ಬಂಗಾಡಿ ಕೊಲ್ಲಿ “ಸೂರ್ಯ – ಚಂದ್ರ” ಜೋಡುಕರೆ ಕಂಬಳ ಕೂಟದ ಫಲಿತಾಂಶ
ಮಂಗಳೂರು: ಮಾ.18 ರಂದು ನಡೆದ 25ನೇ ವರ್ಷದ ಬಂಗಾಡಿ ಕೊಲ್ಲಿ “ಸೂರ್ಯ – ಚಂದ್ರ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ: ಕನೆಹಲಗೆ: 05 ಜೊತೆ ಅಡ್ಡಹಲಗೆ: 07 ಜೊತೆ ಹಗ್ಗ ಹಿರಿಯ: 09 ಜೊತೆ ನೇಗಿಲು ಹಿರಿಯ: 25 ಜೊತೆ ಹಗ್ಗ ಕಿರಿಯ: 14 ಜೊತೆ ನೇಗಿಲು ಕಿರಿಯ: 44 ಜೊತೆ ಸಬ್ ಜೂನಿಯರ್ ನೇಗಿಲು: 51 ಒಟ್ಟು ಕೋಣಗಳ ಸಂಖ್ಯೆ: 155 ಜೊತೆ ಕನೆಹಲಗೆ: ( ನೀರು ನೋಡಿ […]
ಕ್ಷೇತ್ರದ ಅಭಿವೃದ್ದಿಯ ರಿಪೋರ್ಟ್ ಕಾರ್ಡ್ ನೀಡುವುದು ಜನಪ್ರತಿನಿಧಿಯಾಗಿ ನನ್ನ ಜವಾಬ್ದಾರಿ: ವಿ. ಸುನೀಲ್ ಕುಮಾರ್
ಕಾರ್ಕಳ: ಕ್ಷೇತ್ರದ ಅಭಿವೃದ್ದಿಯ ರಿಪೋರ್ಟ್ ಕಾರ್ಡ್ ನೀಡುವುದು ಜನಪ್ರತಿನಿಧಿಯಾಗಿ ನನ್ನ ಜವಾಬ್ದಾರಿ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ ಸುನೀಲ್ ಕುಮಾರ್ ಹೇಳಿದರು ಅವರು ಕಾರ್ಕಳ ಕುಕ್ಕುಂದೂರು ಗ್ರಾಮ ಪಂಚಾಯತ್ ಮೈದಾನದಲ್ಲಿ ನಡೆದ ಕ್ಷೇತ್ರದ ಸಾಧನೆಯ ರಿಪೋರ್ಟ್ ಕಾರ್ಡ್ ಅನಾವರಣಗೊಳಿಸಿ ಮಾತನಾಡಿದರು. ಮೂಲಭೂತ ಸೌಕರ್ಯಗಳ ಜೊತೆ ಬೃಹತ್ ಪ್ರಮಾಣದ ಪ್ರಾಜೆಕ್ಟ್ ಗಳನ್ನು ತರುವ ಮೂಲಕ ಅವಿರತ ಪ್ರಯತ್ನ ಮಾಡಲಾಗಿದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹರಿಸಿ ಹಕ್ಕುಪತ್ರ ವಿತರಿಸುವ ಮೂಲಕ ಜನರಿಗೆ ಪ್ರಾಮಾಣಿಕ ಪ್ರಯತ್ನ […]
ಉಡುಪಿಯಲ್ಲಿ ಸಾಧಾರಣ ಮಳೆ
ಉಡುಪಿ: ಮಣಿಪಾಲ ಸಹಿತವಾಗಿ ಉಡುಪಿ ನಗರದ ವಿವಿಧ ಕಡೆಗಳಲ್ಲಿ ರವಿವಾರ (ಮಾ.19) ಮುಂಜಾನೆ ಸಾಧಾರಣ ಮಳೆಯಾಗಿದೆ. ಸುಮಾರ ಅರ್ಧ ಗಂಟೆಗಳ ಕಾಲ ಮಳೆ ಸುರಿದ್ದು, ಬೆಳಗ್ಗಯಿಂದಲೇ ಮೋಡ ಕವಿದ ವಾತಾವರಣದ ಜತೆಗೆ ತುಂತುರು ಮಳೆಯಾಗಿರುವುದು ಕಂಡು ಬಂದಿದೆ. ಕಳೆದ ಕೆಲವು ದಿನಗಳಿಂದ ತಾಪಮಾನ ಹೆಚ್ಚಾಗಿರುವ ಜತೆಗೆ ಮಳೆಯಾಗಿರುವುದು ಸ್ವಲ್ಪ ಮಟ್ಟಿನ ತಂಪೆರೆದಂತಾಗಿದೆ. ಮುಂಜಾನೆ ನಂತರವೂ ಉಡುಪಿಯ ಸುತ್ತಮುತ್ತಲೂ ಮಳೆ ಸುರಿಯುತ್ತಿದೆ.
ಶ್ರೀ ಧೂಮಾವತಿ ದೈವಸ್ಥಾನ ಬೈಲೂರು: ದೈವಸ್ಥಾನಗಳ ಜೀರ್ಣೋದ್ಧಾರದಿಂದ ನಾಡು ಅಭಿವೃದ್ಧಿ: ಶಾಸಕ ರಘುಪತಿ ಭಟ್
ಉಡುಪಿ: ತುಳುನಾಡು ವಿಶ್ವದಾದ್ಯಂತ ಹೆಸರು ಪಡೆದಿದೆ. ಪ್ರಸ್ತುತ ನಶಿಸಿ ಹೋದ ದೈವಸ್ಥಾನ, ದೇವಸ್ಥಾನಗಳನ್ನು ಹುಡುಕಿ, ಜೀರ್ಣೋದ್ಧಾರ ಮಾಡುವ ಮೂಲಕ ನಮ್ಮ ನಾಡು ಅಭಿವೃದ್ದಿಯತ್ತ ಸಾಗುತ್ತಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.ಬೈಲೂರು ಶ್ರೀಮಹಿಷಮರ್ದಿನಿ ದೇವಸ್ಥಾನದ ಶ್ರೀ ಧೂಮಾವತಿ ದೈವಸ್ಥಾನ ಜೀರ್ಣೋದ್ಧಾರದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇರಳದ ಜ್ಯೋತಿಷ ವಾಚಸ್ಪತಿ ದೈವಜ್ಞ ಎ.ವಿ. ಮಾಧವನ್ ಪೊದುವಾಳ್ ಉದ್ಘಾಟಿಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ದಾನಿಗಳನ್ನು ಸನ್ಮಾನಿಸಲಾಯಿತು. ತಂತ್ರಿಗಳಾದ […]
ಕಾರ್ಕಳ: ಮಾ.19 ರಂದು ಕುಕ್ಕುಂದೂರಿನಲ್ಲಿ “ರಿಪೋರ್ಟ್ ಕಾರ್ಡ್” ಕಾರ್ಯಕ್ರಮ
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್ ಕಾರ್ಯಕ್ರಮ ಮಾ.19ರಂದು ಕುಕ್ಕುಂದೂರು ಗ್ರಾಮ ಪಂಚಾಯತ್ ಮೈದಾನದಲ್ಲಿ ನಡೆಯಲಿದೆ.