ಮುಂಬೈನಿಂದ ಗೋವಾ ತಲುಪಲು ಕೇವಲ 7 ಗಂಟೆ ಸಾಕು: ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯೋಗ ಯಶಸ್ವಿ

ಮುಂಬೈ: ಗೋವಾ- ಮುಂಬೈ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಜೂನ್‌ನಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ವರದಿಗಳಾಗಿವೆ. ಸೆಮಿ ಹೈಸ್ಪೀಡ್ ರೈಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಮತ್ತು ಮಡಗಾಂವ್ ನಡುವೆ ಚಲಿಸುತ್ತದೆ ಮತ್ತು ತೇಜಸ್ ಎಕ್ಸ್‌ಪ್ರೆಸ್‌ಗೆ ಹೋಲಿಸಿದರೆ ಮುಂಬೈ ಮತ್ತು ಗೋವಾ ನಡುವಿನ ಪ್ರಯಾಣದ ಸಮಯವನ್ನು ಕನಿಷ್ಠ 45 ನಿಮಿಷಗಳಷ್ಟು ಕಡಿಮೆ ಮಾಡುತ್ತದೆ. ಮುಂಬೈ-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮಾರ್ಗದ ಪ್ರಯೋಗಗಳನ್ನು ಮಂಗಳವಾರ ಯಶಸ್ವಿಯಾಗಿ ನಡೆಸಲಾಯಿತು. ರೈಲು ಏಳು ಗಂಟೆಗಳಿಗಿಂತ ಸ್ವಲ್ಪವೇ ಹೆಚ್ಚು […]

ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿ: ಅರ್ಜಿ ಆಹ್ವಾನ

ಕಾರ್ಕಳ: ತೋಟಗಾರಿಕೆ ಇಲಾಖೆಯ ವತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ, 2023 ರ ಜೂನ್ 1ರಿಂದ 2024 ರ ಮಾರ್ಚ್ 30 ವರೆಗೆ, ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 22, ಹೆಚ್ಚಿನ ಮಾಹಿತಿಗಾಗಿ: http://horticulturedir.Karnataka.gov.in ತೋಟಗಾರಿಕೆ ಉಪ ನಿರ್ದೇಶಕರು ಉಡುಪಿ ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಂಗಳೂರು: ಟ್ರಾಫಿಕ್ ಸಮಸ್ಯೆ ನಿವಾರಣೆಗಾಗಿ ರಸ್ತೆಗಿಳಿಯಲಿವೆ ‘ಕೋಬ್ರಾ’ಗಳು; ಮಂಗಳೂರು ನಗರ ಪೊಲೀಸರ ಉಪಕ್ರಮ

ಮಂಗಳೂರು: ಮಂಗಳೂರು ಪೊಲೀಸರು ನಾಲ್ಕು ಕೋಬ್ರಾ ದ್ವಿಚಕ್ರ ಸಂಚಾರ ಗಸ್ತು ವಾಹನಗಳನ್ನು ಪರಿಚಯಿಸಿದರು. ಟ್ರಾಫಿಕ್ ಪೂರ್ವ ಮತ್ತು ಪಶ್ಚಿಮ ಪೊಲೀಸ್ ಠಾಣೆಗಳಿಗೆ ಕ್ರಮವಾಗಿ ಎರಡು ವಾಹನಗಳನ್ನು ಸೇರ್ಪಡೆಗೊಳಿಸಿದರು. ಮಂಗಳವಾರದಂದು ಕೋಬ್ರಾ ವಾಹನಗಳನ್ನು ಬಿಡುಗಡೆಮಾಡಲಾಯಿತು ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಸುದ್ದಿಗಾರರಿಗೆ ತಿಳಿಸಿದರು. ಇವು ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಲಿವೆ. ಈ ವಾಹನಗಳಲ್ಲಿ ಸೈರನ್ ಮತ್ತು ಮೈಕ್ ವ್ಯವಸ್ಥೆ ಇರಲಿದೆ. ಯಾವುದೇ ಟ್ರಾಫಿಕ್ ಸಮಸ್ಯೆ ಅಥವಾ ಅಪಘಾತ ಸಂಭವಿಸಿದಲ್ಲಿ ಈ ವಾಹನಗಳು […]

ಮಣಿಪಾಲ ರೋಟರಿ ವತಿಯಿಂದ 5 ಕ್ಷೇತ್ರಗಳ ಯೂತ್ ಐಕಾನ್ ಗಳ ಆಯ್ಕೆ

ಮಣಿಪಾಲ: ಮಣಿಪಾಲ ರೋಟರಿ 2022-23 ನೇ ಸಾಲಿನ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಮಕ್ಕಳಲ್ಲಿ ಕಲಿಕಾ ನ್ಯೂನತೆ ಪರಿಹಾರ, ಅಂಗಾಂಗ ದಾನ, ಜಲ ಯಾತ್ರೆ, ಮಹಿಳಾ ಸಬಲೀಕರಣ, ಇ-ತ್ಯಾಜ್ಯ ನಿರ್ವಹಣೆ ಈ ಮುಖ್ಯ ವಿಚಾರಗಳನ್ನು ಕೈಗೆತ್ತಿಕೊಂಡು ವಿವಿಧ ಸ್ಥರಗಳ ಕಾರ್ಯಕ್ರಮಗಳನ್ನು ವರ್ಷವಿಡೀ ಆಯೋಜಿಸಿದೆ. ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಮೇಲೆ ಹೇಳಿದ ಐದು ಕ್ಷೇತ್ರಗಳಲ್ಲಿ ಸುಸ್ಥಿರ ಅಭಿವೃದ್ಧಿಗೆ ಮತ್ತು ಇತರರಿಗೆ ಸ್ಪೂರ್ತಿದಾಯಕವಾಗಿ ಕೆಲಸ ಮಾಡಿದ 18 ರಿಂದ 30 ವಯೋಮಾನದ ಯೂತ್ ಐಕಾನ್ ಗಳನ್ನು ಗುರುತಿಸಿ ಇದೇ ತಿಂಗಳು 19 […]