ಅರಣ್ಯಕ್ಕೆ ಸಂಬಂಧಿಸಿದ ಕೇಳರಿಯದ ಕನ್ನಡ ಪದ ಪರಿಚಯ: ಅರಣ್ಯ ಇಲಾಖೆಯಿಂದ ವಿನೂತನ ಪ್ರಯತ್ನ!!
ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯು ತನ್ನ ವಿನೂತನ ಪ್ರಯತ್ನದಲ್ಲಿ ಕೇಳರಿಯದ ಕನ್ನಡದ ಪದಗಳನ್ನು ಜನರಿಗೆ ಪರಿಚಯಿಸುವ ಕಾರ್ಯಕ್ಕೆ ಮುನ್ನುಡಿ ಬರೆದಿದೆ. ತನ್ನ ಟ್ವಿಟ್ವರ್ ಹ್ಯಾಂಡಲ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅರಣ್ಯ ಇಲಾಖೆಯು “ಕೇಳರಿಯದ ಕನ್ನಡ ಪದ ಪರಿಚಯ. ಇಂದಿನಿಂದ ಪ್ರತಿವಾರ ಅರಣ್ಯಕ್ಕೆ ಸಂಬಂಧ ಪಟ್ಟ ಒಂದು ಅಪರೂಪದ ಕನ್ನಡ ಪದ ಪರಿಚಯ ಮಾಡಿಕೊಳ್ಳೋಣ” ಎಂದು ಟ್ವೀಟ್ ಮಾಡಿದ್ದು, ಇಂದು ‘ಕಾಸರ’ ಎನ್ನುವ ಪದದ ಅರ್ಥವಿವರಣೆಯನ್ನು ನೀಡಿದೆ. ಕಾಸರ ಎಂದರೆ ಕಾಡು, ಕಾಂತಾರ, ಅಡವಿ, ಅರಣ್ಯ(ಎತ್ತರವಾಗಿ […]
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಕಾನೂನು ತಕ್ಷಣ ಬದಲಾಯಿಸಲು ಸಾಧ್ಯವಿಲ್ಲ: ಮಧು ಬಂಗಾರಪ್ಪ
ಬೆಂಗಳೂರು: ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ಸಿಂಧುತ್ವಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾನೂನು ಹೋರಾಟದ ನಡುವೆ, ಹೊಸದಾಗಿ ನೇಮಕಗೊಂಡ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ತರಗತಿಗಳಲ್ಲಿ ಹಿಜಾಬ್ ಅನ್ನು ನಿಷೇಧಿಸುವ ಸರ್ಕಾರದ ಆದೇಶವನ್ನು ಕಾಂಗ್ರೆಸ್ ಸರ್ಕಾರವು ತಕ್ಷಣವೇ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ತನ್ನ ಚುನಾವಣಾ ಪ್ರಚಾರದ ಭಾಗವಾಗಿ ಹಿಜಾಬ್ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದಾಗಿ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತು. ‘ದಿ ಇಂಡಿಯನ್ ಎಕ್ಸ್ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಬಂಗಾರಪ್ಪ, “ಹಿಜಾಬ್ನಲ್ಲಿನ […]
ಸಿಜೆಐ ಟಿ.ಎಸ್.ನರಸಿಂಹ ಅವರಿಂದ ಶ್ರೀಕೃಷ್ಣಮಠಕ್ಕೆ ಭೇಟಿ
ಉಡುಪಿ: ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಟಿ.ಎಸ್.ನರಸಿಂಹ ತಮ್ಮ ಕುಟುಂಬ ಸಮೇತರಾಗಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣದೇವರ ದರ್ಶನ ಪಡೆದರು.ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಇವರು ಉಪಸ್ಥಿತರಿದ್ದರು.
ಸೇವಾವಲಯದಿಂದಾಗಿ ಚತುರ್ಥ ತ್ರೈಮಾಸಿಕದಲ್ಲಿ ಶೇ. 6.1 ಜಿಡಿಪಿ ದಾಖಲಿಸಿದ ಭಾರತ: ಪೂರ್ಣ ವರ್ಷದ ಬೆಳವಣಿಗೆ 7.2 ಶೇ ಸಾಧ್ಯತೆ
ನವದೆಹಲಿ: ಭಾರತದ ಒಟ್ಟು ದೇಶೀಯ ಉತ್ಪನ್ನ (GDP) 2023 ರ ಜನವರಿ-ಮಾರ್ಚ್ನಲ್ಲಿ ನಿರೀಕ್ಷಿತಕ್ಕಿಂತ ಹೆಚ್ಚಿನ ಬೆಳವಣಿಗೆಯ ದರ ಅಂದರೆ 6.1 ಶೇಕಡಾ ಗಳಿಸಿದ್ದು ಇದು 2022-23 ರ ಪೂರ್ಣ ವರ್ಷದ ಬೆಳವಣಿಗೆಯ ಅಂದಾಜನ್ನು 7.2 ಶೇಕಡಾಕ್ಕೆ ತಳ್ಳಲಿದೆ ಎಂದು ಬುಧವಾರ ರಾಷ್ಟ್ರೀಯ ಅಂಕಿಅಂಶ ಕಚೇರಿ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ. ಇದು 2022-23 ವರ್ಷಕ್ಕೆ ಕಚೇರಿಯ ಶೇ.7 ಬೆಳವಣಿಗೆ ದರದ ಮುಂಗಡ ಅಂದಾಜಿನ ಪ್ರತಿಶತಕ್ಕಿಂತ ಹೆಚ್ಚಾಗಿದೆ. ನಿರ್ಮಾಣ, ವ್ಯಾಪಾರ, ಹೋಟೆಲ್ಗಳು, ಸಾರಿಗೆ ವಲಯಗಳ ನೇತೃತ್ವದ ಸೇವಾ ವಲಯದ […]
ಚುನಾವಣಾ ತಂತ್ರಗಾರ ಸುನಿಲ್ ಕನುಗೋಳು ಅವರಿಗೆ ಸಂಪುಟ ದರ್ಜೆ ಸ್ಥಾನಮಾನ: ಮುಖ್ಯಮಂತ್ರಿಯವರ ಮುಖ್ಯ ಸಲಹೆಗಾರರಾಗಿ ನೇಮಕ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭರ್ಜರಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎನ್ನಲಾದ ಕಾಂಗ್ರೆಸ್ ಚುನಾವಣಾ ತಂತ್ರಗಾರ ಸುನಿಲ್ ಕನುಗೋಳು ಅವರನ್ನು ಸಂಪುಟ ಸಚಿವರ ದರ್ಜೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಖ್ಯ ಸಲಹೆಗಾರರಾಗಿ ಬುಧವಾರ ನೇಮಿಸಲಾಗಿದೆ. ಸುನಿಲ್ ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಜೊತೆಗೂಡಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿರುವ ಸುನಿಲ್ ಅಲ್ಲೇ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಮೂಲತಃ ತೆಲುಗು ಭಾಷಿಕರಾಗಿದ್ದರೂ, ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈ ಹಿಂದೆ ಬಿಜೆಪಿ, ಡಿಎಂಕೆ, […]