ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ನಿರ್ಧಾರ ತೆಗೆದುಕೊಂಡಿದೆ ನಾಸಾ

ಚೆನ್ನೈ : ಭಾರತೀಯ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಅಮೆರಿಕ ನಿರ್ಧರಿಸಿದೆ.1984ರಲ್ಲಿ ರಷ್ಯಾ ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. 1984ರಲ್ಲಿ ರಷ್ಯಾ ಭಾರತದ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಅದರ ನಂತರ ಈಗ ಅಮೆರಿಕ ಅಂಥದೇ ಯೋಜನೆ ರೂಪಿಸಿರುವುದು ಗಮನಾರ್ಹ.ಈಗ ಅದೇ ಹಾದಿಯಲ್ಲಿ ಸಾಗಿರುವ ಅಮೆರಿಕ ಭಾರತೀಯ ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ನಿರ್ಧರಿಸಿದೆ.

ಆದರೆ ಈ ಬಾರಿ ಅಮೆರಿಕವು ಮುಂದಿನ ವರ್ಷ ಭಾರತದ ಗಗನಯಾನಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಿದೆ. ಭಾರತದ ಸ್ವಂತ ಬಾಹ್ಯಾಕಾಶ ಕಾರ್ಯ ಯೋಜನೆಯಾದ ಗಗನಯಾನ್ ಗೂ ಬಹಳ ಮುಂಚೆಯೇ ಭಾರತೀಯ ಗಗನಯಾನಿಗಳು ಬಾಹ್ಯಾಕಾಶಕ್ಕೆ ಹಾರಲಿದ್ದಾರೆ.

ಅಮೆರಿಕದ ಶ್ವೇತಭವನದ ಜಂಟಿ ಹೇಳಿಕೆಯ ಪ್ರಕಾರ, ಯುಎಸ್ ಅಧ್ಯಕ್ಷ ಜೋ ಬಿಡನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಬಾಹ್ಯಾಕಾಶ ವಲಯದಲ್ಲಿ ಎಲ್ಲ ರೀತಿಯ ಸಹಕಾರಕ್ಕಾಗಿ ಹೊಸ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ. ಭೂಮಿ ಮತ್ತು ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನಗಳಲ್ಲಿ ನಮ್ಮ ಬೆಳೆಯುತ್ತಿರುವ ಸಹಕಾರವನ್ನು ಇಬ್ಬರೂ ನಾಯಕರು ಶ್ಲಾಘಿಸಿದ್ದಾರೆ ಎಂದು ಪ್ರಕಟಣೆ ಹೇಳಿದೆ.

“2023 ರ ಅಂತ್ಯದ ವೇಳೆಗೆ ಮಾನವ ಬಾಹ್ಯಾಕಾಶ ಯಾನದ ಸಹಕಾರಕ್ಕಾಗಿ ಕಾರ್ಯತಂತ್ರದ ಚೌಕಟ್ಟನ್ನು ಅಭಿವೃದ್ಧಿಪಡಿಸಲು ನಾಸಾ (ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ) ಮತ್ತು ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಎರಡೂ ಸಂಸ್ಥೆಗಳ ಜಂಟಿ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ” ಎಂದು ಹೇಳಿಕೆ ತಿಳಿಸಿದೆ.

ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರು 1984 ರಲ್ಲಿ ರಷ್ಯಾದ ರಾಕೆಟ್ನಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದರು ಎಂಬುದನ್ನು ಸ್ಮರಿಸಬಹುದಾಗಿದೆ. ಆದರೆ ಈಗ ಭಾರತದಿಂದ ಯಾರು ಅಮೆರಿಕದ ರಾಕೆಟ್ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. ಭಾರತದ ಗಗನ ಯಾನ್ ಕಾರ್ಯಕ್ರಮದ ಭಾಗವಾಗಿ ಈಗಾಗಲೇ ನಾಲ್ವರು ಭಾರತೀಯ ವಾಯುಪಡೆ (ಐಎಎಫ್) ಅಧಿಕಾರಿಗಳು ರಷ್ಯಾದಲ್ಲಿ ಗಗನಯಾತ್ರಿ ತರಬೇತಿ ಪಡೆದಿದ್ದಾರೆ.

ತರಬೇತಿ ಪಡೆದಿರುವ ಇದೇ ನಾಲ್ವರನ್ನು ಯುಎಸ್-ಇಂಡೋ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಪರಿಗಣಿಸಲಾಗುವುದಾ ಅಥವಾ ಬೇರೆ ಯಾರನ್ನಾದರೂ ಪರಿಗಣಿಸಲಾಗಿದೆಯೇ ಎಂಬುದು ತಿಳಿದಿಲ್ಲ.

ಎಲ್ಲಾ ಮಾನವಕುಲದ ಪ್ರಯೋಜನಕ್ಕಾಗಿ ಬಾಹ್ಯಾಕಾಶ ಪರಿಶೋಧನೆಯ ಸಾಮಾನ್ಯ ದೃಷ್ಟಿಯನ್ನು ಮುನ್ನಡೆಸುವ ಆರ್ಟೆಮಿಸ್ ಒಪ್ಪಂದಗಳಿಗೆ ಭಾರತದ ಸಹಿ ಹಾಕುವಿಕೆಯನ್ನು ಅಧ್ಯಕ್ಷ ಬಿಡೆನ್ ಶ್ಲಾಘಿಸಿದ್ದಾರೆ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.

ಭೂಮಿಯ ಮೇಲ್ಮೈಯಿಂದ ಸುಮಾರು 240 ಮೈಲುಗಳಷ್ಟು ದೂರದಲ್ಲಿ ಗಂಟೆಗೆ 17,500 ಮೈಲುಗಳಷ್ಟು ವೇಗದಲ್ಲಿ ಸುತ್ತುತ್ತಿರುವ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು (ISS) ಮಾನವರು ಬಾಹ್ಯಾಕಾಶದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿಯಲು ಸಹಾಯ ಮಾಡುವ ವಿಜ್ಞಾನ ಪ್ರಯೋಗಾಲಯವಾಗಿದೆ. ಬಹುಮುಖ್ಯವಾಗಿ, ಬಾಹ್ಯಾಕಾಶ ಪರಿಸರವು ಜೀವಶಾಸ್ತ್ರ ಮತ್ತು ಮಾನವ ದೇಹಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಹಿಡಿಯುವುದು ಇದರ ಉದ್ದೇಶವಾಗಿದೆ.

ಇದರ ಹೊರತಾಗಿ, ಇನ್ನೊಂದು ಇಂಡೋ-ಯುಎಸ್ ಜಂಟಿ ಭೂ ವೀಕ್ಷಣಾ ಉಪಗ್ರಹ ಬಾಹ್ಯಾಕಾಶ ಕಾರ್ಯಕ್ರಮವಾಗಿರುವ NASA-ISRO ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ಅನ್ನು ಮುಂದಿನ ವರ್ಷ ಆಂಧ್ರಪ್ರದೇಶದ ಶ್ರೀಹರಿಕೋಟಾ ರಾಕೆಟ್ ಬಂದರಿನಿಂದ ಭಾರತದ ರಾಕೆಟ್ ಮೂಲಕ ಕಕ್ಷೆಗೆ ಉಡಾವಣೆ ಮಾಡಲಾಗುವುದು. NISAR ಎಂಬುದು NASA ಮತ್ತು ISRO ಜಂಟಿಯಾಗಿ ನಿರ್ಮಿಸಿದ ಭೂ ವೀಕ್ಷಣಾ ಉಪಗ್ರಹವಾಗಿದೆ. ಈ ಉಪಗ್ರಹ ಈಗಾಗಲೇ ಅಮೆರಿಕದಿಂದ ಭಾರತಕ್ಕೆ ತಲುಪಿದೆ