ಕಾರ್ಕಳ ಕಾಂಗ್ರೆಸ್ ಗೆ ಸೇರ್ಪಡೆಯಾದ ಬೆಳ್ಮಣ್ ಬಿಜೆಪಿ ಕಾರ್ಯಕರ್ತರು
ಕಾರ್ಕಳ: ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಎ.25 ರಂದು ‘ಯುವ ಉದಯ’ ಯುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಿತು. ಈ ಕಾರ್ಯಕ್ರಮದಲ್ಲಿ ಅಜಯ್ ನೇತೃತ್ವದಲ್ಲಿ 8 ಜನ ಬೆಳ್ಮಣ್ ಬಿಜೆಪಿ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಲ್, ಬ್ಲಾಕ್ ಆದ್ಯಕ್ಷರಾದ ಸದಾಶಿವ ದೇವಾಡಿಗ, ಕೆಪಿಸಿಸಿ ಸದಸ್ಯರಾದ ಸುರೇಂದ್ರ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ನ ದೀಪಕ್ ಕೋಟ್ಯಾನ್, ಅರ್ಚನಾ ದೇವಾಡಿಗ, ಸಿ.ಟಿ ರಂಜಿತ್, ಕಾರ್ಕಳ ಯುವ ಕಾಂಗ್ರೆಸ್ ನ […]
ಕಾಂಗ್ರೆಸ್ ಕಾರ್ಯಕರ್ತರನ್ನೆ ಮರಳಿ ಪಕ್ಷ ಸೇರ್ಪಡೆ
ಕಾರ್ಕಳ: ಕಾರ್ಕಳ ಕ್ಷೇತ್ರದ ಕಾಂಗ್ರೆಸ್ಸಿಗೆ ಕಾರ್ಯಕರ್ತರ ಅಭಾವ ತಲೆದೋರಿದೆ. ಮುಜುಗರದಿಂದ ಪಾರಾಗಲು ಕಾಂಗ್ರೆಸ್ ಕಾರ್ಯಕರ್ತರನ್ನೆ ಮರಳಿ ಕರೆತಂದು ಪಕ್ಷದ ಧ್ವಜ ನೀಡಿ ಪಕ್ಷ ಸೇರ್ಪಡೆಗೊಳಿಸುವ ನಾಟಕವಾಡಿ ಅಬ್ಬರದ ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಹೇಳಿದ್ದಾರೆ. ಕಾಂಗ್ರೆಸ್ ಕಳೆದ ನಾಲ್ಕು ವರುಷ ಕಾರ್ಕಳದಲ್ಲಿ ಅಸ್ತಿತ್ವವನ್ನೆ ಹೊಂದಿರಲಿಲ್ಲ. ಮನೆಯೊಂದು ಹತ್ತಾರು ಬಾಗಿಲು ಎನ್ನುವ ಹಾಗೇ ಕಾರ್ಕಳದಲ್ಲಿ ಕಾಣೆಯಾಗಿ ದಿವಾಳಿತನಕ್ಕೆ ತಳ್ಳಲ್ಪಟ್ಟಿತ್ತು. ಕಾಂಗ್ರೆಸ್ ಅನ್ನು ಹುಡುಕುವ ಪರಿಸ್ಥಿತಿ ಇದೆ. ಈಗ ಇದ್ದೇವೆ ಎನ್ನುವುದನ್ನು ತೋರ್ಪಡಿಸಿಕೊಳ್ಳಲು ಪಕ್ಷದ […]
ರೈಲ್ವೆ ಹಳಿ ವಿಸ್ತರಣೆ ಕಾರ್ಯ ಮುಗಿದ ನಂತರ ತಿರುವನಂತಪುರಂ-ಮಂಗಳೂರು ನಡುವೆ ವಂದೇ ಭಾರತ್ ವಿಸ್ತರಣೆ ಸಾಧ್ಯತೆ
ಕೊಚ್ಚಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಿರುವನಂತಪುರಂನಿಂದ ಕಾಸರಗೋಡಿಗೆ ಚಾಲನೆ ನೀಡಿದ ಕೇರಳದ ಮೊದಲ ವಂದೇ ಭಾರತ್ ರೈಲನ್ನು ಮುಂದಿನ ದಿನಗಳಲ್ಲಿ ಮಂಗಳೂರಿನವರೆಗೆ ವಿಸ್ತರಿಸುವ ಸಾಧ್ಯತೆಯಿದೆ. ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಹಸಿರು ಬಾವುಟ ತೋರಿದ ನಂತರ ತಮ್ಮ ಭಾಷಣದಲ್ಲಿ, ತಿರುವನಂತಪುರಂ-ಶೋರನೂರು ವಿಭಾಗದಲ್ಲಿ ರೈಲ್ವೆ ಹಳಿ ವಿಸ್ತರಣೆ ಕಾರ್ಯ ಮುಗಿದ ನಂತರ ತಿರುವನಂತಪುರಂ ಮತ್ತು ಮಂಗಳೂರು ನಡುವೆ ಸೆಮಿ ಹೈಸ್ಪೀಡ್ ರೈಲುಗಳನ್ನು ಓಡಿಸಬಹುದು ಎಂದು ಪ್ರಧಾನಿ ಮೋದಿ ಹೇಳಿದರು. ಸಿಗ್ನಲಿಂಗ್ ವ್ಯವಸ್ಥೆಯನ್ನು ಸುಧಾರಿಸಿದ ನಂತರ […]
ಪ್ರಚಾರಕ್ಕೆ ಕಿಚ್ಚು ಹಚ್ಚಿದ ಕಿಚ್ಚ ಸುದೀಪ್: ಮೊಳಕಾಲ್ಮೂರಿನಲ್ಲಿ ನಟನನ್ನು ನೋಡಲು ಮುಗಿ ಬಿದ್ದ ಜನ
ಮೊಳಕಾಲ್ಮೂರು: ಕನ್ನಡ ಚಿತ್ರನಟ ಕಿಚ್ಚ ಸುದೀಪ್ ಅವರು ಬುಧವಾರ ಚಿತ್ರದುರ್ಗದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ತಿಪ್ಪೇಸ್ವಾಮಿ ಪರ ಪ್ರಚಾರ ನಡೆಸಿದರು. ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡ ವೀಡಿಯೊದಲ್ಲಿ, ಕಿಚ್ಚ ಸುದೀಪ್ ತಿಪ್ಪೇಸ್ವಾಮಿ ಮತ್ತು ಇತರ ಬಿಜೆಪಿ ನಾಯಕರೊಂದಿಗೆ ಟ್ರಕ್‌ನಲ್ಲಿ ನಿಂತು ಜನಸಮೂಹದತ್ತ ಕೈ ಬೀಸುತ್ತಿರುವುದು ಕಂಡುಬಂದಿದೆ. #WATCH | Kannada actor Kiccha Sudeep campaigns for Bharatiya Janata Party candidate from Molakalmuru Assembly constituency, S Thippeswamy, in […]
ವಿಧಾನಸಭೆ ಚುನಾವಣೆ 27ರಂದು ರಾಹುಲ್ ಗಾಂಧಿ ಉಚ್ಚಿಲಕ್ಕೆ: ಸ್ಥಳ ಪರಿಶೀಲನೆ
ಪಡುಬಿದ್ರಿ: ಉಚ್ಛಿಲದ ಮಹಾಲಕ್ಷ್ಮೀ ದೇವಸ್ಥಾನದ ಶಾಲಿನಿ ಜಿ ಶಂಕರ್ ಸಭಾಂಗಣದಲ್ಲಿ ಏ. 27ರಂದು ನಡೆಯಲಿರುವ ಮೀನುಗಾರರ ಸಮಾವೇಶ ಹಾಗೂ ಸಂವಾದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಗಮನದಿಂದ ಮಂಗಳವಾರ ಸ್ಥಳ ಪರಿಶೀಲನೆ ನಡೆಸಲಾಯಿತು. ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನೇತೃತ್ವದಲ್ಲಿ ಸಭೆ, ಸಂವಾದ ನಡೆಯುವ ಸ್ಥಳವನ್ನು ಎಸ್ ಪಿ ಅಕ್ಷಯ್ ಮಚ್ಛಿಂದ್ರ ತಂಡ ಪರಿಶೀಲನೆ ನಡೆಸಿದರು. ಮುಖಂಡರಾದ ಅಶೋಕ್ ಕುಮಾರ ಕೊಡವೂರು, ಮಂಜುನಾಥ ಸುಣೇಗಾರ್, ಹರೀಶ್ ಕಿಣಿ, ಜಿತೇಂದ್ರ ಪುಟಾರ್ಡೋ, ಅಖಿಲೇಶ್ ಕೋಟ್ಯಾನ, […]