ಉತ್ತಮ ಆರೋಗ್ಯಕರ ಜೀವನದ ಬಗ್ಗೆ ಆನ್ ಲೈನ್ ಮತ್ತು ಫಿಸಿಕಲ್ ಕ್ಲಾಸ್ ಅನ್ನು ನೀಡುತ್ತಿರುವ “ಸುದೀಪ್ತಿ ಸೆಂಟರ್” 2ನೇ ವರ್ಷಕ್ಕೆ ಪಾದಾರ್ಪಣೆ

ಉಡುಪಿ: ಅಂಬಾಗಿಲು ಗುಂಡಿಬೈಲ್ ರಸ್ತೆ, ನಿಟ್ಟೂರು ಪ್ರೈಮರಿ ಶಾಲೆಯ ಹತ್ತಿರ ಇರುವ ‘ಸುದೀಪ್ತಿ ಸೆಂಟರ್’ ನಲ್ಲಿ ಪೌಷ್ಠಿಕ ಸಮತೋಲನವಾದ ಉಪಹಾರ / ಊಟ ಹಾಗೂ ದೇಹದ ತೂಕ ಮತ್ತು ಉತ್ತಮ ಆರೋಗ್ಯಕರ ಜೀವನ ಪದ್ಧತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತಾ ಬಂದಿದ್ದು, ಇದೀಗ ಸಂಸ್ಥೆಯು ಎರಡನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ.

ಸುದೀಪ್ತಿ ಸೆಂಟರ್ ಕೇಂದ್ರವು ಜನರಿಗೆ ಉತ್ತಮ ಆರೋಗ್ಯಕರ ಜೀವನದ ಬಗ್ಗೆ ಆನ್ ಲೈನ್ ಮತ್ತು ಫಿಸಿಕಲ್ ಕ್ಲಾಸಸ್ ಸೌಲಭ್ಯ ಕಲ್ಪಿಸಿದ್ದು, ಪೌಷ್ಠಿಕ ಆಹಾರ ಕೋಚಿಂಗ್ ಕ್ಲಾಸ್ ನಲ್ಲಿ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು ಮತ್ತು ಹೆಚ್ಚಿಸಿಕೊಳ್ಳಬಹುದು ಎಂದು ಸಂಸ್ಥೆಯ ಮಾಲಕ ಯತೀಶ್ ಆರ್. ಶೆಣೈ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8296599626, 9880380148