ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ- 2023 ರ ಪ್ರಮುಖ ವಿವರಗಳು ಇಲ್ಲಿವೆ

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ- ಹೊಸ ಸಣ್ಣ ಉಳಿತಾಯ ಯೋಜನೆಯನ್ನು ಬಜೆಟ್ 2023 ರಲ್ಲಿ ಪರಿಚಯಿಸಲಾಯಿತು. ವಿಶೇಷವಾಗಿ ಮಹಿಳೆಯರಲ್ಲಿ ಹೂಡಿಕೆಯನ್ನು ಪ್ರೋತ್ಸಾಹಿಸಲು ಮಹಿಳಾ ಹೂಡಿಕೆದಾರರಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಮಾರ್ಚ್ 31, 2023 ರಂದು ಹೊರಡಿಸಲಾದ ಗೆಜೆಟ್ ಅಧಿಸೂಚನೆಯ ಮೂಲಕ ಸರ್ಕಾರವು ಯೋಜನೆಯನ್ನು ಏಪ್ರಿಲ್ 1 ರಿಂದ ಜಾರಿಗೆ ತಂದಿದೆ. ಈ ಯೋಜನೆಯಡಿ ತೆರೆಯಲಾದ ಖಾತೆಯು ಏಕವ್ಯಕ್ತಿ ಪ್ರಕಾರದ ಖಾತೆಯಾಗಿರುತ್ತದೆ ಮತ್ತು ಖಾತೆಯನ್ನು ಪೋಸ್ಟ್ ಆಫೀಸ್ ಅಥವಾ ಯಾವುದೇ ಅಧಿಕೃತ ಬ್ಯಾಂಕ್‌ನಲ್ಲಿ ತೆರೆಯಬಹುದಾಗಿದೆ ಸರ್ಕಾರಿ ಗೆಜೆಟ್ ಅಧಿಸೂಚನೆಯ ಪ್ರಕಾರ […]

ಮಣಿಪಾಲ: ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಮಣಿಪಾಲ: ಶಿವಳ್ಳಿ ಗ್ರಾಮದ ಇಂದಿರಾ ಶಿವರಾಮ್ ಪಾಲಿಟೆಕ್ನಿಕ್ ಕಾಲೇಜಿನ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಉಡುಪಿ ಸೆನ್ ಮತ್ತು ಪಿಐ ಪೊಲೀಸ್ ತಂಡವು ಎ.2 ರಂದು ಬಂಧಿಸಿದ್ದಾರೆ. ಬಂಧಿತನಿಂದ 2.110 ಕೆಜಿ ಗಾಂಜಾ ಹಾಗೂ 1 ಮೊಬೈಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಅಕ್ಷಯ್ ಹಾಕೆ ತಿಳಿಸಿದ್ದಾರೆ.

ನಗರದ ಪಣಿಯಾಡಿಯಲ್ಲಿ ಮೃತಪಟ್ಟ ರಾಷ್ಟ್ರ ಪಕ್ಷಿ ನವಿಲು: ಮಣಿಪಾಲದ ತಿಮ್ಮಕ್ಕ ಟ್ರೀ ಪಾರ್ಕ್ ನ ಗಸ್ತು ಅರಣ್ಯಾಧಿಕಾರಿ ಪಾಣ ಎಂಬವರಿಗೆ ಹಸ್ತಾಂತರ….

ಉಡುಪಿ: ನಗರದ ಪಣಿಯಾಡಿಯಲ್ಲಿ ರಾಷ್ಟ್ರ ಪಕ್ಷಿ ನವಿಲು ಜನ ವಸತಿ ಪ್ರದೇಶದಲ್ಲಿ ಅಸ್ಪಸ್ಥಗೊಂಡಂತೆ ಸೋಮವಾರ ಬೆಳಗ್ಗೆ ಕಂಡು ಬಂತು. ಕೂಡಲೇ ಸ್ಥಳೀಯರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ರವಾನಿಸಿದ್ದಾರೆ‌.ಸ್ಥಳೀಯರ ಮಾಹಿತಿಯ ಮೇರೆಗೆ ಸಳಾಕಾಗಮಿಸಿದ ನಿತ್ಯಾನಂದ ಬಳಕಾಡುವರು ನವಿಲಿನ ದೇಹವನ್ನು ಪರಿಶೀಲಿಸಿದಾಗ ನವಿಲು ಮೃತಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ .ಕಳೆದ ರಾತ್ರಿ ಹಾರುವ ಸಂದರ್ಭ ನವಿಲು ವಿದ್ಯುತ್ ತಂತಿಗೆ ಸಿಲುಕಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ನವಿಲಿನ ಕಳೇಬರವನ್ನು ನಿತ್ಯಾನಂದ ಒಳಕಾಡು ಸ್ಥಳದಿಂದ ರವಾನಿಸಿದ್ದಾರೆ. […]

ಬಂಟಕಲ್ಲು ತಾಂತ್ರಿಕ ಕಾಲೇಜು ಬಳಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ನಿಂದ ಹಾರಿದ ಬೆಂಕಿ ಕಿಡಿ : ಬೆಂಕಿ ನಂದಿಸಲು ಅಗ್ನಿಶಾಮಕದಳ ಹರಸಾಹಸ

  ಶಿರ್ವ: ಯಿಂದ ಕಾಡಿಗೆ ಬೆಂಕಿ ಹೊತ್ತಿಕೊಂಡ ಘಟನೆ ಬಂಟಕಲ್ಲು ತಾಂತ್ರಿಕ ಕಾಲೇಜು ಬಳಿ ಭಾನುವಾರ ಸಂಭವಿಸಿದೆ.ತಾಂತ್ರಿಕ ಕಾಲೇಜು ಬಳಿ ಇದ್ದ ಟ್ರಾನ್ಸ್ ಫಾರ್ಮರ್ ನಿಂದ ಬೆಂಕಿಯ ಕಿಡಿ ಬಿದ್ದ ಪರಿಣಾಮ ತರೆಗೆಲೆಗೆ ಬೆಂಕಿ ಹತ್ತಿ ಕಾಡಿಗೆ ವ್ಯಾಪಿಸಿದೆ. ಬೆಂಕಿಯ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ ಬಳಿಕ ಸ್ಥಳೀಯರು ಸೇರಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಹತೋಟಿಗೆ ಬರಲಿಲ್ಲ ಈ ವೇಳೆ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದ ಮೀರ್ ಮಹಮ್ಮದ್ ಗೌಸ್ […]

ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರಿಂದ ಶ್ರದ್ಧಾಭಕ್ತಿಯಿಂದ ಗರಿಗಳ ಭಾನುವಾರ (ಪಾಮ್‌ ಸಂಡೆ)ಆಚರಣೆ

ಉಡುಪಿ : ಯೇಸು ಸ್ವಾಮಿ ಜೆರುಸಲೇಂ ನಗರವನ್ನು ಪ್ರವೇಶಿಸಿದ ಸಂಕೇತವಾಗಿ ಆಚರಿಸುವ ಗರಿಗಳ ಭಾನುವಾರ (ಪಾಮ್‌ ಸಂಡೆ)ಯನ್ನು ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಡಾ. ಜೆರಾಲ್ಡ್‌ ಐಸಾಕ್‌ ಲೋಬೊ ಅವರು ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ನಡೆದ ಧಾರ್ಮಿಕ ವಿಧಿವಿಧಾನದಲ್ಲಿ ಭಾಗವಹಿಸಿದರು. ಈ ವೇಳೆ ಚರ್ಚ್‌ನ ಪ್ರಧಾನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಉಡುಪಿ ಧರ್ಮಪ್ರಾಂತ್ಯದ ಕುಲಪತಿ ವಂ|ಡಾ|ರೋಶನ್ ಡಿ’ಸೋಜಾ, ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂ | […]