ಕೊಟ್ಟರೆ ಸಿಎಂ ಹುದ್ದೆ ಕೊಡಿ, ಇಲ್ಲವಾದರೆ ನನಗೆ ಯಾವ ಹುದ್ದೆ ಬೇಡ; ಡಿ.ಕೆ. ಶಿವಕುಮಾರ್

ನವದೆಹಲಿ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶವು ಬಹುಮತದ ಗೆಲುವು ದಾಖಲಿಸಿದ ಬಳಿಕ ಇದೀಗ ಮುಖ್ಯಮಂತ್ರಿ ಯಾರಾಗೋದು ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಸಿಎಂ ಆಯ್ಕೆಯೇ ಹೈಕಮಾಂಡ್ ಗೆ ತಲೆನೋವುವಾಗಿದ್ದು, ಸಿಎಂ ಕುರ್ಚಿಗಾಗಿ ಪಟ್ಟು ಹಿಡಿದಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಜೊತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರು ನಿರಂತರ ಚರ್ಚೆ ನಡೆಸಿದ್ದಾರೆ. ಒಬ್ಬರಾದ ನಂತರ ಒಬ್ಬರಂತೆ ಚರ್ಚಿಸಿದ್ದಾರೆ. ಖರ್ಗೆ ಅವರು ಡಿಕೆಶಿ ಅವರೊಂದಿಗಿನ ಸಭೆ ನಡೆಸಿದ್ದು, ಇದೀಗ ಮಾಜಿ ಮುಖ್ಯಮಂತ್ರಿ […]

ಮೇ.17ರಿಂದ 24: ಇತಿಹಾಸ ಪ್ರಸಿದ್ಧ ಉದ್ಯಾವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ

ಉಡುಪಿ: ಇತಿಹಾಸ ಪ್ರಸಿದ್ಧ ಉದ್ಯಾವರದ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಇದೇ ಬರುವ ಮೇ.17ರಿಂದ 24ರ ವರೆಗೆ ನವೀಕೃತ ತಾಮ್ರ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ ಹಾಗೂ ರಾಶಿಪೂಜಾ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಕೆ. ಉದಯಕುಮಾರ್ ಶೆಟ್ಟಿ ಹೇಳಿದರು. ಇಂದು ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ.19ರಂದು ಮಧ್ಯಾಹ್ನ 3.30ಕ್ಕೆ ಅಂಬಲಪಾಡಿ ದೇವಸಾನದಿಂದ ಹೊರಕಾಣಿಕೆ ಮೆರವಣಿಗೆಗೆ ಆರಂಭಗೊಳ್ಳಲಿದೆ. ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬಳಿಕ […]

ಮೊರಾರ್ಜಿ ದೇಸಾಯಿ ಕಾಲೇಜಿನಲ್ಲಿ ಪಿ.ಯು.ಸಿ ಪ್ರವೇಶಾತಿ: ಅರ್ಜಿ ಆಹ್ವಾನ

ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಕಳ ತಾಲೂಕು ಮಿಯ್ಯಾರು ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜು ಹಾಗೂ ಬ್ರಹ್ಮಾವರ ತಾಲೂಕು ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ವಿಜ್ಞಾನ ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ ಪ್ರಥಮ ಪಿ.ಯು.ಸಿ ದಾಖಲಾತಿಗಾಗಿ, ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಮೀಪದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಶಾಲಾ-ಕಾಲೇಜುಗಳಲ್ಲಿ ಅಗತ್ಯ ದಾಖಲೆಗಳನ್ನು […]

ಯೂನಿಟಿ ಆಸ್ಪತ್ರೆಯಲ್ಲಿ ಅಪರೂಪದ ದೈತ್ಯ ಥೈಮಸ್ ಗೆಡ್ಡೆಯ ಯಶಸ್ವಿ ಶಸ್ತ್ರಕ್ರಿಯೆ ನಡೆಸಿದ ವೈದ್ಯರ ತಂಡ

ಮಂಗಳೂರು: ವೈದ್ಯಕೀಯ ಪರಿಣತಿ ಮತ್ತು ಗಮನಾರ್ಹ ಸಾಧನೆಯಲ್ಲಿ, ಪ್ರಸಿದ್ಧ ಹಿರಿಯ ಸಲಹೆಗಾರ ಕಾರ್ಡಿಯೋ ಥೊರಾಸಿಕ್ ಸರ್ಜನ್ ಡಾ. ಮೂಸಾ ಕುನ್ಹಿ ನೇತೃತ್ವದ ವೈದ್ಯರ ತಂಡವು ಯೂನಿಟಿ ಆಸ್ಪತ್ರೆಯ 37 ವರ್ಷದ ರೋಗಿಯಿಂದ ದೈತ್ಯ ಥೈಮಸ್ ಗೆಡ್ಡೆಯನ್ನು (ಥೈಮೋಮಾ) ಯಶಸ್ವಿಯಾಗಿ ತೆಗೆದುಹಾಕಿದೆ. ಹಲವಾರು ವರ್ಷಗಳಿಂದ ರೋಗಿಯ ಎದೆಯೊಳಗೆ ಗೆಡ್ಡೆ ಬೆಳೆದಿದ್ದು ಪ್ರಮುಖ ಅಪಧಮನಿಗಳು, ವಿಂಡ್ ಪೈಪ್ ಮತ್ತು ಆಹಾರ ಪೈಪ್‌ಗಳನ್ನು ಸಂಕುಚಿತಗೊಳಿಸಿತ್ತು. ರೋಗಿಗೆ ಉಸಿರಾಡಲು, ನುಂಗಲು ಮತ್ತು ಸರಿಯಾಗಿ ಮಲಗಲು ಕಷ್ಟವಾಗುತ್ತಿತ್ತು. ರೋಗಿಯ ಹೃದಯ ಮತ್ತು ಎದೆಯ ಕುಹರದ […]

ಮೇ 31 ರಿಂದ 10 ದಿನಗಳ ಕಾಲ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇ 31 ರಿಂದ 10 ದಿನಗಳ ಕಾಲ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ. ಜೂನ್ 4 ರಂದು, ರಾಹುಲ್ ಗಾಂಧಿ ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಸುಮಾರು 5,000 ಅನಿವಾಸಿ ಭಾರತೀಯರ ರ‍್ಯಾಲಿ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಪ್ಯಾನೆಲ್ ಡಿಸ್ಕಶನ್ ಮತ್ತು ಭಾಷಣಕ್ಕಾಗಿ ವಾಷಿಂಗ್ಟನ್ ಮತ್ತು ಕ್ಯಾಲಿಫೋರ್ನಿಯಾಗೆ ತೆರಳಲಿದ್ದಾರೆ. ಅವರು […]