‘ದಿ ಕೇರಳ ಸ್ಟೋರಿ 2’ ನಿರ್ಮಾಣಕ್ಕೆ ಚಿತ್ರತಂಡ ನಿರ್ಧಾರ: ಈ ಸಿನಿಮಾದ ನಿರೀಕ್ಷೆ ಹೀಗಿದೆ.!!
‘ದಿ ಕೇರಳ ಸ್ಟೋರಿ’ ಸಿನಿಮಾದ ಕಲೆಕ್ಷನ್ ಈಗಾಗಲೇ ನೂರು ಕೋಟಿದಾಟಿದ್ದು, ಇದೀಗ ಚಿತ್ರತಂಡ ‘ದಿ ಕೇರಳ ಸ್ಟೋರಿ 2’ ನಿರ್ಮಿಸಲು ನಿರ್ಧರಿಸಿದೆ. ‘ದಿ ಕೇರಳ ಸ್ಟೋರಿ’ ಸಿನಿಮಾವು ದೇಶಾದ್ಯಂತ ಚರ್ಚೆಯಾಗಿದ್ದು, ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಕೇವಲ ಯುವತಿಯರ ಬ್ರೇನ್ವಾಶ್ ಬಗ್ಗೆ ತೋರಿಸಲಾಗಿದೆ. ಆದರೆ ಯುವಕರ ಬ್ರೇನ್ವಾಶ್ ಬಗ್ಗೆ ಯಾಕೆ ತೋರಿಸಿಲ್ಲ ಎಂದು ಹಿಂದುತ್ವ ಸಂಘಟನೆಗಳು ಪ್ರಶ್ನೆ ಎತ್ತಿದೆ. ನಿರ್ದೇಶಕ ಸುದೀಪ್ತೋ ಸೇನ್ ಅವರನ್ನು ಈ ಕುರಿತು ಕೆಲವರು ಪ್ರಶ್ನಿಸಿದ್ದಾರಂತೆ. ಯುವಕರನ್ನು ಬ್ರೇನ್ವಾಶ್ ಮಾಡಿದ್ದರ ಕುರಿತು ಸೀಕ್ವೆಲ್ […]
ರಾಜ್ಯದ ಮುಂದಿನ ಮುಖ್ಯಮಂತ್ರಿ ಆಯ್ಕೆ: ದೆಹಲಿಗೆ ತೆರಳಿದ ಡಿ.ಕೆ ಶಿವಕುಮಾರ್
ಬೆಂಗಳೂರು: ಮುಖ್ಯಮಂತ್ರಿಯಾಗಬೇಕೆಂಬ ಹಂಬಲದಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಇಂದು ರಾಷ್ಟ್ರ ರಾಜಧಾನಿಗೆ ತೆರಳುತ್ತಿದ್ದು, ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಕಾಂಗ್ರೆಸ್ ಸರ್ಕಾರ ರಚನೆ ಕುರಿತು ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, “ನಾನು ಒಬ್ಬನೇ ದೆಹಲಿಗೆ ಹೋಗುತ್ತಿದ್ದೇನೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ನನ್ನನ್ನು ಏಕಾಂಗಿಯಾಗಿ ದೆಹಲಿಗೆ ಕರೆದಿದ್ದಾರೆ. ನಾನು ಏಕಾಂಗಿಯಾಗಿ ಹೋಗುತ್ತಿದ್ದೇನೆ” ಎಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅದಾಗಲೆ ತಮ್ಮ ನಿಷ್ಠಾವಂತ ಶಾಸಕರೊಂದಿಗೆ […]
ಮೇ 17 ರಂದು ಮೆಸ್ಕಾಂ ಜನ ಸಂಪರ್ಕ ಸಭೆ
ಉಡುಪಿ: ಮೆಸ್ಕಾಂ ಉಡುಪಿ ಉಪವಿಭಾಗ ಕಚೇರಿಯಲ್ಲಿ ಮೇ 17 ರಂದು ಬೆಳಗ್ಗೆ 10.30 ಕ್ಕೆ ಜನ ಸಂಪರ್ಕ ಸಭೆ ನಡೆಯಲ್ಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲಿರುವರು. ಗ್ರಾಹಕರು ದೂರವಾಣಿ ಸಂಖ್ಯೆ: 0820-2521761 ಅನ್ನು ಸಂಪರ್ಕಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
ಮಲ್ಪೆ: ಮೇ 16ರಿಂದ ಸೆ. 15ರ ವರೆಗೆ ಪ್ರವಾಸಿ ಬೋಟ್ ಚಟುವಟಿಕೆ ಸ್ಥಗಿತ
ಮಲ್ಪೆ: ಮಳೆಗಾಲದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಲ್ಪೆ ಬಂದರು ವ್ಯಾಪ್ತಿಯ ಮಲ್ಪೆ ಬೀಚ್ ಹಾಗೂ ಸೀ ವಾಕ್ ಪ್ರದೇಶಗಳಲ್ಲಿ ಪ್ರವಾಸಿ ಬೋಟ್ ಚಟುವಟಿಕೆಗಳನ್ನು ಮತ್ತು ಸೈಂಟ್ ಮೇರೀಸ್ ದ್ವೀಪಕ್ಕೆ ತೆರಳುವ ಪ್ರವಾಸಿ ಬೋಟ್ ಚಟುವಟಿಕೆಗಳನ್ನು ಹಾರ್ಬರ್ ಕ್ರಾಫ್ಟ್ ನಿಯಮಗಳ ಅನ್ವಯ ಮೇ 16ರಿಂದ ಸೆ. 15ರ ವರೆಗೆ ಸ್ಥಗಿತಗೊಳಿಸಲಾಗಿದ್ದು, ಜಲಸಾಹಸ ಕ್ರೀಡಾ ಚಟುವಟಿಕೆಗಳಿಗೂ ನಿಷೇಧ ಹೇರಲಾಗಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿಗಳ ಪ್ರಕಟನೆ ತಿಳಿಸಿದೆ.