777 ಚಾರ್ಲಿ ಚಿತ್ರದ ಯಶಸ್ಸಿಗೆ ಮತ್ತೊಂದು ಗರಿ: ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಸ್ತಿಗೆ ಭಾಜನರಾದ ಕಿರಣ್ ರಾಜ್ ಕೆ

ಕನ್ನಡದ ಭರವಸೆಯ ನಿರ್ದೇಶಕರಲ್ಲಿ ಒಬ್ಬರಾದ ಕಿರಣ್ ರಾಜ್ ಕೆ ತಮ್ಮ ಚೊಚ್ಚಲ ನಿರ್ದೇಶನದಲ್ಲಿಯೇ ತಾವೇನನ್ನುವುದನ್ನು ತೋರಿಸಿಕೊಟ್ಟಿದ್ದರು. ಜಗತ್ತಿನಾದ್ಯಂತ ಪ್ರಾಣಿಪ್ರೇಮಿಗಳನ್ನು ಆಕರ್ಷಿಸಿದ 777 ಚಾರ್ಲಿ ಚಿತ್ರದ ಶ್ರೇಯಸ್ಸು, ಚಾರ್ಲಿಗೆ ಎಷ್ಟು ಸಲ್ಲಬೇಕೋ ಈ ಚಿತ್ರವನ್ನು ಮನೋಜ್ಞವಾಗಿ ಚಿತ್ರಿಸಿದ ಕಿರಣ್ ರಾಜ್ ಗೂ ಅಷ್ಟೇ ಸಲ್ಲಬೇಕು. ಈ ಚಿತ್ರದಲ್ಲಿನ ಅವರ ಶ್ಲಾಘನೀಯ ಕಾರ್ಯವನ್ನು ಗುರುತಿಸಿ, ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದ 13 ನೇ ಆವೃತ್ತಿಯು ಕಿರಣ್ ರಾಜ್ ಕೆ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಬಗ್ಗೆ […]
ಇಂದು ರೇಡಿಯೊ ಮಣಿಪಾಲ ಚಿಣ್ಣರ ದನಿಯಲ್ಲಿ ಬಾಲ ಪ್ರತಿಭೆ ಹಂಸಿನಿ ಎಸ್ ಬಂಗೇರ ಬೈಲೂರು ಕಾರ್ಯಕ್ರಮ

ಮಣಿಪಾಲ: ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ಸಮುದಾಯ ಬಾನುಲಿ ಕೇಂದ್ರ ರೇಡಿಯೊ ಮಣಿಪಾಲ್ ಮತ್ತು ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಸಹಯೋಗದಲ್ಲಿ ‘ಚಿಣ್ಣರ ದನಿ’ ಕಾರ್ಯಕ್ರಮವು ಇಂದು ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಕಾರ್ಯಕ್ರಮದ ಮರುಪ್ರಸಾರ ಮೇ 4 ರಂದು ಮಧ್ಯಾಹ್ನ 1.30ಕ್ಕೆ ನಡೆಯಲಿದೆ. ಇಂದು ಪ್ರಸಾರವಾಗುವ ಕಾರ್ಯಕ್ರಮದ 7 ನೇ ಸಂಚಿಕೆಯಲ್ಲಿ ಬಾಲ ಪ್ರತಿಭೆ ಹಂಸಿನಿ ಎಸ್ ಬಂಗೇರ ಬೈಲೂರು ಭಾಗವಹಿಸಲಿದ್ದಾರೆ ಎಂದು ರೇಡಿಯೊ ಮಣಿಪಾಲದ ಪ್ರಕಟಣೆ ತಿಳಿಸಿದೆ.
ಕೊಲ್ನಾಡಿನಲ್ಲಿ ಮೋದಿ ಹವಾ: ಕಣ್ಮಣಿಯ ಕಣ್ತುಂಬಿಕೊಂಡ ಸಾವಿರಾರು ಕಾರ್ಯಕರ್ತರು!

ಮಂಗಳೂರು:ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳಿಂದ ಪ್ರಚಾರ ಕಾರ್ಯ ಬಿರುಸುಗೊಂಡಿದೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು ಹೊರವಲಯದ ಮುಲ್ಕಿ ಕೊಲ್ನಾಡಿನಲ್ಲಿ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡರು. ಸಾವಿರಾರು ಸಂಖ್ಯೆಯ ಕಾರ್ಯಕರ್ತನ್ನು ಉದ್ದೇಶಿಸಿ ಮಾತನಾಡಿದ ಅವರು ಈ ರಾಜ್ಯದ ಮತ್ತು ದೇಶದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 13 ವಿಧಾನಸಭಾ ಕ್ಷೇತ್ರಗಳ ಬಿಜೆಪಿ […]
ಉಡುಪಿ: ವಿದೇಶದಲ್ಲಿರುವ ಮತದಾರರಿಗೂ ಬುಲಾವ್…!!

ಉಡುಪಿ: ಜಿಲ್ಲಾದ್ಯಂತ ಚುನಾವಣ ಕಣ ರಂಗೇರಿದ್ದು, ಮೇ 10 ರಂದು ನಡೆಯುವ ಮತದಾನಕ್ಕೆ ವಿದೇಶಗಳಿಂದಲೂ ಊರಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಉದ್ಯೋಗ, ಉನ್ನತ ಶಿಕ್ಷಣ ಸಹಿತ ವಿವಿಧ ಕಾರಣಕ್ಕೆ ಹೊರ ದೇಶಗಳಲ್ಲಿ ನೆಲೆಸಿರುವ ಜಿಲ್ಲೆಯವರಿಗೆ ವಿವಿಧ ಪಕ್ಷಗಳ ಕಾರ್ಯಕರ್ತರು ಹಾಗೂ ಅವರ ಕುಟುಂಬದ ಸದಸ್ಯರು ಕರೆ ಮಾಡಿ, ಚುನಾವಣೆಗೆ ಬರುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಈಗಾಗಲೇ ರಜೆಯ ಮೇಲೆ ತವರಿಗೆ ಬಂದಿಳಿದ್ದಾರೆ. ಇನ್ನು ಕೆಲವರು ಈ ವಾರಾಂತ್ಯದೊಳಗೆ ಬರುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಕೆಲವರು ತಮ್ಮ […]
ಶಂಕರಪುರ: ಸ್ಕೂಟರ್‌ಗೆ ಟೆಂಪೋ ಢಿಕ್ಕಿ; ಮಹಿಳೆಗೆ ಗಾಯ..!!

ಶಿರ್ವ: ಇಲ್ಲಿನ ಕುರ್ಕಾಲು ಗ್ರಾಮದ ಶಂಕರಪುರ ಪೇಟೆಯಲ್ಲಿ ಶಂಕರಪುರದಿಂದ ಉಡುಪಿ ಕಡೆ ಹೋಗುತ್ತಿದ್ದ ಸ್ಕೂಟರ್‌ಗೆ ಕಟಪಾಡಿ ಕಡೆಯಿಂದ ಶಿರ್ವ ಕಡೆಗೆ ಹೋಗುತ್ತಿದ್ದ ಟೆಂಪೋ ಢಿಕ್ಕಿ ಹೊಡೆದು ಮಹಿಳೆ ರತ್ನಾ (45) ಅವರು ಗಾಯಗೊಂಡಿದ್ದಾರೆ. ಢಿಕ್ಕಿ ಹೊಡೆದ ಟೆಂಪೋ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ. ಸ್ಥಳೀಯರು ಗಾಯಾಳುವನ್ನು ಉಪಚರಿಸಿದ್ದು, ಗಾಯಾಳು ಮಹಿಳೆ ಉಡುಪಿಯ ಖಾಸಗಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.