ಬೆಳ್ಮಣ್ ಪರಿಸರದಲ್ಲಿ ಭರ್ಜರಿ ಮತ ಪ್ರಚಾರ

ಕಾರ್ಕಳ: ಶಾಸಕನಾಗಿ, ಸಚಿವನಾಗಿ ಆ ಸ್ಥಾನವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇನೆ ಎಂಬ ವಿಶ್ವಾಸವಿದೆ. ಅನೇಕ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ಸಾಕಾರವಾಗಿದೆ. ಅಂತರ್ಜಲ ವೃದ್ಧಿಗೆ ದಾಖಲೆ ಕಿಂಡಿ ಅಣೆಕಟ್ಟುಗಳು, ಕೆರೆಗಳ ಅಭಿವೃದ್ಧಿ,  ಸರಕಾರಿ, ಆಸ್ಪತ್ರೆ, ಕಟ್ಟಡಗಳ ಆಧುನೀಕರಣ, ಶಿಕ್ಷಣದ ಕ್ಷೇತ್ರದ ಉನ್ನತೀಕರಣ, ಸೇತುವೆಗಳು, ದ್ವಿಪಥ-ಚತುಷ್ಪಥ ರಸ್ತೆಗಳು, ಕಾರ್ಕಳ ಉತ್ಸವದಂತಹ ಅಭೂತಪೂರ್ವ ಕಾರ್ಯಕ್ರಮ, ದೇಶದ ಗಮನ ಸೆಳೆದ ಕರಾವಳಿಯ ಸೃಷ್ಟಿಕರ್ತ ಪರಶುರಾಮನ ಥೀಂ ಪಾರ್ಕ್ ನಿರ್ಮಾಣ, ಕಾರ್ಕಳದ ಜನತೆಗೆ ಉದ್ಯೋಗ ಕಲ್ಪಿಸಿಕೊಡಲಿರುವ ಜವಳಿ ಪಾರ್ಕ್ ಸೇರಿದಂತೆ ಅನೇಕ ಜನಹಿತ ಕಾರ್ಯಗಳು ಸಾಕಾರಗೊಂಡಿವೆ. […]

ಕಾಂಗ್ರೆಸ್ಸಿಗರಿಗೆ ಹಿಂದೂ ಧಾರ್ಮಿಕ ಕೇಂದ್ರಗಳೆಂದರೆ ಮೊದಲಿನಿಂದಲೂ ಅಲರ್ಜಿ

ಕಾರ್ಕಳ: ಕಾರ್ಕಳ ನಗರ ದೇವತೆ ಶ್ರೀ ಮಾರಿಯಮ್ಮ ಹಾಗೂ ಉಚ್ಚಂಗಿ ದೇವಸ್ಥಾನದ ಜೀರ್ಣೊಧ್ಧಾರ ಹಾಗೂ ಬ್ರಹ್ಮಕಲಶ ಸಂಕಲ್ಪ ಇಡೀ ಕಾರ್ಕಳದ ಆಸ್ಥಿಕ ಭಕ್ತರ ಸಾಮೂಹಿಕ ಸಂಕಲ್ಪದ ಪ್ರತಿರೂಪವಾಗಿದೆ. ಯಾವುದೇ ಅಡತಡೆಗಳಿಲ್ಲದೆ ಮಂದಿರ ಭವ್ಯವಾಗಿ ನಿರ್ಮಾಣಗೊಂಡಿದೆ. ರಾಜಕೀಯ ತೆವಳಿಗೋಸ್ಕರ ಕಾಂಗ್ರೆಸ್ ಈಗ ಟೀಕೆ ಮಾಡುತ್ತ ದೇವಸ್ಥಾನದ ನಿರ್ಮಾಣವನ್ನೆ ಪ್ರಶ್ನಿಸುತ್ತಿದೆ, ಇದು ಖಂಡನೀಯ ಎಂದು ನಗರ ಬಿಜೆಪಿ ಅಧ್ಯಕ್ಷ ರವೀಂದ್ರ ಮೊಯ್ಲಿ ಹೇಳಿದ್ದಾರೆ. ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿ ದೀರ್ಘ ಕಾಲದಿಂದ ಸಮಸ್ತ ಭಕ್ತರು, ಸಮಿತಿ ಸದಸ್ಯರು ಸಂಕಲ್ಪ ತೊಟ್ಟಿದ್ದರು. ಒಮ್ಮತದಿಂದ […]

ಎಸ್‌ಎಸ್‌ಎಲ್ ಸಿ ಫಲಿತಾಂಶ: ಪೂರಕ ಪರೀಕ್ಷೆ ನೋಂದಣಿಗೆ ಮೇ.15 ರವರೆಗೆ ಇದೆ ಅವಕಾಶ

ಬೆಂಗಳೂರು: ರಾಜ್ಯದ ಈ ಸಾಲಿನ ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಮರು ಮೌಲ್ಯ ಮಾಪನ ಮಾಡಲು ಮೇ.15 ರಿಂದ ಮೇ.21 ರವರೆಗೆ ಅವಕಾಶವಿದೆ. ಪೂರಕ ಪರೀಕ್ಷೆ ನೋಂದಣಿಗೆ ಮೇ.08 ರಿಂದ ಮೇ. 15 ರವರೆಗೆ ಅವಕಾಶ ನೀಡಲಾಗಿದೆ. ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳು ಉತ್ತರ ಪತ್ರಿಕೆ ಫೋಟೋಕಾಪಿ ಪಡೆಯಲು ಮೇ. 08 ರಿಂದ ಮೇ.14ರವರೆಗೆ ಅವಕಾಶವಿದೆ.. ಪೂರಕ ಪರೀಕ್ಷೆ ನೋಂದಣಿಗೆ ಮೇ.08 ರಿಂದ ಮೇ. 15 ರವರೆಗೆ ಅವಕಾಶ ನೀಡಲಾಗಿದೆ ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆಯು […]

ಕಾಪು ಜನತೆಗೆ ಗೋ ರುದ್ರಭೂಮಿ ಸ್ಥಾಪನೆಯ ಭರವಸೆ ನೀಡಿದ ಗುರ್ಮೆ ಸುರೇಶ್ ಶೆಟ್ಟಿ

ಕಾಪು: ಕಾಪು ಕ್ಷೇತ್ರದಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಅವರು ಚುನಾಯಿತರಾದರೆ ಕಾಪು ಕ್ಷೇತ್ರದಲ್ಲಿ ಸುಸಜ್ಜಿತ ಗೋ ರುದ್ರಭೂಮಿ ಸ್ಥಾಪಿಸುವುದಾಗಿ ಅವರು ಮತದಾರರಿಗೆ ಭರವಸೆಯನ್ನು ನೀಡಿದ್ದಾರೆ. ಗೋ ಪ್ರೇಮಿ ಆಗಿರುವ ಗುರ್ಮೆ ಸುರೇಶ್ ಶೆಟ್ಟಿ ಈಗಾಗಲೇ ಗೋ ವಿಹಾರಧಾಮ ಸ್ಥಾಪಿಸಿ ನೂರಾರು ಗೋವುಗಳನ್ನು ಸಾಕುತ್ತಿದ್ದಾರೆ. ಅವರೀಗ ತಮ್ಮ ಪ್ರಣಾಳಿಕೆಯಲ್ಲಿ ಗೋವುಗಳಿಗೆ ಗೌರವಯುತ ಅಂತ್ಯಸಂಸ್ಕಾರಕ್ಕಾಗಿ ಸುಸಜ್ಜಿತ ರುದ್ರಭೂಮಿ ನಿರ್ಮಾಣ ಮಾಡುವುದಾಗಿ ವಚನ ನೀಡಿದ್ದಾರೆ. ಇದಕ್ಕೆ ತಮಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಪ್ರೇರಣೆಯಾಗಿದ್ದಾರೆ ಹಾಗೂ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕರ್ನಾಟಕದ […]

ಉಡುಪಿ ಸೇರಿ ರಾಜ್ಯದ 5 ಜಿಲ್ಲೆಗಳು ಕೋವಿಡ್ ಮುಕ್ತ..

ಬೆಂಗಳೂರು: ರಾಜ್ಯದಲ್ಲಿ ಕೆಲ ದಿನಗಳಿಂದ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆ ಕಂಡಿದ್ದರಿಂದ ಐದು ಜಿಲ್ಲೆಗಳು ಕೋವಿಡ್ ಮುಕ್ತವಾಗಿದ್ದು, 18 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣ ಒಂದಂಕಿಯಲ್ಲಿದೆ. ಬಾಗಲಕೋಟೆ, ಬೆಳಗಾವಿ, ರಾಮನಗರ, ಉಡುಪಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣವಿಲ್ಲ. ರಾಜ್ಯದಲ್ಲಿ 670 ಸಕ್ರಿಯ ಪ್ರಕರಣಗಳಿದ್ದು, 400 ಪ್ರಕರಣ ಬೆಂಗಳೂರಿನಲ್ಲಿಯೇ ಇದೆ. ಶಿವಮೊಗ್ಗ (75), ಬೆಂಗಳೂರು ಗ್ರಾಮಾಂತರ (47), ಮೈಸೂರು (30), ಉತ್ತರ ಕನ್ನಡ (15), ಬಳ್ಳಾರಿ (14), ತುಮಕೂರು (11) ಹಾಗೂ ಚಾಮರಾಜನಗರ (11) […]