ಮಹಾರಾಷ್ಟ್ರ-ಗೋವಾ ಮುಖ್ಯಮಂತ್ರಿಗಳ ಮಹದಾಯಿಗಾಗಿ ಕರ್ನಾಟಕದ ವಿರುದ್ಧ ಹೋರಾಟಕ್ಕೆ ಸಿದ್ಧತೆ
ಬೆಳಗಾವಿ:ಮಹಾರಾಷ್ಟ್ರದ ತಿಲಾರಿ ಅಣೆಕಟ್ಟು ಯೋಜನೆ ಸಂಬಂಧ ಶನಿವಾರ ಮುಂಬೈನಲ್ಲಿ ಅಂತಾರಾಜ್ಯ ನಿಯಂತ್ರಣ ಮಂಡಳಿಯ ಸಭೆ ನಡೆದಿದೆ. ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಗೋವಾ ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ಭಾಗಿಯಾಗಿದ್ದರು ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಹಾಗೂ ಗೋವಾ ರಾಜ್ಯಗಳ ನಡುವೆ ದಶಕಗಳಿಂದ ವ್ಯಾಜ್ಯವಿದೆ. ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕದ ವಿರುದ್ಧ ಹೋರಾಡಲು ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳು […]
ಮಹಿಳೆಯರೇ ಮುಂಚೂಣಿಯಲ್ಲ: ವಿಶ್ವದ ಅತಿದೊಡ್ಡ ಮೊಬೈಲ್ ಗೇಮಿಂಗ್ ರಾಷ್ಟ್ರ ಭಾರತ
ನವದೆಹಲಿ: ಒಂದು ಕಾಲದಲ್ಲಿ ನೋಕಿಯಾ ಫೋನ್ಗಳಲ್ಲಿ ಸ್ನೇಕ್ ಗೇಮ್ ಆಡುವುದೇ ಒಂದು ಅದ್ಭುತ ಸಂಗತಿಯಾಗಿತ್ತು. ಅಂದಿನ ಆ ಸರಳವಾದ ಸ್ನೇಕ್ ಗೇಮ್ ಇವತ್ತು ಯಾರಿಗೂ ಇಷ್ಟವಿಲ್ಲ. ಮೊಬೈಲ್ ಗೇಮಿಂಗ್ ಎಂಬುದು ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ದೂರ ಕ್ರಮಿಸಿದೆ. ಇವತ್ತು ಸ್ಮಾರ್ಟ್ಫೋನ್ಗಳಲ್ಲಿ ಆಡುವ ಗೇಮ್ಗಳ ಜಗತ್ತೇ ಬೇರೆಯಾಗಿದೆ. ಮೊಬೈಲ್ ಸಾಧನಗಳು ಎಷ್ಟು ಅತ್ಯಾಧುನಿಕವಾಗಿವೆಯೋ ಗೇಮ್ಗಳು ಸಹ ಅಷ್ಟೇ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿವೆ. ಭಾರತವು ವಿಶ್ವದ ಅತಿದೊಡ್ಡ ಮೊಬೈಲ್ ಗೇಮಿಂಗ್ ರಾಷ್ಟ್ರವಾಗಿ ಹೊರಹೊಮ್ಮಿದೆ. ದೇಶದಲ್ಲಿ ಮೊಬೈಲ್ ಗೇಮಿಂಗ್ ಮಾರುಕಟ್ಟೆ […]
ಮಳೆ ಅನಾಹುತ ತಡೆಯಲು ಸಿದ್ಧ : ಕಲ್ಲು ಕ್ವಾರಿಯಲ್ಲಿ ಕೂರ್ಗ್ ಅಡ್ವೆಂಚರ್ ಟೀಮ್ಗೆ ಕೊಡಗು ಜಿಲ್ಲಾಡಳಿತದಿಂದ ತರಬೇತಿ
ಮಡಿಕೇರಿ (ಕೊಡಗು): ಮಳೆ ಅನಾಹುತ ತಡೆಯಲು ಕೊಡಗು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.ಮಳೆಗಾಲ ಬಂತೆಂದರೆ ಸಾಕು ಕೊಡಗಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿ ಬಿಡುತ್ತದೆ. ಎಲ್ಲಿ, ಏನು ಅನಾಹುತವಾಗಿ ಬಿಡುತ್ತದೋ? ಎಂಬ ಭೀತಿ ಕಾಡುತ್ತದೆ. ಹೀಗಾಗಿ ಜಿಲ್ಲಾಡಳಿತ ಮಳೆಗಾಲದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳತ್ತು ನಿಗಾ ವಹಿಸುತ್ತಿದೆ. ಈ ಬಾರಿ 40 ಪ್ರದೇಶಗಳಲ್ಲಿ ಭೂಕುಸಿತ, 45 ಪ್ರದೇಶಗಳಲ್ಲಿ ಪ್ರವಾಹ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಮಳೆ ಅವಾಂತರಗಳಿಂದ ಜನ ಜಾನುವಾರುಗಳನ್ನು ರಕ್ಷಣೆ ಮಾಡಲು ಈಗಾಗಲೇ ಕಠಿಣ ತರಬೇತಿ ನೀಡಲಾಗುತ್ತಿದೆ. ಕಳೆದ ಐದು […]
ಮೂವರು ಹೆಣ್ಣುಮಕ್ಕಳಿಗೆ ಬೀದಿ ಬದಿ ಟೀ ಮಾರಿ ಬದುಕಿನ ‘ಕುಸ್ತಿ’ ಹೇಳಿಕೊಟ್ಟ ಈ ಅಪ್ಪ
ಸೂರತ್(ಗುಜರಾತ್): ‘Mother teaches to love Father teaches to survive’ ಎಂಬ ಇಂಗ್ಲಿಷಿನ ಈ ಒಕ್ಕಣೆ ಇಂದಿನ ವಿಶ್ವ ಅಪ್ಪಂದಿರ ದಿನಕ್ಕೆ ನಿಜ ಅರ್ಥ ಕಲ್ಪಿಸುತ್ತದೆ.ಗುಜರಾತ್ನ ವ್ಯಕ್ತಿಯೊಬ್ಬರು ಬೀದಿ ಬದಿ ಟೀ ಮಾರಿ ತನ್ನ ಮೂವರು ಪುತ್ರಿಯರನ್ನು ಕುಸ್ತಿಪಟುಗಳನ್ನಾಗಿ ರೂಪಿಸಿದ್ದಾರೆ. ಇಂತಹ ವಿಶೇಷ ವ್ಯಕ್ತಿಗೆ ಇಂದಿನ ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು… ಮಕ್ಕಳ ಅಭ್ಯುದಯವನ್ನೇ ಜೀವನದ ಕನಸು ಮಾಡಿಕೊಂಡಿರುವ ಅಪ್ಪ, ಅವರ ಆಶೋತ್ತರಗಳಿಗೆ ಸೂರು ನೀಡುತ್ತಾನೆ. ಗುಜರಾತ್ನ ಈ ವ್ಯಕ್ತಿ ಕೂಡ ಅದ್ಯಾರಿಗೂ ಕಮ್ಮಿ ಇಲ್ಲ. […]
ತ್ರಿಶಾ ವಿದ್ಯಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಡ್ಮಿಂಟನ್ ಪಂದ್ಯಾವಳಿ
ಉಡುಪಿ: ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ವಿಕಸನದ ದೃಷ್ಟಿಯಿಂದ ತ್ರಿಶಾ ಸಂಸ್ಥೆಯಿಂದ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಅಜ್ಜರಕಾಡು ಒಳಾಂಗಣ ಮೈದಾನದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ತ್ರಿಶಾ ಸಂಸ್ಥೆಯ ಸಂಸ್ಥಾಪಕ ಸಿ.ಎ ಗೋಪಾಲಕೃಷ್ಣ ಭಟ್ ಮಾತನಾಡಿ, ಆರೋಗ್ಯವಂತ ದೇಹದಲ್ಲಿ ಮಾತ್ರ ಉತ್ತಮ ಮನಸ್ಥಿತಿ ಹಾಗೂ ಬುದ್ಧಿಶಕ್ತಿ ಇರಲು ಸಾಧ್ಯ. ಕ್ರೀಡೆ ಆರೋಗ್ಯವಂತ ದೇಹವನ್ನು, ಮನಸ್ಸಿಗೆ ಉಲ್ಲಾಸ ಎರಡನ್ನೂ ಕೊಡುತ್ತದೆ. ಆದ್ದರಿಂದ ಕ್ರೀಡೆ ನಮ್ಮ ಜೀವನದಲ್ಲಿ ಅತ್ಯಂತ ಮಹತ್ವವಾದದ್ದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತ್ರಿಶಾ ವಿದ್ಯಾ ಕಾಲೇಜು ಕಟಪಾಡಿ […]