ಗುಣಮಟ್ಟದ ಶಿಕ್ಷಣ ಸೇವೆಗೆ ಹೆಸರುವಾಸಿಯಾಗಿರುವ “ಸ್ನೇಹ ಟ್ಯುಟೋರಿಯಲ್ ಕಾಲೇಜು” ನಲ್ಲಿ ರಜತ ಸಂಭ್ರಮಾಚರಣೆ
ಉಡುಪಿ: ಉಡುಪಿ ಕಲ್ಸಂಕದ ಶ್ರೀ ರಾಮ್ ಬಿಲ್ಡಿಂಗ್ ನಲ್ಲಿ ಕೇವಲ 200 ಚ. ಅಡಿ ವಿಸ್ತೀರ್ಣದಲ್ಲಿ 1998ರ ಜೂ. 8ರಂದು ಆರಂಭಗೊಂಡ ಸ್ನೇಹ ಟ್ಯುಟೋರಿಯಲ್ ಕಾಲೇಜು 25 ವರ್ಷಗಳಲ್ಲಿ ಗುಣಮಟ್ಟದ ಶೈಕ್ಷಣಿಕ ಸೇವೆಯ ಮೂಲಕ ವಿದ್ಯಾರ್ಥಿಗಳ, ಹೆತ್ತವರ, ಪೋಷಕರ ವಿಶ್ವಾಸ ಗಳಿಸಿದೆ. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಪಾಲಿನ ಆಶಾಕಿರಣವಾದ ಸಂಸ್ಥೆ ಇದೀಗ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಆಚರಿಸುತ್ತಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದಿದ್ದು, ಅವರಿಗೆ ಪಾಠ ಮಾಡುವುದು ಕಷ್ಟವಲ್ಲ, ಆದರೆ ಕಲಿಕೆಯಲ್ಲಿ ಹಿಂದುಳಿದ, ಹಿಂದಿನ ತರಗತಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಮತ್ತೆ […]
ಕರಾವಳಿಯಲ್ಲಿ ಯಾವುದೇ ಬೆಲೆ ತೆತ್ತಾದರೂ ಕೋಮು ಸೌಹಾರ್ದತೆ ಉಳಿಸಲು ಕ್ರಮ: ಜಿ. ಪರಮೇಶ್ವರ್
ಉಡುಪಿ: ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಮತ್ತು ಕೋಮುವಾದವನ್ನು ಪ್ರಚೋದಿಸುವ ನೈತಿಕ ಪೊಲೀಸ್‌ಗಿರಿಯನ್ನು ಹತ್ತಿಕ್ಕಲು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ನಮ್ಮ ಸರಕಾರ ಸರ್ವಜನಾಂಗದ ಶಾಂತಿಯ ತೋಟದ ಪರಿಕಲ್ಪನೆಯೊಂದಿಗೆ ಆಡಳಿತ ನಡೆಸಲು ತೀರ್ಮಾನ ಮಾಡಿದೆ. ಆ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಯಾವುದೇ ಬೆಲೆ ತೆತ್ತಾದರು ಕೋಮು ಸೌಹಾರ್ದತೆ ಉಳಿಸಲು ಮುಂದಾಗಿದ್ದೇವೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಉಡುಪಿ ಎಸ್ಪಿ ಕಚೇರಿಯಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ […]
ಉತ್ತಮ ಆರೋಗ್ಯಕರ ಜೀವನದ ಬಗ್ಗೆ ಆನ್ ಲೈನ್ ಮತ್ತು ಫಿಸಿಕಲ್ ಕ್ಲಾಸ್ ಅನ್ನು ನೀಡುತ್ತಿರುವ “ಸುದೀಪ್ತಿ ಸೆಂಟರ್” 2ನೇ ವರ್ಷಕ್ಕೆ ಪಾದಾರ್ಪಣೆ
ಉಡುಪಿ: ಅಂಬಾಗಿಲು ಗುಂಡಿಬೈಲ್ ರಸ್ತೆ, ನಿಟ್ಟೂರು ಪ್ರೈಮರಿ ಶಾಲೆಯ ಹತ್ತಿರ ಇರುವ ‘ಸುದೀಪ್ತಿ ಸೆಂಟರ್’ ನಲ್ಲಿ ಪೌಷ್ಠಿಕ ಸಮತೋಲನವಾದ ಉಪಹಾರ / ಊಟ ಹಾಗೂ ದೇಹದ ತೂಕ ಮತ್ತು ಉತ್ತಮ ಆರೋಗ್ಯಕರ ಜೀವನ ಪದ್ಧತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತಾ ಬಂದಿದ್ದು, ಇದೀಗ ಸಂಸ್ಥೆಯು ಎರಡನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ. ಸುದೀಪ್ತಿ ಸೆಂಟರ್ ಕೇಂದ್ರವು ಜನರಿಗೆ ಉತ್ತಮ ಆರೋಗ್ಯಕರ ಜೀವನದ ಬಗ್ಗೆ ಆನ್ ಲೈನ್ ಮತ್ತು ಫಿಸಿಕಲ್ ಕ್ಲಾಸಸ್ ಸೌಲಭ್ಯ ಕಲ್ಪಿಸಿದ್ದು, ಪೌಷ್ಠಿಕ ಆಹಾರ ಕೋಚಿಂಗ್ ಕ್ಲಾಸ್ ನಲ್ಲಿ […]
ಐಟಿ-ಜಿಎಸ್‌ಟಿ ಪಾವತಿದಾರರಿಗಿಲ್ಲ ಗೃಹಲಕ್ಷ್ಮಿ ಯೋಜನೆ: ತಪ್ಪು ಮಾಹಿತಿ ನೀಡಿದಲ್ಲಿ ಕಾನೂನು ಕ್ರಮ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೂ ಆಡಳಿತಾತ್ಮಕ ಅನುಮೋದನೆಯೊಂದಿಗೆ ಮಂಗಳವಾರ ಅಧಿಕೃತ ಆದೇಶ ಪ್ರಕಟವಾಗಿದೆ. ಕುಟುಂಬದ ಯಜಮಾನಿ ಅಥವಾ ಅವರ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಅಥವಾ ಜಿಎಸ್‌ಟಿ ಮರುಪಾವತಿ ಪಡೆಯುವವರಾಗಿದ್ದಲ್ಲಿ ಅಂತಹವರಿಗೆ ಯೋಜನೆಯು ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಅಥವಾ ಜಿಎಸ್‌ಟಿ ಮರುಪಾವತಿ ಪಡೆಯುವವರು ಈ ಯೋಜನೆಗೆ ಅರ್ಹರಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಹುತೇಕ ನೌಕರರು, ಅಧಿಕಾರಿಗಳು, ಆದಾಯ ತೆರಿಗೆ […]
ಕಾರ್ಕಳ: ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಕಾರ್ಕಳ : ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸೋಮವಾರದಂದು ಆಚರಿಸಲಾಯಿತು. ಉಡುಪಿ ಅರಣ್ಯ ಸಂಚಾರಿದಳದ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಜಿ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಂದು ಪ್ರಕೃತಿ ವಿನಾಶದ ಅಂಚಿನೆಡೆಗೆ ಸಾಗುತ್ತಿದೆ. ಪ್ರಕೃತಿಗೆ ಪ್ರತಿಯೊಂದು ಗಿಡವೂ ಅತ್ಯಗತ್ಯ. ಪ್ರತಿಯೊಬ್ಬರೂ ಕನಿಷ್ಠ ಎರಡು ಗಿಡಗಳನ್ನಾದರೂ ನೆಟ್ಟು ಪ್ರಕೃತಿಯನ್ನು ಸಂರಕ್ಷಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಮೇರಿಯನ್ ಡಿಸೋಜ ಮಾತನಾಡಿ, ಹಿಂದೆ ನಮ್ಮ ಪ್ರಕೃತಿಯು ಬಹಳ ಸುಂದರವಾಗಿತ್ತು. ಆದರೆ […]