ಕಾರ್ಕಳ: ಒಂದೇ ದಿನ ಆರು ಮಂದಿ ನಾಮಪತ್ರ ಸಲ್ಲಿಕೆ

ಕಾರ್ಕಳ: ಕಾರ್ಕಳ ವಿಧಾನ ಸಭಾ ಚುನಾವಣೆಯಲ್ಲಿ ಸ್ವರ್ಧಿಸಲು ಇಚ್ಚಿಸಿ ಎಪ್ರಿಲ್ 18 ರಂದು ಆರು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಮುನಿಯಾಲು ಉದಯಕುಮಾರ್ ಶೆಟ್ಟಿ- ಇಂಡಿಯನ್ ನ್ಯಾಶನಲ್ ಕಾಂಗ್ರೆಸ್, ಶ್ರೀಕಾಂತ ಪೂಜಾರಿ -ಜನತಾದಳ ಜಾತ್ಯತೀತ, ಡಾ.ಮಮತಾ ಹೆಗ್ಡೆ-ಪಕ್ಷೇತರ, ಪ್ರಮೋದ್ ಮುತಾಲಿಕ್ – ಪಕ್ಷೇತರ, ಹರೀಶ್ ಅಧಿಕಾರಿ- ಪಕ್ಷೇತರ, ಸುಧಾಕರ ಆಚಾರ್ಯ- ಪಕ್ಷೇತರ ಇವರು ನಾಮಪತ್ರ ಸಲ್ಲಿಸಿದವರು.

ಇನ್ನು ಕಾರ್ಕಳ ವಿಧಾನಸಭೆಯ ಚುನಾವಣಾ ಅಧಿಕಾರಿ ಮದನ್ ಮೋಹನ್ ನಾಮಪತ್ರಗಳನ್ನು ಸ್ವೀಕರಿಸಿದರು.