ಕೊಕರ್ಣೆ: ಗ್ರಾ.ಪಂವ್ಯಾಪ್ತಿಯ 3 ರಿಂದ 10 ನೇ ವಾರ್ಡ್ ಗಳ ಚುನಾವಣಾ ಪೂರ್ವಭಾವಿ ಸಭೆ
ಕೊಕ್ಕರ್ಣೆ: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಯುಕ್ತ ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆ ಇಂದು ಕೊಕ್ಕರ್ಣೆ ಗ್ರಾ.ಪಂ ವ್ಯಾಪ್ತಿಯ ಕಾಂಗ್ರೆಸ್ ಮುಖಂಡ ವೆಂಕಟೇಶ್ ಸುವರ್ಣ ಇವರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಪ್ರಸಾದ್ ರಾಜ್ ಕಾಂಚನ್, ತಾ.ಪಂ. ಸದಸ್ಯೆ ಡಾ.ಅನಿತಾ ಶೆಟ್ಟಿ, ಗ್ರಾ.ಪಂ ಸದಸ್ಯ ನರಸಿಂಹ ಪೂಜಾರಿ, ಜಿ.ಪಂ. ಸದಸ್ಯ ಸುಧಾಕರ ಶೆಟ್ಟಿ ಮೇರ್ಮಾಡಿ, ಆನಂದ ಮರಕಾಲ ಮೊದಲಾದವರು ಉಪಸ್ಥಿತರಿದ್ದರು.
ಮಲಾಡ್ ಕನ್ನಡ ಸಂಘದ ವತಿಯಿಂದ ವಾರ್ಷಿಕ ಸತ್ಯನಾರಾಯಣ ಮಹಾಪೂಜೆ
ಮುಂಬಯಿ: ಮುಂಬೈ ಉಪನಗರ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಯಾದ ಮಲಾಡ್ ಕನ್ನಡ ಸಂಘ ಇದರ ವಾರ್ಷಿಕ ಧಾರ್ಮಿಕ ಕಾರ್ಯಕ್ರಮ ಸತ್ಯನಾರಾಯಣ ಮಹಾಪೂಜೆ ಏಪ್ರಿಲ್ 14ರಂದು ಸಂಘದ ಕಚೇರಿ 4ಬಿ- 21 ಯುನಿಟಿ ಅಪಾರ್ಟ್ಮೆಂಟ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಬಫ್- ಹೀರಾ ನಗರ ಮಾರ್ವೆ ರೋಡ್ ಮಲಾಡ್ ಪಶ್ಚಿಮ ಇಲ್ಲಿ ಶ್ರದ್ಧಾ ಭಕ್ತಿಯೊಂದಿಗೆ ವಿಜೃಂಭಣೆಯಿಂದ ಜರುಗಿತು. ಸಂಘದ ಸದಸ್ಯ ಬಾಂಬೆ ಬಂಟ್ಸ್ ಎಸೋಶಿಯೇಶನ್ ನ ಅಧ್ಯಕ್ಷ ಸಿ.ಎ. ಸುರೇಂದ್ರ ಶೆಟ್ಟಿ ಹಾಗೂ ಪ್ರಭಾ ಸುರೇಂದ್ರ ಶೆಟ್ಟಿ ನೇತೃತ್ವದಲ್ಲಿ ವಿಷ್ಣು […]
142.86 ಕೋಟಿ ಜನಸಂಖ್ಯೆಯೊಂದಿಗೆ ಚೀನಾವನ್ನು ಹಿಂದಿಕ್ಕಿದ ಭಾರತ: ವಿಶ್ವಸಂಸ್ಥೆ
ಹೊಸದಿಲ್ಲಿ: ವಿಶ್ವಸಂಸ್ಥೆ ಇಂದು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಯುಎನ್ ಅಂದಾಜಿನ ಪ್ರಕಾರ, ಚೀನಾದ 142.57 ಕೋಟಿಯ ವಿರುದ್ಧ ಭಾರತದ ಜನಸಂಖ್ಯೆ 142.86 ಕೋಟಿ ತಲುಪಿದೆ ಎಂದು ಅದು ಹೇಳಿದೆ. ವಿಶ್ವಸಂಸ್ಥೆಯು 1950 ರಲ್ಲಿ ಜನಸಂಖ್ಯೆಯ ಅಂಕಿಅಂಶಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ ನಂತರ ಭಾರತವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವುದು ಇದೇ ಮೊದಲು. ಚೀನಾವು ಕೆಲವು ಸಮಯದಿಂದ ಜನಸಂಖ್ಯಾ […]
ಅಜೆಕಾರು: ಶಾಲೋಮ್ ಪ್ರಗತಿ ವಾಣಿಜ್ಯ ಸಂಕೀರ್ಣ ಹಾಗೂ ವಸತಿ ಸಮುಚ್ಚಯ ಉದ್ಘಾಟನೆ
ಅಜೆಕಾರು: ಅಜೆಕಾರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಶಾಲೋಮ್ ಪ್ರಗತಿ ವಾಣಿಜ್ಯ ಸಂಕೀರ್ಣ ಹಾಗೂ ವಸತಿ ಸಮುಚ್ಚಯದ ಉದ್ಘಾಟನಾ ಕಾರ್ಯಕ್ರಮವು ಏ.14ರಂದು ನಡೆಯಿತು. ವಾಣಿಜ್ಯ ಸಂಕೀರ್ಣ ಮಾತು ವಸತಿ ಸಮುಚ್ಚಯವನ್ನು ಅಜೆಕಾರು ಸೇಕ್ರೆಡ್ ಹಾರ್ಟ್ ನ ಧರ್ಮ ಗುರುಗಳಾದ ಪ್ರವೀಣ್ ಅಮೃತ್ ಮಾರ್ಟಿಸ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹಳ್ಳಿಯ ಜನರು ಯಾವುದೇ ಸವಲತ್ತುಗಳಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ಶಾಲೋಮ್ ಪ್ರಗತಿ ವಾಣಿಜ್ಯ ಸಂಕೀರ್ಣದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ. ಈ ಉದ್ಯಮ ಕೇವಲ ವಾಣಿಜ್ಯ ಚಟುವಟಿಕೆಗೆ ಸೀಮಿತವಾಗದ ಸಮಾಜವನ್ನು […]
ಕಾರ್ಕಳ: ಒಂದೇ ದಿನ ಆರು ಮಂದಿ ನಾಮಪತ್ರ ಸಲ್ಲಿಕೆ
ಕಾರ್ಕಳ: ಕಾರ್ಕಳ ವಿಧಾನ ಸಭಾ ಚುನಾವಣೆಯಲ್ಲಿ ಸ್ವರ್ಧಿಸಲು ಇಚ್ಚಿಸಿ ಎಪ್ರಿಲ್ 18 ರಂದು ಆರು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮುನಿಯಾಲು ಉದಯಕುಮಾರ್ ಶೆಟ್ಟಿ- ಇಂಡಿಯನ್ ನ್ಯಾಶನಲ್ ಕಾಂಗ್ರೆಸ್, ಶ್ರೀಕಾಂತ ಪೂಜಾರಿ -ಜನತಾದಳ ಜಾತ್ಯತೀತ, ಡಾ.ಮಮತಾ ಹೆಗ್ಡೆ-ಪಕ್ಷೇತರ, ಪ್ರಮೋದ್ ಮುತಾಲಿಕ್ – ಪಕ್ಷೇತರ, ಹರೀಶ್ ಅಧಿಕಾರಿ- ಪಕ್ಷೇತರ, ಸುಧಾಕರ ಆಚಾರ್ಯ- ಪಕ್ಷೇತರ ಇವರು ನಾಮಪತ್ರ ಸಲ್ಲಿಸಿದವರು. ಇನ್ನು ಕಾರ್ಕಳ ವಿಧಾನಸಭೆಯ ಚುನಾವಣಾ ಅಧಿಕಾರಿ ಮದನ್ ಮೋಹನ್ ನಾಮಪತ್ರಗಳನ್ನು ಸ್ವೀಕರಿಸಿದರು.