ಸಿಬಿಐ ಮುಂದಿನ ನಿರ್ದೇಶಕರಾಗಿ ಕರ್ನಾಟಕ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಆಯ್ಕೆ
ನವದೆಹಲಿ: ಕೇಂದ್ರೀಯ ತನಿಖಾ ದಳದ (ಸಿಬಿಐ) ಮುಂದಿನ ನಿರ್ದೇಶಕರಾಗಿ ಕರ್ನಾಟಕ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರನ್ನು ಆಯ್ಕೆ ಮಾಡಲಾಗಿದೆ. ಹಾಲಿ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಅವರ ಅಧಿಕಾರಾವಧಿಯು ಮೇ 25 ರಂದು ಕೊನೆಗೊಳ್ಳಲಿದೆ. ಸೂದ್ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರು ಮಾರ್ಚ್‌ನಲ್ಲಿ ಆರೋಪಗಳನ್ನು ಮಾಡಿದ್ದರು. ಶಿವಕುಮಾರ್ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯದ ಪೊಲೀಸ್ ಮಹಾನಿರ್ದೇಶಕರನ್ನು ಬಂಧಿಸುವಂತೆ […]
ನಳಿನ್ ಕುಮಾರ್ ಹಾಗೂ ಡಿ.ವಿ. ಸದಾನಂದ ಗೌಡ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಶ್ರದ್ಧಾಂಜಲಿ
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಪ್ರತೀಕಾರ ತೆಗೆದುಕೊಂಡ ಕೆಲಸ ನಡೆದಿದೆ. ಪುತ್ತೂರು ಬಸ್ ನಿಲ್ದಾಣದ ಬಳಿ ನಳಿನ್ ಕುಮಾರ್ ಹಾಗೂ ಡಿ.ವಿ ಗೆ ಶ್ರದ್ಧಾಂಜಲಿ ಕೋರಲಾಗಿದೆ. ಜತೆಗೆ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಲಾದ ಬಗ್ಗೆ ವರದಿಯಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ಸಂಘ ಪರಿವಾರದ ಗಟ್ಟಿ ನೆಲ. ಇಲ್ಲಿ ಬಿಜೆಪಿ ಸಶಕ್ತವಾಗಿದೆ. ಪುತ್ತೂರಿನಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಾಣಲು ನೀವೇ ಕಾರಣ ಎಂಬ ಒಕ್ಕಣೆಯಿರುವ ಬ್ಯಾನರ್ ಅನ್ನು ಇದೀಗ ಅಳವಡಿಸಲಾಗಿದೆ. ಈ ಮೂಲಕ ಯಾರು […]
ಮುಸ್ಲಿಂ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ; ಐದು ಉನ್ನತ ಖಾತೆಗಳ ಬೇಡಿಕೆ: ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಾದಿ
ಬೆಂಗಳೂರು: ಕರ್ನಾಟಕದ ಉಪಮುಖ್ಯಮಂತ್ರಿ ಸ್ಥಾನವನ್ನು ತಮ್ಮ ಸಮುದಾಯದ ಅಭ್ಯರ್ಥಿಗಳಿಗೆ ನೀಡಬೇಕು ಎಂದು ಸುನ್ನಿ ಉಲ್ಮಾ ಮಂಡಳಿಯ ಮುಸ್ಲಿಂ ಮುಖಂಡರು ಒತ್ತಾಯಿಸಿದ್ದಾರೆ. ಜೊತೆಗೆ ಐವರು ಮುಸ್ಲಿಂ ಶಾಸಕರನ್ನು ಗೃಹ, ಕಂದಾಯ, ಆರೋಗ್ಯ ಮತ್ತು ಇತರ ಇಲಾಖೆಗಳಂತಹ ಉತ್ತಮ ಖಾತೆಗಳ ಸಚಿವರನ್ನಾಗಿ ಮಾಡಬೇಕು ಎಂದು ಅವರು ಕೋರಿದ್ದಾರೆ. “ಉಪಮುಖ್ಯಮಂತ್ರಿ ಮುಸ್ಲಿಂ ಆಗಿರಬೇಕು, 30 ಸೀಟು ಕೊಡಿ ಎಂದು ಚುನಾವಣೆಗೂ ಮುನ್ನವೇ ಹೇಳಿದ್ದೆವು… ನಮಗೆ 15 ಸಿಕ್ಕಿದ್ದು, ಒಂಬತ್ತು ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದಾರೆ. ಸುಮಾರು 72 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು […]
ಕಾರ್ಕಳ ಬಿಜೆಪಿ ವತಿಯಿಂದ ಸುನಿಲ್ ಕುಮಾರ್ ವಿಜಯೋತ್ಸವ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮ
ಕಾರ್ಕಳ: ಭಾನುವಾರದಂದು ಬಿಜೆಪಿ ಕಾರ್ಕಳ ವತಿಯಿಂದ ಸುನೀಲ್ ಕುಮಾರ್ ವಿಜಯೋತ್ಸವ, ಮತದಾರರಿಗೆ ವಂದನೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಅವರು, ಪ್ರಮೋದ್ ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್, ಅವರು ಹಣಕ್ಕಾಗಿ ಏನು ಮಾಡಲೂ ಸಿದ್ದ. ಅವರು ಪ್ರಹ್ಲಾದ್ ಜೋಷಿ, ಅನಂತ್ ಕುಮಾರ್ ವಿರುದ್ಧ ಸ್ಪರ್ಧಿಸಿ ಸೋತರು, ಎಲ್ಲಾ ಕಡೆಗಳಲ್ಲಿ ಸೋತು ಡೀಲ್ ಕುದುರಿಸುವವರು. ಟೈಗರ್ ಗ್ಯಾಂಗ್ ಹೆಸರಿನಲ್ಲಿ ಉತ್ತರ ಕರ್ನಾಟಕದಲ್ಲಿ ಹಿಂದುಗಳ ಹತ್ಯೆಯನ್ನು ಮಾಡಿಸಿದ್ದಾರೆ, ಆ ಹತ್ಯೆ ಮಾಡಿದ ಕೊಲೆಗಡುಗರು ಈಗಲೂ […]
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಯ್ಕೆ ಜವಾಬ್ದಾರಿ ಖರ್ಗೆ ಹೆಗಲಿಗೆ: ಯಾರಿಗೆ ಒಲಿಯುವುದು ಮುಖ್ಯಮಂತ್ರಿ ಪಟ್ಟ?
ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ತರುವಾಯ, ಹೊಸದಾಗಿ ಆಯ್ಕೆಯಾದ 135 ಕಾಂಗ್ರೆಸ್ ಶಾಸಕರು ಭಾನುವಾರ ಸಂಜೆ ಬೆಂಗಳೂರಿನಲ್ಲಿ ಸಭೆ ಸೇರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕನನ್ನು ಆಯ್ಕೆ ಮಾಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ನೀಡುವ ನಿರ್ಣಯವನ್ನು ಅಂಗೀಕರಿಸಿದರು. ಸಿಎಲ್‌ಪಿ ನಾಯಕ ಮತ್ತು ಆ ಮೂಲಕ ಕರ್ನಾಟಕದ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಶಾಸಕರು ಸಭೆ ನಡೆಸುತ್ತಿದ್ದ ಹೋಟೆಲ್‌ನ ಹೊರಗೆ ಜಮಾಯಿಸಿದ ರಾಜ್ಯ ಪಕ್ಷದ ಅಧ್ಯಕ್ಷ ಡಿ ಕೆ […]