ಸಚಿವ ಸುನಿಲ್ ಕುಮಾರ್ ಕಾಂತಾವರ ಮತ್ತು ಮಿಯ್ಯಾರು ಗ್ರಾಮದ ಮತದಾರಲ್ಲಿ ಮತಯಾಚನೆ
ಕಾರ್ಕಳ: ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂತಾವರ ಮತ್ತು ಮಿಯ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮತದಾರರನ್ನು ಭೇಟಿ ಮಾಡಿದರು. ಮೇ10 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ನೀಡಿದರ ಮೂಲಕ ಕಾರ್ಕಳವನ್ನು ಅಭಿವೃದ್ಧಿಗೊಳಿಸುವಂತೆ ಕೋರಿದರು.
ಮಂಗಳೂರು: ಶ್ರೀದೇವಿ ವಿದ್ಯಾ ಸಮೂಹ ಸಂಸ್ಥೆಗಳ ಮುಖ್ಯಸ್ಥೆ ಮೈನಾ ಸದಾನಂದ ಶೆಟ್ಟಿ ಇನ್ನಿಲ್ಲ
ಮಂಗಳೂರು: ನಗರದ ಖ್ಯಾತ ಹೋಟೆಲ್ ಉದ್ಯಮಿ, ಶ್ರೀದೇವಿ ವಿದ್ಯಾ ಸಮೂಹ ಸಂಸ್ಥೆಗಳ ಮುಖ್ಯಸ್ಥೆ ಹಾಗೂ ಇಂಟರ್‌ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅವರ ಪತ್ನಿ ಮೈನಾ ಎಸ್ ಶೆಟ್ಟಿ ಅವರು ಬುಧವಾರ ರಾತ್ರಿ 8 ಗಂಟೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಾವಧಿಯ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಪತಿ, ಇಬ್ಬರು ಪುತ್ರರು ಮತ್ತು ಹಲವಾರು ಬಂಧುಗಳನ್ನು ಅಗಲಿದ್ದಾರೆ.
ಮಣಿಪಾಲ ಹುಡ್ಕೋ ಕಾಲನಿಗೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ
ಮಣಿಪಾಲ: ಮಣಿಪಾಲ ವಾರ್ಡಿನ ಎಲ್.ಐ.ಜಿ ಕಾಲೋನಿ ಹಾಗೂ ಹೂಡ್ಕೊ ಕಾಲನಿಗೆ ಭೇಟಿ ನೀಡಿದ ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಪಕ್ಷದ ಪರವಾಗಿ ಮತ ಯಾಚಿಸಿದರು.
ಜಗದ್ಗುರು ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ಆಶೀರ್ವಾದ ಪಡೆದ ವಿನಯ್ ಕುಮಾರ್ ಸೊರಕೆ
ಉಡುಪಿ: ಸೋತರೂ ಎದೆಗುಂದದೆ ಜನರ ಜೊತೆ ಇದ್ದು ಬಹಳಷ್ಟು ಜನಸೇವೆಯನ್ನು ಮಾಡಿದ್ದೀರಿ. ಈ ಬಾರಿ ಜನ ಬದಲಾವಣೆ ಬಯಸುತ್ತಿದ್ದಾರೆ. ಯಾವುದೇ ಕಪ್ಪು ಚುಕ್ಕೆ ಇಲ್ಲದೇ 40 ವರ್ಷಗಳ ಕಾಲ ರಾಜಕೀಯ ಮಾಡಿ ಜನರ ಸೇವೆ ಮಾಡುತ್ತಿರುವ ನಿಮ್ಮೊಂದಿಗೆ ಈ ಬಾರಿ ನಮ್ಮ ಸಮಾಜ ಇದೆ ಎಂದು ಜಗದ್ಗುರು ಆನೆಗೊಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪಡುಕುತ್ಯಾರು ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ ಹೇಳಿದರು. ಪಡುಕುತ್ಯಾರಿನಲ್ಲಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ವಿನಯ್ ಕುಮಾರ್ ಸೊರಕೆ ತಮ್ಮ ಅಭಿವೃದ್ಧಿ […]
ಅಧಿಕ ರಕ್ತದೊತ್ತಡ: ರಿಕ್ಷಾ ಚಾಲಕ ಸಾವು..!!
ಉಡುಪಿ: ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ನಿಟ್ಟೂರಿನ ಫಿಲಿಪ್ ಎಡ್ವರ್ಡ್ ಲೂವಿಸ್ (46) ಸಾವನ್ನಪ್ಪಿದ್ದಾರೆ. ಅವಿವಾಹಿತರಾಗಿದ್ದ ಅವರು ಉಡುಪಿಯಲ್ಲಿ ರಿಕ್ಷಾ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದರು. ವಿಪರೀತ ಮದ್ಯಸೇವನೆ ಮಾಡುತ್ತಿದ್ದ ಅವರು ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಮೇ 1ರಂದು ಅಂಬಲಪಾಡಿಯ ಬಳಿ ಅಸ್ವಸ್ಥರಾಗಿದ್ದ ಅವರನ್ನು ಸಮಾಜ ಸೇವಕ ವಿಶು ಶೆಟ್ಟಿಯವರು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೇ 2ರಂದು ನಿಧನ ಹೊಂದಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.