‘ಹೆಮ್ಮೆಯ’ ಬಿಜೆಪಿ ಕಾರ್ಯಕರ್ತರೊಂದಿಗೆ ‘ವಿಶೇಷ’ ಸೆಲ್ಫಿ ಕ್ಲಿಕ್ಕಿಸಿಕೊಂಡ ಪ್ರಧಾನಿ ಮೋದಿ…!!

ಚೆನ್ನೈ: ಶನಿವಾರದಿಂದ ದಕ್ಷಿಣ ಭಾರತ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರುವ ಮುನ್ನ ತೆಳಂಗಾಣ ಹಾಗೂ ತಮಿಳುನಾಡಿಗೆ ಹೋಗಿದ್ದರು. ಶನಿವಾರ ತೆಲಂಗಾಣ ಮತ್ತು ಚೆನ್ನೈಗೆ ಒಂದು ದಿನದ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಸೆಲ್ಫಿ ತೆಗೆದುಕೊಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ತಮಿಳುನಾಡು ಭೇಟಿಯ ಕೊನೆಯಲ್ಲಿ ಅವರು ಬಿಜೆಪಿಯ ಕಾರ್ಯಕರ್ತನ ಜತೆ ಸೆಲ್ಫಿ ತೆಗೆಸಿಕೊಂಡಿದ್ದು ವಿಶೇಷ. ಬಿಜೆಪಿಯ ದಿವ್ಯಾಂಗ ಕಾರ್ಯಕರ್ತರಾದ ತಿರು ಎಸ್. ಮಣಿಕಂಠನ್‌ ಅವರನ್ನು ಪ್ರಧಾನಿ ಮೋದಿ ಭೇಟಿಯಾದರು ಮತ್ತು […]

ಮನೆ ಮೇಲೆ ತೆಂಗಿನ ಮರ ಉರುಳಿ ಹಾನಿ; ಮನೆ ಮಂದಿ ಅಪಾಯದಿಂದ ಪಾರು

ಬೆಳ್ತಂಗಡಿ: ಪಡಂಗಡಿ ಗ್ರಾಮದ ಬದ್ಯಾರು ಸಮೀಪದ ಕಳೆಂಜಿರೋಡಿ ಜೊಬೆಲ್ಲಾ ಫೆಲಿಕ್ಸ್‌ ಅವರ ಮನೆಗೆ ಶುಕ್ರವಾರ ರಾತ್ರಿ ತೆಂಗಿನ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಗೀಡಾಗಿದೆ.ಫೆಲಿಕ್ಸ್‌ ಅವರ ಪುತ್ರ ನವೀನ ಹಾಗೂ ಆತನ ಪತ್ನಿ, ಇಬ್ಬರು ಮಕ್ಕಳು ಮನೆಯಲ್ಲಿ ವಾಸವಾಗಿದ್ದರು. ಆದರೆ ಪೂಜೆ ನಿಮಿತ್ತ ಅವರೆಲ್ಲರೂ ಚರ್ಚ್‌ಗೆ ತೆರಳಿದ್ದರಿಂದ ಜೀವಹಾನಿ ತಪ್ಪಿದೆ. ಘಟನಾ ಸ್ಥಳಕ್ಕೆ ಪಂಚಾಯತ್‌ ಸಿಬಂದಿ ಭೇಟಿ ನೀಡಿದ್ಧಾರೆ.

ಹುಲಿ ಗಣತಿ ವರದಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ; 10 ವರ್ಷಗಳಲ್ಲಿ ಶೇ.75ರಷ್ಟು ಹುಲಿಗಳ ಸಂಖ್ಯೆ ಏರಿಕೆ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಕೆ.ಎಸ್.ಯು ಘಟಿಕೋತ್ಸವ ಭವನದಲ್ಲಿ ಹುಲಿ ಗಣತಿ ವರದಿ ಬಿಡುಗಡೆ ಮಾಡಿದ್ದಾರೆ. ಕೆ.ಎಸ್.ಯು ಘಟಿಕೋತ್ಸವ ಭವನದಲ್ಲಿ ಏರ್ಪಡಿಸಿದ್ದ ಹುಲಿ ಯೋಜನೆಯ ಸುವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಹುಲಿ ಗಣತಿ ವರದಿ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, 2022ರ ವರದಿ ಪ್ರಕಾರ ದೇಶದಲ್ಲಿರುವ ಹುಲಿಗಳ ಸಂಖ್ಯೆ 3,167 ಎಂದರು. ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಶೇ.75ರಷ್ಟು ಹುಲಿಗಳ ಸಂಖ್ಯೆ ಏರಿಕೆಯಾಗಿದೆ. ಭಾರತದಲ್ಲಿ ಹುಲಿಗಳ ಸಂತತಿ ಹೆಚ್ಚಿರುವುದು ಗೌರವದ ಕ್ಷಣ ಎಂದು ಹೇಳಿದರು. ಹುಲಿ ಸಂರಕ್ಷಣಾ ಸಾಫಲ್ಯ […]

ಚುನಾವಣೆ ಹಿನ್ನೆಲೆ ಉಡುಪಿ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಮಣಿಪಾಲದಲ್ಲಿ ಪೊಲೀಸ್ ಪಥಸಂಚಲನ

ಮಣಿಪಾಲ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಡುಪಿ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಮಣಿಪಾಲದಲ್ಲಿ ಪೊಲೀಸ್ ಪಥ ಸಂಚಲನವು ಶನಿವಾರ ನಡೆಯಿತು. ಪರ್ಕಳದಿಂದ ಆರಂಭಗೊಂಡ ಪಥಸಂಚಲನವು ಮಣಿಪಾಲದ ಪ್ರಮುಖ ರಸ್ತೆಯಲ್ಲಿ ಸುಮಾರು ನಾಲ್ಕು ಕಿ.ಮೀ. ಸಾಗಿ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಸಮಾಪ್ತಿಗೊಂಡಿತು. ಇದರಲ್ಲಿ ಪ್ಯಾರಾ ಮಿಲಿಟರಿ ಪಡೆಯ 60 ಮಂದಿ ಮಹಿಳಾ ಸಿಬ್ಬಂದಿ, ಉಡುಪಿ ಪೊಲೀಸ್ ಉಪವಿಭಾಗದ 75 ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 150 ಮಂದಿ ಪೊಲೀಸರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ […]

ಸರಣಿ ರಜೆಯಿಂದಾಗಿ ಕರಾವಳಿಯ ಪ್ರವಾಸಿ ಸ್ಥಳಗಳಿಗೆ ಜೀವಕಳೆ: ಮಲ್ಪೆ ಬೀಚ್‌ಗೆ ಪ್ರವಾಸಿಗರ ದಂಡು

ಮಲ್ಪೆ: ಸರಣಿ ರಜೆಯಿಂದಾಗಿ ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಮಲ್ಪೆ ಬೀಚ್‌ನಲ್ಲಿ ಜನ ಸಮೂಹ ಹೆಚ್ಚಾಗಿದೆ.ಸ್ಥಳೀಯರು ಸೇರಿದಂತೆ ಬೆಂಗಳೂರು, ಮೈಸೂರು ಕಡೆಗಳಿಂದ ಇನ್ನುಳಿದಂತೆ   ಕೇರಳ ರಾಜ್ಯದಿಂದ ಪ್ರವಾಸಿಗರು ಆಗಮಿಸಿದ್ದಾರೆ. ಜನ ಹೆಚ್ಚಿನ ಸಂಖ್ಯೆಯಲ್ಲಿ ಕಡಲತೀರಕ್ಕೆ ಲಗ್ಗೆ ಇಡುತ್ತಿದ್ದಾರೆ. ಮುಂಬಯಿ ಕನ್ನಡಿಗರು ಊರಿನತ್ತ ಅಗಮಿಸುತ್ತಿದ್ದ ಜನ ಹೆಚ್ಚಳಕ್ಕೂ ಕಾರಣವಾಗಿದೆ. ಮಲ್ಪೆ ಬೀಚ್‌ ಮತ್ತು ಸೈಂಟ್‌ ಮೇರಿ ಐಲ್ಯಾಂಡ್‌ನ‌ಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದಿದ್ದಾರೆ. ನೂರಾರು ಪ್ರವಾಸಿ ವಾಹನಗಳು ಮಲ್ಪೆ ಕಡೆಗೆ ಅಗಮಿಸುತ್ತಿದ್ದು ಇದರಿಂದಾಗಿ ಪಾರ್ಕಿಂಗ್‌ […]