ರಾಮ್ಚರಣ್ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ : ಪ್ರಜ್ವಲ ಫೌಂಡೇಶನ್ ನಿಂದ ತೊಟ್ಟಿಲು ಉಡುಗೊರೆ
ಸೌತ್ನ ಮೆಗಾ ದಂಪತಿ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ ಶೀಘ್ರದಲ್ಲೇ ಪೋಷಕರಾಗಿ ಬಡ್ತಿ ಪಡೆಯಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಪ್ರಜ್ವಲ ಫೌಂಡೇಶನ್ ವತಿಯಿಂದ ಸುಂದರ ತೊಟ್ಟಿಲನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಮದುವೆಯಾಗಿ 10 ವರ್ಷಗಳ ಬಳಿಕ ದಂಪತಿ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ. ಇದಕ್ಕಾಗಿ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಗರ್ಭಾವಸ್ಥೆಯ ಕ್ಷಣಗಳನ್ನು ಆನಂದಿಸುತ್ತಿರುವ ಈ ಜೋಡಿಗೆ ವಿಶೇಷ ಉಡುಗೊರೆಯೊಂದು ಸಿಕ್ಕಿದೆ. ಹುಟ್ಟುವ ಮಗುವಿಗೆ ಪ್ರಜ್ವಲ ಫೌಂಡೇಶನ್ ಸುಂದರವಾದ […]
ಉಡುಪಿಯಲ್ಲಿಯೂ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಿ: ಎಸ್. ಡಿ.ಪಿ. ಐ ಆಗ್ರಹ
ಉಡುಪಿ: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಿದಂತೆ ಉಡುಪಿ ಜಿಲ್ಲೆಯಲ್ಲಿಯೂ ಸಹ ಸ್ಥಾಪಿಸಬೇಕು ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷರಾಗಿರುವ ಶಾಹಿದ್ ಅಲಿ ಆಗ್ರಹಿಸಿದ್ದಾರೆ. ಉಡುಪಿ ಸೌಹಾರ್ದತೆ ಹಾಗೂ ಶಿಕ್ಷಣಕ್ಕೆ ಹೆಸರುವಾಸಿಯಾದ ಜಿಲ್ಲೆ, ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಬೇರೆ ಬೇರೆ ರಾಜ್ಯಗಳಿಂದ ಉಡುಪಿ ಜಿಲ್ಲೆಗೆ ವಿದ್ಯಾರ್ಥಿಗಳು ಬರುತ್ತಾರೆ. ಅದೇ ರೀತಿ ಉಡುಪಿ ಉತ್ತಮ ಪ್ರವಾಸಿ ತಾಣವೂ ಹೌದು. ಆದರೆ ಕಳೆದ ಕೆಲವು ವರ್ಷಗಳಿಂದ ಕೋಮುವಾದಿ ಶಕ್ತಿಗಳು ಒಂದು ಸಮುದಾಯವನ್ನು ಗುರಿಪಡಿಸಿಕೊಂಡು […]
ಎಕ್ಸ್ಪರ್ಟ್ ಎನ್‍ಎಲ್‍ಟಿಯ ಶೇ.99ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶಕ್ಕೆ ಅರ್ಹ
ಮಂಗಳೂರು: ಮಂಗಳೂರಿನ ಎಕ್ಸ್‍ಪರ್ಟ್ ಕೋಚಿಂಗ್ ಕ್ಲಾಸಸ್‍ನಲ್ಲಿ ನೀಟ್ ದೀರ್ಘಾವಧಿ ಕೋಚಿಂಗ್ ಪಡೆದ ಶೇ.99.24ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶ ಪಡೆಯಲು ಅರ್ಹತೆ ಪಡೆಯುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ. 600ಕ್ಕಿಂತ ಅಧಿಕ ಅಂಕವನ್ನು 6 ವಿದ್ಯಾರ್ಥಿಗಳು, 550ಕ್ಕಿಂತ ಅಧಿಕ ಅಂಕವನ್ನು 11, 500ಕ್ಕಿಂತ ಅಧಿಕ ಅಂಕವನ್ನು 25, 450ಕ್ಕಿಂತ ಅಧಿಕ ಅಂಕವನ್ನು 42, 400ಕ್ಕಿಂತ ಅಧಿಕ ಅಂಕವನ್ನು 60 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಕಳೆದ ಬಾರಿ ಅಂದರೆ ನೀಟ್ 2022ರ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದು, ವೈದ್ಯಕೀಯ ಶಿಕ್ಷಣ […]
ಸುಳ್ಳು ದೂರು ನೀಡಿರುವವರಿಗೆ ಜೈಲು ಶಿಕ್ಷೆ ವಿಧಿಸುವ ಅಧಿಕಾರ ಲೋಕಾಯುಕ್ತರಿಗಿದೆ: ಕೆ.ಎನ್. ಫಣೀಂದ್ರ ಹೇಳಿಕೆ
ಮೈಸೂರು: ಕೆಲವರು ಅನಾವಶ್ಯಕವಾಗಿ ಸುಳ್ಳು ದೂರುಗಳನ್ನು ದಾಖಲಿಸುವವರಿದ್ದಾರೆ. ಇಂದು ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಮಾತನಾಡಿದರು. ಆ ರೀತಿ ಸುಳ್ಳು ದೂರು ನೀಡುವವರಿಗೆ ಜೈಲು ಶಿಕ್ಷೆ ವಿಧಿಸಿ, ಕ್ರಮ ಕೈಗೊಳ್ಳುವ ಅಧಿಕಾರ ಲೋಕಾಯುಕ್ತರಿಗೆ ಇದೆ ಎಂದು ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ತಿಳಿಸಿದರು. ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ […]
ಉಗಾಂಡ ಶಾಲೆ ಮೇಲೆ 38 ವಿದ್ಯಾರ್ಥಿಗಳು ಸೇರಿ 41 ಮಂದಿ ಬಲಿ, ಶಂಕಿತ ಬಂಡುಕೋರರ ದಾಳಿ
ಕಂಪಾಲಾ (ಉಗಾಂಡ): ಉಗಾಂಡದಲ್ಲಿ ಶಾಲೆಯೊಂದರ ಮೇಲೆ ಶಂಕಿತ ಬಂಡುಕೋರರ ದಾಳಿ ಮಾಡಿದ್ದು, ಇದರಲ್ಲಿ 38 ವಿದ್ಯಾರ್ಥಿಗಳು ಸೇರಿದಂತೆ 41 ಮಂದಿ ಸಾವನ್ನಪ್ಪಿದ್ದಾರೆ. ಅಲೈಡ್ ಡೆಮಾಕ್ರಟಿಕ್ ಪಡೆಗಳ ಶಂಕಿತ ಬಂಡುಕೋರರು ದಾಳಿಯಲ್ಲಿ 38 ವಿದ್ಯಾರ್ಥಿಗಳು ಸೇರಿದಂತೆ 41 ಮಂದಿ ಬಲಿಯಾಗಿರುವ ಘಟನೆ ಉಗಾಂಡದಲ್ಲಿ ನಡೆದಿದೆ. ಮೃತರಲ್ಲಿ 38 ವಿದ್ಯಾರ್ಥಿಗಳೊಂದಿಗೆ ಓರ್ವ ಶಾಲಾ ಸಿಬ್ಬಂದಿ, ಸ್ಥಳೀಯ ಸಮುದಾಯದ ಇಬ್ಬರು ಸದಸ್ಯರು ಸೇರಿದ್ದಾರೆ ಎಂದು ಎಂಪೊಂಡ್ವೆ-ಲುಬಿರಿಹಾ ಮೇಯರ್ ಸೆಲೆವೆಸ್ಟ್ ಮಾಪೋಜ್ ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ಈ ದಾಳಿ ನಡೆದಿದ್ದು, ನಂತರ ಸಾಕಷ್ಟು […]