ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಭರತ್ ಶೆಟ್ಟಿ ಜಯಬೇರಿ
ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರ (Mangalore North) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಭರತ್ ಶೆಟ್ಟಿ ಜಯಬೇರಿ ಭಾರಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಹಳ ಪೈಪೋಟಿ ಇದ್ದರೂ ಸಹ ಇದೀಗ 20000 ಕ್ಕೂ ಹೆಚ್ಚು ಮತಗಳ ಅಂತರದಿಂದ ಭರತ್ ಶೆಟ್ಟಿ ಗೆಲುವು ಸಾಧಿಸಿದ್ದಾರೆ. ಭರತ್ ಶೆಟ್ಟಿ ಅವರು 73394 ಮತ ಪಡೆದಿದ್ದಾರೆ ಮತ್ತು ಇನಾಯತ್ ಆಲಿ (ಕಾಂಗ್ರೆಸ್) 43635 ಮತ ಪಡೆದಿದ್ದಾರೆ. ಒಟ್ಟು 29759 ಮತಗಳ ಅಂತರದಲ್ಲಿ ಭರತ್ ಶೆಟ್ಟಿ ಗೆದ್ದಿದ್ದಾರೆ. ಇನ್ನು ಉಡುಪಿಯ ಬಿಜೆಪಿ […]
ISSF ವಿಶ್ವಕಪ್‌ನ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ದಾಖಲೆ ಮುರಿದ ರಿದಮ್ ಸಾಂಗ್ವಾನ್
ಭಾರತೀಯ ಶೂಟರ್ ರಿದಮ್ ಸಾಂಗ್ವಾನ್ ಅವರು ಶನಿವಾರ ಬಾಕುದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಅರ್ಹತಾ ಸುತ್ತಿನಲ್ಲಿ 595 ಅಂಕ ಗಳಿಸುವ ಮೂಲಕ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಇದುವರೆಗಿನ ಅತ್ಯಧಿಕ ಸ್ಕೋರ್ ದಾಖಲಿಸಿದ್ದಾರೆ. 1994 ರಲ್ಲಿ ಬಲ್ಗೇರಿಯಾದ ಡಯಾನಾ ಐರ್ಗೊವಾ ಅವರು ಸ್ಥಾಪಿಸಿದ 594 ರ ಅತ್ಯುತ್ತಮ ಸ್ಕೋರನ್ನು ಸಾಂಗ್ವಾನ್ ಹಿಂದಿಕ್ಕಿದರು. 2002 ಮತ್ತು 2023ರಲ್ಲಿ ಕ್ರಮವಾಗಿ ಚೀನಾದ ಲೂನಾ ಟಾವೊ ಮತ್ತು ಜರ್ಮನಿಯ ಡೊರೀನ್ ವೆನ್ನೆಕ್ಯಾಂಪ್ ಕೂಡ ಸಮಬಲ ಸಾಧಿಸಿದ್ದರು. 19 ವರ್ಷ ವಯಸ್ಸಿನ […]
ಪಕ್ಷದ ಸೋಲಿಗೆ ಹೊಣೆ ಹೊತ್ತ ರಾಜ್ಯಾಧ್ಯಕ್ಷ: ಲೋಕಸಭೆ ಚುನಾವಣೆಗಾಗಿ ಶ್ರಮಿಸುತ್ತೇವೆ ಎಂದ ನಳಿನ್ ಕುಮಾರ್
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಸೋತಿದ್ದು, ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸುತ್ತಿದೆ. ಈ ಸೋಲಿನ ಹೊಣೆಯನ್ನು ತಾವು ಹೊತ್ತುಕೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದು, ಮುಂಬರುವ ಲೋಕಸಭಾ ಚುನಾವಣೆ ಕಡೆ ಗಮನ ಹರಿಸಿ ಗೆಲ್ಲುವ ಭರವಸೆಯನ್ನು ಅವರು ನೀಡಿದ್ದಾರೆ. ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋಲಿನ ಹೊಣೆಯನ್ನು ಸಂಪೂರ್ಣವಾಗಿ ನಾನೇ ಹೊತ್ತುಕೊಳ್ಳುತ್ತೇನೆ. ವಿರೋಧ ಪಕ್ಷದಲ್ಲಿದ್ದುಕೊಂಡು ಒಳ್ಳೆಯ ಕೆಲಸ ಮಾಡುತ್ತೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇವೆ […]
ಕುಂದಾಪುರ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೋಡ್ಗಿ
ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೋಡ್ಗಿ ಅವರು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಅವರು ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ. ಇನ್ನೂ ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ನಿಂತಿದ್ದ ಗುರುರಾಜ್ ಗಂಟಿಹೊಳೆ ಅವರು ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಪರ ನಿಂತಿದ್ದ ಗೋಪಾಲ್ ಪೂಜಾರಿ ಅವರು ಸೋಲನ್ನ ಅನುಭವಿಸಿದ್ದಾರೆ.
ಸತತ ಐದನೇ ಬಾರಿ ಗೆಲುವು ದಾಖಲಿಸಿದ ಯುಟಿ ಖಾದರ್
ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಯುಟಿ ಖಾದರ್ ಮಂಗಳೂರು ಕ್ಷೇತ್ರದಲ್ಲಿ 82,637 ಮತಗಳನ್ನು ಪಡೆಯುವ ಮೂಲಕ ಸತತ ಐದನೇ ಗೆಲುವು ದಾಖಲಿಸಿದ್ದಾರೆ. ಎನ್.ಐ.ಟಿ.ಕೆನಲ್ಲಿ ಮತ ಎಣಿಕೆ ಆರಂಭವಾದಾಗಿನಿಂದ ಖಾದರ್ ಮುನ್ನಡೆ ಕಾಯ್ದುಕೊಂಡಿದ್ದರು. ಇದೇ ವೇಳೆ ಬಿಜೆಪಿಯ ಸತೀಶ್ ಕುಂಪಲ 59,660 ಮತಗಳನ್ನು ಪಡೆದಿದ್ದಾರೆ.