ಯುಗಾದಿಯ ಈ ಹರುಷದ ಹಸಿರಲ್ಲಿ ಇನ್ನಷ್ಟು ಬೆಳಗೋಣ ಬನ್ನಿ: ಯುಗಾದಿ ಹಬ್ಬಕ್ಕೊಂದು ಅಕ್ಷರ ತೋರಣ
ಆಚೆಯ ತೋಟದಲ್ಲೆಲ್ಲೋ ಮಾವಿನ ಮಿಡಿ ಉದುರಿ ಚಂದದ ಸದ್ದಾದಾಗ, ಪುಟ್ಟ ಪುಟ್ಟ ಕಂಗಳಲ್ಲಿ ಪರೀಕ್ಷೆಯ ಬಿಸಿಯೆಲ್ಲಾ ಕಳೆದು ರಜೆ ಅನ್ನೋ ಐಸ್ ಕ್ಯಾಂಡಿ ನಗು ಮೂಡೋವಾಗ, ಅದಕ್ಕಿಂತಲೂ ಹೆಚ್ಚಾಗಿ ತೋಟದ ತುಂಬೆಲ್ಲಾ ಬಣ್ಣ ಬಣ್ಣದ ಹೂವುಗಳು ತೊನೆದಾಡುವಾಗ, ಹೋ ಹೋ ಯುಗಾದಿ ಇಷ್ಟು ಬೇಗ ಬಂದೇ ಬಿಡ್ತಾ ಅನ್ನಿಸಿ ಕಣ್ಣೂ ಹಬ್ಬವಾಗಿ ಬಿಡುತ್ತದೆ. ಯುಗಾದಿ ಬರುವ ಈ ತಿಂಗಳು ಅಂದರೆ ಪೆಪ್ಪರ್ ಮಿಂಟಿಗಿಂತಲೂ ಜಾಸ್ತಿ ರುಚಿ, ಅದಮ್ಯ ಉತ್ಸಾಹ ಅಮಿತಾನಂದದ ಚಿಗುರು ಈ ಯುಗಾದಿ. ಇಲ್ಲಿನ ಒಂದೊಂದು […]
ನಿಮಗೆ ಗೊತ್ತಿರಲಿ ಬಿಪಿ ಇದ್ದವರಿಗೆ, ಇಂತಹ ಹಣ್ಣು- ತರಕಾರಿಗಳು ಬಹಳ ಒಳ್ಳೆಯದು!
How to lower blood pressure naturally: ತಜ್ಞರ ಪ್ರಕಾರ, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸುಲಭವಾದ ಮಾರ್ಗವೆಂದರೆ ಆರೋಗ್ಯಕಾರಿಯಾದ ಆಹಾರ ಪದ್ಧತಿ ಹಾಗೂ ಆರೋಗ್ಯಕರವಾದ ಜೀವನಶೈಲಿಯನ್ನು ಅನುಸರಿಸಿಕೊಂಡು ಹೋದರೆ, ಈ ಕಾಯಿಲೆಯನ್ನು ಅಚ್ಚುಕಟ್ಟಾಗಿ ನಿಯಂತ್ರಿಸಬಹುದು. ವೈದ್ಯರೇ ಹೇಳುವ ಪ್ರಕಾರ ಮನುಷ್ಯನ ರಕ್ತಸಂಚಾರದಲ್ಲಿ ಯಾವತ್ತಿಗೂ ಕೂಡ ಏರುಪೇರು ಉಂಟಾಗಬಾರದು. ಒಂದು ವೇಳೆ ರಕ್ತದಲ್ಲಿ ಏರುಪೇರು ಉಂಟಾದರೆ, ಅಧಿಕ ರಕ್ತದೊತ್ತಡದಂತಹ ಕಾಯಿಲೆ, ಕಂಡು ಬರಲು ಶುರು ವಾಗುತ್ತದೆ. ಅದರಲ್ಲೂ ಈ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡುತ್ತಾ ಹೋದರೆ, ಮುಂದಿನ ದಿನಗಳಲ್ಲಿ […]
ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ
ಪೆರ್ಡೂರು: ಶ್ರೀ ಕ್ಷೇತ್ರ ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ರಥೋತ್ಸವವು ಕೊರಂಗ್ರರಪಾಡಿ ಶ್ರೀ ಕೆ. ಜಿ. ವಿಠ್ಠಲ್ ತಂತ್ರಿಯವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು, ಜಾತ್ರಾ ಮಹೋತ್ಸವದ ವೈಭವವನ್ನು ಕಣ್ತುಂಬಿಕೊಂಡರು.
ಯುಗಾದಿ ಹಬ್ಬಕ್ಕೆ ನಾಡಿನ ಗಣ್ಯರಿಂದ ಶುಭಹಾರೈಕೆ..
ಮಾ.22ರಂದು ಚಂದ್ರಮಾನ ಯುಗಾದಿ ಹಬ್ಬವನ್ನು ನಾವು ಆಚರಿಸುತ್ತಿದ್ದೇವೆ.. ನಾಡಿನ ಸಮಸ್ತ ಜನತೆಗೆ ನಾಡಿನ ಗಣ್ಯರಿಂದ ಶುಭಹಾರೈಕೆಗಳು..
ಉಪ್ಪೂರು: 55 ಕುಟುಂಬಗಳಿಗೆ ಖಾಯಂ ನಿವೇಶನ ಹಕ್ಕುಪತ್ರ ವಿತರಣೆ
ಬ್ರಹ್ಮಾವರ: ಇಲ್ಲಿನ ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ವಾಸವಾಗಿದ್ದ ಉಪ್ಪೂರು- 55 ಕುಟುಂಬಗಳಿಗೆ ಖಾಯಂವಾಗಿರುವ 55 ಕುಟುಂಬಗಳಿಗೆ 94/CC ಅಡಿಯಲ್ಲಿ ಖಾಯಂ ನಿವೇಶನ ಹಕ್ಕುಪತ್ರವನ್ನು ಶಾಸಕ ಕೆ. ರಘುಪತಿ ಭಟ್ ಅವರು ಉಪ್ಪೂರು ಗ್ರಾಮದ ಗೆಳೆಯರ ಬಳಗದ ವಠಾರದಲ್ಲಿ ಇಂದು ವಿತರಿಸಿದರು. ಉಪ್ಪೂರು ಗ್ರಾಮದಲ್ಲಿ ಹಲವಾರು ವರ್ಷಗಳಿಂದ ವಾಸವಾಗಿರುವ ಈ ಕುಟುಂಬಗಳಿಗೆ ಗೋಮಾಳದ ಸಮಸ್ಯೆಯಿಂದಾಗಿ ಹಕ್ಕುಪತ್ರ ನೀಡಲು ಸಮಸ್ಯೆ ಉಂಟಾಗಿತ್ತು. ವಿಶೇಷ ಪ್ರಕರಣಗಳ ಅಡಿ ಗೋಮಾಳವನ್ನು ವಿರಹಿತಗೊಳಿಸಿ 94/CC ಅಡಿಯಲ್ಲಿ ಖಾಯಂ ನಿವೇಶನ ಹಕ್ಕುಪತ್ರವನ್ನು […]