕು ಗೋಪುರಗಳ ಬಳಿ ಹಾಗೂ ಮಾಗಡಿಯಲ್ಲಿ ಜ್ಯೋತಿ ಯಾತ್ರೆಗೆ ಚಾಲನೆ ನೀಡಲಾಗುವುದು. ಈ […]