ದಿವಾಳಿ ಪಾಕಿಸ್ತಾನಕ್ಕೆ ನೆರೆಹೊರೆ ಕಿರಿಕಿರಿ: ಅಫಘಾನಿಸ್ಥಾನದಿಂದ ನುಸುಳುಕೋರ ಬಾಧೆ; ವಿದ್ಯುತ್ ಬಿಲ್ ಬಾಕಿ ಪಾವತಿಗೆ ದುಂಬಾಲು ಬಿದ್ದ ಚೀನಾ
ಇಸ್ಲಾಮಾಬಾದ್: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನದ ನಂತರ ಮೇ 9 ರಂದು ದೇಶವನ್ನು ಬೆಚ್ಚಿಬೀಳಿಸಿದ ಭಾರೀ ಹಿಂಸಾಚಾರದ ಹಿನ್ನೆಲೆಯಲ್ಲಿ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಅಕ್ರಮವಾಗಿ ತಂಗಿರುವ ಆಫ್ಘನ್ ಪ್ರಜೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪಾಕಿಸ್ತಾನದ ಆಂತರಿಕ ಸಚಿವಾಲಯ ನಿರ್ಧರಿಸಿದೆ. ಪಾಕ್ ನ ವಿದೇಶಿ ಕಾಯಿದೆಯಡಿಯಲ್ಲಿ ಈಗ ವಿಚಾರಣೆಗೆ ಒಳಪಟ್ಟಿರುವ 200 ಕ್ಕೂ ಹೆಚ್ಚು ಆಫ್ಘನ್ನರನ್ನು ಪೊಲೀಸರು ಬಂಧಿಸಿದ್ದಾರೆ. ದೇಶದ ಆಂತರಿಕ ಸಚಿವಾಲಯವು ಇಸ್ಲಾಮಾಬಾದ್‌ನಲ್ಲಿರುವ ಎಲ್ಲಾ ಆಫ್ಘನ್ ವಸಾಹತುಗಳ ಲೆಕ್ಕಪರಿಶೋಧನೆಯನ್ನು ಬಯಸುತ್ತಿದೆ ಎನ್ನಲಾಗಿದ್ದು ಇದು ನೆರೆಯ […]
ಕೇಂದ್ರ ವನ ಧನ್ ಯೋಜನೆಯ ಉಪಕ್ರಮದಡಿ ಮಾರುಕಟ್ಟೆಗೆ ಬರಲಿದೆ ಮಾಲವೇದನ್ ಬುಡಕಟ್ಟು ಜನಾಂಗ ತಯಾರಿಸುವ ಜೇನು ನೆಲ್ಲಿಕಾಯಿ
ತಿರುವನಂತಪುರ: ಸ್ಥಳೀಯ ಸಮುದಾಯವನ್ನು ಅದರಲ್ಲೂ ವಿಶೇಷವಾಗಿ ಬುಡಕಟ್ಟು ಜನರನ್ನು ಒಳಗೊಳ್ಳುವ ದೃಷ್ಟಿಯಿಂದ, ಕೇಂದ್ರ ಸರ್ಕಾರವು ವನ್ ಧನ್ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಬುಡಕಟ್ಟು ಜನಾಂಗದವರು ಉದ್ಯಮಿಗಳಾಗುವ ಮೂಲಕ ಆರ್ಥಿಕವಾಗಿ ಸಬಲರಾಗಲು ಸರ್ಕಾರವು ಸಹಾಯ ಮಾಡುತ್ತಿದೆ. ಈ ಯೋಜನೆಯ ಅಂತರ್ಗತ ಇದೀಗ ಕೇರಳದ ರನ್ನಿ ಪ್ರದೇಶದ ಮಾಲವೇದನ್ ಬುಡಕಟ್ಟು ಜನಾಂಗದವರು ತಯಾರಿಸಿದ ಜನಪ್ರಿಯ ಜೇನು ನೆಲ್ಲಿಕಾಯಿ ಕೇರಳ ರಾಜ್ಯದಾದ್ಯಂತ ಲಭ್ಯವಿರಲಿದೆ. ಚಿತ್ತಾರದ ಓಲಿಕಲ್ಲು ಕುಗ್ರಾಮದಲ್ಲಿ ವಾಸವಾಗಿರುವ ಈ ಬುಡಕಟ್ಟು ಜನಾಂಗದವರು ಹಲವು ವರ್ಷಗಳಿಂದ ತಯಾರಿಸುವ ಈ […]
ಜೂನ್ 11 ರಂದು ಮಹಿಳೆಯರಿಗೆ ಉಚಿತ ಬಸ್ ಸಂಚಾರದ ಶಕ್ತಿ ಯೋಜನೆಗೆ ಚಾಲನೆ:
ಬೆಂಗಳೂರು: ಜೂನ್ 11 ರಂದು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುವ ಶಕ್ತಿ ಯೋಜನೆಗೆ ಚಾಲನೆ ನೀಡುವಂತೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಜೂನ್ 9 ರಂದು ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರಿಗೆ ನಿರ್ದೇಶನ ನೀಡಿದರು. ಈ ಯೋಜನೆಯಿಂದ ಶೇ.50ರಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಖಾತರಿ ಯೋಜನೆಗಳಲ್ಲಿ ಇದು ಮೊದಲನೆಯದ್ದಾಗಿದ್ದು, ಕರ್ನಾಟಕದ ಜನರಿಗಾಗಿ ಇದನ್ನು […]
ಮುಂಬೈ : ಭಾರತದ ಪ್ರಪ್ರಥಮ ಸಮುದ್ರದೊಳಗಿನ ರೈಲ್ವೆ ಸುರಂಗದ ಕೆಲಸ ಶೀಘ್ರದಲ್ಲೇ ಪ್ರಾರಂಭ
ಮುಂಬೈ: ಇಲ್ಲಿನ ಥಾಣೆ ಖಾರಿ ಮೂಲಕ 21 ಕಿಮೀ ಉದ್ದದ ಸುರಂಗ ನಿರ್ಮಾಣಕ್ಕಾಗಿ ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ಅಫ್ಕಾನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನೊಂದಿಗೆ ಗುರುವಾರ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಭಾರತದ ಮೊದಲ ಸಮುದ್ರದೊಳಗಿನ 7ಕಿಮೀ ಉದ್ದದ ರೈಲ್ವೆ ಸುರಂಗದ ಕೆಲಸ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಸುರಂಗವು ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್ ಯೋಜನೆಯ ಭಾಗವಾಗಿದೆ. ಥಾಣೆ ಖಾರಿಯಲ್ಲಿ ದೇಶದ ಮೊದಲ ಸಮುದ್ರದೊಳಗಿನ ಅವಳಿ-ರೈಲು ಸುರಂಗವನ್ನು ಒಳಗೊಂಡಿರುವ 21 ಕಿಮೀ ಸುರಂಗದ ನಿರ್ಮಾಣವು ಮುಂಬೈ-ಅಹಮದಾಬಾದ್ ಹೈಸ್ಪೀಡ್ […]
ಅಂಚೆ ಇಲಾಖೆ ಪಿಂಚಣಿ ಜಮೆಗೆ ಆಧಾರ್ ಜೋಡಣೆ ಕಡ್ಡಾಯ
ಉಡುಪಿ: ಅಂಚೆ ಇಲಾಖೆಯ ವತಿಯಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ಪಿಂಚಣಿ ವಿತರಣೆಯನ್ನು ಪ್ರಸಕ್ತ ಸಾಲಿನ ಜೂನ್‌ನಿಂದಲೇ ಆಧಾರ್ ಆಧಾರಿತ ವ್ಯವಸ್ಥೆಯಡಿ ಪ್ರಾರಂಭಿಸಲಾಗುತ್ತಿದ್ದು, ಅಂಚೆ ಇಲಾಖೆಯಲ್ಲಿನ ಉಳಿತಾಯ ಖಾತೆಗೆ ಪಿಂಚಣಿ ಜಮೆಯಾಗಲು ಫಲಾನುಭವಿಗಳು ತಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಪೋಸ್ಟ್ ಮ್ಯಾನ್ ರನ್ನು ಸಂಪರ್ಕಿಸಿ, ಆಧಾರ್ ಸಂಖ್ಯೆಯನ್ನು ಜೋಡಿಸಿಕೊಳ್ಳುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.