ಮೂರನೇ ಸುತ್ತಿನ ಉದ್ಯೋಗ ಕಡಿತಕ್ಕೆ ಮುಂದಾದ ಸಾಮಾಜಿಕ ದೈತ್ಯ ಸಂಸ್ಥೆ ಮೆಟಾ: 4 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್

ನವದೆಹಲಿ: ಫೇಸ್ ಬುಕ್, ವಾಟ್ಸ್ ಆಪ್, ಇನ್ಸ್ಟಾ ಗ್ರಾಮ್ ನ ಮಾತೃ ಸಂಸ್ಥೆಯಾದ ಮೆಟಾ ಉದ್ಯೋಗಿಗಳು ಏಪ್ರಿಲ್ 19 ರಂದು ವಜಾಗೊಳಿಸುವ ಪ್ರಕ್ರಿಯೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ ಎಂದು ಭಾರತದಲ್ಲಿನ ಸಾಮಾಜಿಕ ಮಾಧ್ಯಮ ದೈತ್ಯದ ಕನಿಷ್ಠ ಇಬ್ಬರು ಸಿಬ್ಬಂದಿಗಳು ಸೂಚಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಮತ್ತು ವೋಕ್ಸ್ ಸೇರಿದಂತೆ ಅಂತರಾಷ್ಟ್ರೀಯ ವರದಿಗಳು ಸೂಚಿಸಿವೆ. ಮೆಟಾ ಸಂಸ್ಥೆಯು ಕನಿಷ್ಟ 4 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಲಿದ್ದು ಮುಂದಿನ ಸುತ್ತಿನ ಉದ್ಯೋಗ ಕಡಿತಗಳು ಇಂದು ಪ್ರಾರಂಭವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಇತ್ತೀಚೆಗೆ ಎರಡು ಹಂತಗಳಲ್ಲಿ […]

ಸೊಂಟ ಮುರಿತ ಆಸ್ಪತ್ರೆಗೆ ದಾಖಲು..

ಉಡುಪಿ: ನಗರದ ಸಿಟಿ ಬಸ್ ನಿಲ್ದಾಣದ ಹತ್ತಿರ ಸರಸ್ಪತಿ ಶಾಲೆಯ ಹಿಂಬದಿ ಸೊಂಟದ ಸ್ವಾಧೀನ ಕಳೆದು ಕೊಂಡು ಬಿದ್ದ ವೃದ್ಧನನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಜಿಲ್ಲಾಸ್ಪತ್ರೆಗೆ ಇಂದು ದಾಖಲಿಸಿದ್ದಾರೆ. ಈತ ಕೂಲಿ ಕಾರ್ಮಿಕ ಎಂದು ತಿಳಿದು ಬಂದಿದ್ದು. ಈತನ ಹೆಸರು ಬಿ.ದಕ್ಷಿಣ ಮೂರ್ತಿ (60) ತಂದೆ ಬಸಪ್ಪ,ಚಿಕ್ಕರಾಯನ ಹಳ್ಳಿ,ತುಮಕೂರು ಜಿಲ್ಲೆ ಎಂದು ತಿಳಿದು ಬಂದಿದೆ. ನಂತರ ಆಟೋ ಚಾಲಕರ ನೆರವಿನಿಂದ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಸಂಬಂಧಿಕರು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ

ಮರಕ್ಕೆ ಕಟ್ಟಿ ಹಾಕಿ ಸುಲಿಗೆ, ಕೊಲೆ ಬೆದರಿಕೆ – ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ

ಪಡುಬಿದ್ರಿ: ನಿವೃತ್ತ ಬಿಎಸ್ಸೆನ್ನೆಲ್‌ ಉದ್ಯೋಗಿ, ಪೂಂದಾಡು ನಿವಾಸಿ ಲಕ್ಷ್ಮಿ ನಾರಾಯಣ ಅವರು ಇನ್ನಾ ಗ್ರಾಮದ ಮೈಕ್ರೋವೇವ್‌ ಸ್ಟೇಶನ್‌ಗೆ ಎ. 17ರಂದು ಹೋಗಿದ್ದಾಗ ಸ್ಥಳೀಯ ಆರೋಪಿಗಳಾದ ಶೈಲೇಶ್‌, ವಿಠ್ಠಲ್, ರಂಜಿತ್‌ ಹಾಗೂ ಇನ್ನಿಬ್ಬರು ಕೈಯಿಂದ, ಮರದ ಸೋಂಟೆಯಿಂದ, ಹೆಲ್ಮೆಟ್‌, ಬೆಲ್ಟ್‌ಗಳಿಂದ ಹೊಡೆದು ಅಲ್ಲೇ ಮರವೊಂದಕ್ಕೆ ಕಟ್ಟಿಹಾಕಿ, ಮೊಬೈಲ್‌, ಪರ್ಸ್‌ ಹಾಗೂ ಬೈಕಿನ ಕೀಯನ್ನು ಕಿತ್ತುಕೊಂಡು ಪರ್ಸ್‌ನಲ್ಲಿದ್ದ 3000 ರೂ.ಗಳನ್ನು ಸುಲಿಗೆ ಮಾಡಿ, ಕೊಲೆ ಬೆದರಿಕೆಯನ್ನು ಒಡ್ಡಿರುವುದಾಗಿ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಕ್ಸ್ಮಿ ನಾರಾಯಣ ಅವರ ತಂದೆಯ ತಂಗಿ […]

ಕರ್ನಾಟಕ ಬ್ಯಾಂಕ್ ಸೆಂಟಿನರಿ ಮಹೋತ್ಸವ: ಏ.17 ರಿಂದ ಜು.17ರ ವರೆಗೆ ವಿಶೇಷ ಗೃಹ ಸಾಲ ಅಭಿಯಾನ

ಮಂಗಳೂರು: ಖಾಸಗಿ ಬ್ಯಾಂಕ್ ಗಳಲ್ಲೆ ಅಗ್ರಗಣ್ಯ ಸ್ಥಾನದಲ್ಲಿರುವ ಕರ್ಣಾಟಕ ಬ್ಯಾಂಕ್‌ ತನ್ನ ಶತಮಾನೋತ್ಸವ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಗ್ರಾಹಕರಿಗಾಗಿ ಏ.17 ರಿಂದ ಜು.17ರ ವರೆಗೆ ವಿಶೇಷ ಅಭಿಯಾನ-‘ಕೆಬಿಎಲ್‌ ಸೆಂಟಿನರಿ ಮಹೋತ್ಸವ’ದ ಅಂಗವಾಗಿ ಗೃಹ ಸಾಲವನ್ನು ನೀಡಲಿದೆ. ದೇಶದಾದ್ಯಂತ ವ್ಯಾಪಿಸಿರುವ ಬ್ಯಾಂಕಿನ ಎಲ್ಲ 901 ಶಾಖೆಗಳಲ್ಲಿ ಈ ವಿಶೇಷ ಅಭಿಯಾನದ ಕೊಡುಗೆಗಳನ್ನು ಗ್ರಾಹಕರು ಪಡೆಯಬಹುದು. ಕರ್ಣಾಟಕ ಬ್ಯಾಂಕ್‌ ಗೃಹ ಸಾಲಗಳಿಗಾಗಿ ಡಿಜಿಟಲ್‌ ಲೋನ್‌ ತಂತ್ರಾಶಗಳನ್ನು ಅಭಿವೃದ್ಧಿಪಡಿಸಿದೆ. ಗ್ರಾಹಕರು ತಾವಿದ್ದಲ್ಲಿಂದ ಅವರ ಅನುಕೂಲಕರ ಸಮಯದಲ್ಲಿ ಈ ಸಾಲ ಸೌಲಭ್ಯಗಳನ್ನು ಡಿಜಿಟಲ್‌ […]

ಪೋಕ್ಸೋ ಪ್ರಕರಣ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ…!!!

ಉಡುಪಿ: ಎರಡು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪೋಕ್ಸೋ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾ ಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಸಾಹಿಲ್ (23) ಶಿಕ್ಷೆಗೆ ಗುರಿಯಾದ ಆರೋಪಿ. ಬೈಂದೂರು ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ಬಾಲಕಿ ಸಾಗರದಲ್ಲಿ ವಾಸ ಮಾಡಿಕೊಂಡಿದ್ದು, ಆರೋಪಿಯು ಅಲ್ಲಿಯೇ ಇದ್ದ ಬಾಲಕಿಯ ತಂದೆಯ ಹೊಟೇಲ್‌ ಬಳಿ ಕೆಲಸ ಮಾಡುತ್ತಿದ್ದ. ಈ ವೇಳೆ ಆರೋಪಿ ಬಾಲಕಿಯನ್ನು […]