ಸುರಭಿ ಜೈಸಿರಿ ಸಾಂಸ್ಕೃತಿಕ ವರ್ಷಧಾರೆ: ಖ್ಯಾತ ಗೊಂಬೆ ಯಕ್ಷಗಾನ ಕಲಾವಿದ ಭಾಸ್ಕರ ಕೊಗ್ಗ ಕಾಮತ್ ಅವರಿಗೆ ಪ್ರತಿಷ್ಠಿತ ಬಿಂದುಶ್ರೀ ಪ್ರಶಸ್ತಿ

ಉಡುಪಿ: ಪ್ರಪಂಚದಾದ್ಯಂತ ಯಕ್ಷಗಾನ ಗೊಂಬೆಯಾಟದ ಸೊಗಡನ್ನು ಪ್ರಪಂಚದಾದ್ಯಂತ ಪಸರಿಸಿದ ಕೊಗ್ಗ ಕಾಮತ್ ಅವರ ದಾರಿಯಲ್ಲಿಯೇ ಅವರ ಮಗ ಭಾಸ್ಕರ ಕೊಗ್ಗ ಕಾಮತ್ ಅವರು ಹೆಜ್ಜೆ ಹಾಕಿರುವುದು ಕಲೆಯ ಉಳಿವಿನ ದೃಷ್ಟಿಯಿಂದ ಶ್ಲಾಘನೀಯ. ಕಲೆ, ಕಲಾವಿದರಿಗೆ ಪ್ರೋತ್ಸಾಹ ಸಮಾಜದ ಆದ್ಯ ಕರ್ತವ್ಯವಾಗಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಬೈಂದೂರಿನಲ್ಲಿ ಅವರು ಭಾನುವಾರ ಶ್ರೀ ಸೇನೇಶ್ವರ ದೇವಳದ ಆವರಣದಲ್ಲಿ ಬೈಂದೂರಿನ ಪ್ರಸಿದ್ಧ ಸಾಂಸ್ಕೃತಿಕ ಸಂಘಟನೆ […]

ಬಿಜೆಪಿ ಮೊದಲ‌ ಪಟ್ಟಿ ರಿಲೀಸ್: ಉಡುಪಿಗೆ ಯಶ್ ಪಾಲ್, ಕಾಪುಗೆ ಸುರೇಶ್ ಶೆಟ್ಟಿ ಗುರ್ಮೆ

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, 189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ. ಹಲವು ಸುತ್ತುಗಳ ಸಭೆ, ಸುದೀರ್ಘ ಸಮಾಲೋಚನೆಗಳ ಬಳಿಕ ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿ ಬಿಡುಗಡೆಗೂ ಮುನ್ನ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜ್ಯದ 31 ಜಿಲ್ಲೆಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಸುಮಾರು 25 ಸಾವಿರ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದು ಹೇಳಿದರು. […]

ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣೆ: ಡಿ. ಹರ್ಷೇಂದ್ರ ಕುಮಾರ್ ಅವರಿಗೆ ಅಗರಿ ಪ್ರಶಸ್ತಿ

ಸುರತ್ಕಲ್: ಯಕ್ಷಗಾನದಲ್ಲಿ ಕಾಲಮಿತಿ ಅಳವಡಿಕೆ ನಿಟ್ಟಿನಲ್ಲಿ ಹೊಸ ಪ್ರಯೋಗ ಅನಿವಾರ್ಯವಾದ ಕಾರಣ ಅದನ್ನು ಧರ್ಮಸ್ಥಳ ಮೇಳದಲ್ಲಿ ಜಾರಿಗೆ ತರಲಾಗಿದೆ. ಇದು ಬಳಿಕ ಇತರ ಮೇಳಗಳಲ್ಲಿಯೂ ಆರಂಭವಾಗಿದೆ. ಮೇಳದ ಯಜಮಾನನ ಮಿತಿ ಬಿಟ್ಟು ಚೌಕಿಯಲ್ಲಿ ಕಲಾವಿದರೊಂದಿಗೆ ತಾನು ಬೆರೆತ ಕಾರಣ ಮೇಳ ಯಶಸ್ಸು ಕಂಡಿದೆ. ಯಕ್ಷಗಾನ ಕಲಾವಿದರು ತ್ಯಾಗ ಜೀವಿಗಳಾಗಿದ್ದು, ಅವರಿಗೆ ಕಲೆಯೇ ತಪಸ್ಸಾಗಿದೆ. ಕಲಾವಿದರೇ ತನಗೆ ಆಸ್ತಿಯಾಗಿದ್ದಾರೆ. ಯಕ್ಷಗಾನ ಕಲಾವಿದರಿಗೆ ವೇಷ ನಿಗದಿಯನ್ನು ಅಭಿಮಾನಿಗಳು ನಿಗದಿಪಡಿಸುವುದು ಸರಿಯಲ್ಲ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ […]

ಬ್ರಹ್ಮಾವರ: ಎಸ್. ಎಂ.ಎಸ್ ಕಾಲೇಜಿನಲ್ಲಿ ಫುಡ್ ಫೆಸ್ಟ್ 2023

ಬ್ರಹ್ಮಾವರ: ಎಸ್.ಎಂ.ಎಸ್.ಕಾಲೇಜಿನ ವಿದ್ಯಾರ್ಥಿ ಸಂಘದ ವತಿಯಿಂದ ಫುಡ್ ಫೆಸ್ಟ್ 2023 ಕಾರ್ಯಕ್ರಮವು ಏಪ್ರಿಲ್ 8 ರಂದು ಅದ್ದೂರಿಯಾಗಿ ನೆರವೇರಿತು. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು 18 ತಂಡಗಳಲ್ಲಿ 200 ಕ್ಕೂ ಅಧಿಕ ಆಹಾರ ಪದಾರ್ಥಗಳನ್ನು ತಯಾರಿಸಿ ತೀರ್ಪುಗಾರರ ಹಾಗೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಓ.ಎಸ್.ಸಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ, ಕಾಲೇಜಿನ ಸಂಚಾಲಕರಾದ ರೆ.ಫಾ ಎಂ.ಸಿ.ಮಥಾಯ್, ಓ.ಎಸ್.ಸಿ.ಶಿಕ್ಷಣ ಸಮೂಹ ಸಂಸ್ಥೆಯ ಉಪಾಧ್ಯಕ್ಷ ರೆ.ಫಾ. ಲಾರೆನ್ಸ್ ಡಿಸೋಜ, ಪ್ರಧಾನ ಕಾರ್ಯದರ್ಶಿ ಅಲೆನ್ ರೋಹನ್ ವಾಜ್, ಕಾರ್ಯದರ್ಶಿ ಅಲ್ವರಿಸ್ ಡಿಸಿಲ್ವಾ, […]

ಶತಾಯುಷಿ ಮತದಾರರ ಆಹ್ವಾನ ಅಭಿಯಾನಕ್ಕೆ ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಚಾಲನೆ

ಕುಂದಾಪುರ: ಉಡುಪಿ ಜಿಲ್ಲೆಯ 209 ಮಂದಿ ಶತಾಯುಷಿ ಮತದಾರರಿಗೆ ಮೇ 10 ರಂದು ನಡೆಯುವ ಮತದಾನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸುವ ಜಿಲ್ಲಾ ಸ್ವೀಪ್‌ ಸಮಿತಿಯ ವಿಶೇಷ ಅಭಿಯಾನಕ್ಕೆ ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಅವರು ಸೋಮವಾರ ತಲ್ಲೂರು ಗ್ರಾ.ಪಂ. ನ ಉಪ್ಪಿನಕುದ್ರುವಿನಲ್ಲಿ 101 ವರ್ಷದ ಆಲಿಸ್‌ ಅವರಿಗೆ ಆಹ್ವಾನ ಪತ್ರ ನೀಡಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿ ಕಾರಿಗಳು, ಇದು ವಿಶೇಷ ಅಭಿಯಾನ. ಈವರೆಗಿನ ಎಲ್ಲ ಚುನಾವಣೆಗಳಲ್ಲಿ ಭಾಗವಹಿಸಿ ರುವ ಆಲಿಸ್‌ ಅವರನ್ನು ಸಮ್ಮಾನಿಸಿದ್ದೇವೆ. ಇದೊಂದು ಖುಷಿಯ ಸಂಗತಿ. ಪ್ರಜಾಪ್ರಭುತ್ವ […]