ರಾಜ್ಯದ ದಕ್ಷಿಣ ಒಳನಾಡಿನ 6 ಜಿಲ್ಲೆಗಳಲ್ಲಿ ಇಂದು ಧಾರಾಕಾರ ಮಳೆಯಾಗುವ ಸಾಧ್ಯತೆ 

ರಾಜ್ಯದ ದಕ್ಷಿಣ ಒಳನಾಡಿನ 6 ಜಿಲ್ಲೆಗಳಲ್ಲಿ ಇಂದು ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಭಾರಿ ಮಳೆ ಸುರಿಯಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿಯಲ್ಲಿ ಸಾಧಾರಣ ಮಳೆಯಾಗಲಿದೆ. ಕಲಬುರಗಿಯಲ್ಲಿ 39.2 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ, ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದ್ದು, ಸಂಜೆ […]

ಜೂ.3 ಮತ್ತು 4ರಂದು ಮಂಗಳೂರಿನಲ್ಲಿ 6ನೇ ವರ್ಷದ ಹಲಸು ಹಬ್ಬ

ಮಂಗಳೂರು: ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ 6ನೇ ವರ್ಷದ ಹಲಸು ಹಬ್ಬ ಜೂನ್ 3 ಮತ್ತು ‌4ರಂದು ಶರವು ದೇವಳ ಬಳಿಯ‌ ಬಾಳಂಭಟ್ ಹಾಲ್‌ನಲ್ಲಿ ನಡೆಯಲಿದೆ. ಜೂನ್ 3ರಂದು ಬೆಳಗ್ಗೆ 9.30ಕ್ಕೆ ಮೇಯರ್ ಜಯಾನಂದ ಅಂಚನ್ ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಭಟ್ ಆಯಂಡ್ ಭಟ್ ಯೂ ಟ್ಯೂಬ್ ಚಾನಲ್‌ನ ಸುದರ್ಶನ್ ಭಟ್ ಬೆದ್ರಾಡಿ ಹಲಸು ಹಣ್ಣು ತುಂಡು‌ ಮಾಡಿ ಹಬ್ಬಕ್ಕೆ ಚಾಲನೆ‌ ನೀಡುವರು. ಹೋಳಿಗೆ‌ ಮಾಡಿ‌ ಹಲಸು ಮೌಲ್ಯ ವರ್ಧನೆ‌ ಮಾಡಿದ‌ ಲಕ್ಷ್ಮೀ ಚಿದಾನಂದರನ್ನು […]

19 ಕೆ.ಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 83 ರೂಪಾಯಿಗಳಷ್ಟು ಕಡಿತ

ನವದೆಹಲಿ: ಇಂಡಿಯನ್ ಆಯಿಲ್ 19 ಕೆ.ಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಸುಮಾರು 83 ರೂಪಾಯಿಗಳಷ್ಟು ಕಡಿತಗೊಳಿಸಿದೆ. ತನ್ನ ವೆಬ್‌ಸೈಟ್‌ನಲ್ಲಿ ಸುದ್ದಿಯನ್ನು ಪ್ರಕಟಿಸಿದ ತೈಲ ಮಾರುಕಟ್ಟೆ ಕಂಪನಿಯು ಹೊಸ ಬೆಲೆಗಳು ಜೂನ್ 1 ರಿಂದ ಅನ್ವಯವಾಗಲಿದೆ ಎಂದು ಹೇಳಿದೆ. ಆದಾಗ್ಯೂ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅದೇ ರೀತಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ವರ್ಷ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ಅಂತರಾಷ್ಟ್ರೀಯ ತೈಲ ಬೆಲೆಗಳು ಏರಿದಾಗ […]

ವಂಡ್ಸೆ ಗ್ರಾಮಕ್ಕೆ ಬೇಕಾಗಿದೆ 108 ಅಂಬ್ಯುಲೆನ್ಸ್ ಮತ್ತು ಸಮುದಾಯ ಆರೋಗ್ಯ ಕೇಂದ್ರ

ಕುಂದಾಪುರ: ವಂಡ್ಸೆ ಹೋಬಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೂ 108 ಅಂಬ್ಯುಲೆನ್ಸ್ ಮತ್ತು ಸಮುದಾಯ ಆರೋಗ್ಯ ಕೇಂದ್ರ ಇಲ್ಲದಿರುವುದು ದುರದೃಷ್ಕಕರ. ವಂಡ್ಸೆ ಹೋಬಳಿ ಗ್ರಾಮ ಆಗಿರುವುದರಿಂದ ಇಲ್ಲಿಗೆ ಒಂದು ಸಮುದಾಯ ಆರೋಗ್ಯ ಕೇಂದ್ರ ಮತ್ತು 108 ಅಂಬ್ಯುಲೆನ್ಸ್ ಸೌಲಭ್ಯ ಅಗತ್ಯವಾಗಿದೆ. ಇಲ್ಲಿನ ಸರಕಾರಿ ಕಛೇರಿ, ಬ್ಯಾಂಕುಗಳು, ಸೊಸೈಟಿಯಂತಹ ನಾನಾ ಕೆಲಸಗಳಿಗೆ ಬೇರೆ ಗ್ರಾಮಗಳಿಂದ ನೂರಕ್ಕೂ ಹೆಚ್ಚು ಜನರು ವ್ಯವಹಾರಕ್ಕಾಗಿ ಪ್ರತಿ ನಿತ್ಯ ಬರುತ್ತಾರೆ. ಹೋಬಳಿಗೊಂದು ಸಮುದಾಯ ಆರೋಗ್ಯ ಕೇಂದ್ರ ಇದ್ದರೆ ಸಾರ್ವಜನಿಕರಿಗೆ ಅನುಕೂಲವಾಗುವುದು.ಇಲ್ಲಿ ಯಾರದ್ದಾದರೂ ಆರೋಗ್ಯ ಹದೆಗೆಟ್ಟರೆ […]

ಎಮ್ ಎನ್ ರಾಜೇಂದ್ರ ದಂಪತಿಗಳಿಗೆ ಬೀಳ್ಕೊಡುಗೆ ಸಮಾರಂಭ

ಉಡುಪಿ: ಅಂಬಲಪಾಡಿ ಯೂನಿಯನ್ ಬ್ಯಾಂಕ್( ಕಾರ್ಪೊರೇಷನ್ ಬ್ಯಾಂಕ್ )ನಲ್ಲಿ ಸುಮಾರು 38 ವರ್ಷಗಳ ಕಾಲ ಉಡುಪಿ ಜಿಲ್ಲೆಯ ವಿವಿಧ ಕಡೆ ಸೇವೆಸಲ್ಲಿಸಿ ಅಂಬಲಪಾಡಿ ಶಾಖೆಯಲ್ಲಿ ನಿವೃತ್ತರಾದ ಎಮ್ ಎನ್ ರಾಜೇಂದ್ರ ಹಾಗೂ ಶ್ರೀಮತಿ ಬೃಂದ ರಾಜೇಂದ್ರ ದಂಪತಿಗಳನ್ನು ಬೀಳ್ಕೊಡಲಾಯಿತು. ಸಮಾರಂಭದಲ್ಲಿ ಉಪ ಶಾಖಾಧಿಕಾರಿ ಶ್ರೀಮತಿ ಉಷಾ ಕುಮಾರಿ ದಂಪತಿಗಳಿಗೆ ಶಾಲು ಹೊದಿಸಿ ರಜತ ಸ್ಮರಣಿಕೆ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಯೂನಿಯನ್ ಬ್ಯಾಂಕ್ ನೌಕರರ ಸಂಘದ ವತಿಯಿಂದ ನಾಗೇಶ್ ನಾಯಕ್ ದಂಪತಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ […]