ಬಾಳೆಹಣ್ಣು ಪ್ರಿಯ ಪೆರ್ಡೂರು ಅನಂತಪದ್ಮನಾಭ ದೇಗುಲದಲ್ಲಿ ಮಾ.17ಕ್ಕೆ ಶ್ರೀಮನ್ಮಹಾರಥೋತ್ಸವ: “ಮದುಮಕ್ಕಳ ಜಾತ್ರೆ’ಗಿದೆ ವಿಶೇಷ ಮನ್ನಣೆ
ಇತಿಹಾಸ ಪ್ರಸಿದ್ಧ ಪೆರ್ಡೂರಿನ ಅನಂತಪದ್ಮನಾಭ ಮೂರ್ತಿ ಕಪ್ಪುಕಲ್ಲಿನಲ್ಲಿ ಕೆತ್ತಲಾಗಿದೆ. ಸುಮಾರು ಮೂರು ಅಡಿ ಎತ್ತರದ ಈ ಮೂರ್ತಿ ನಿಂತ ಭಂಗಿಯಲ್ಲಿದ್ದು ಶಂಖ ಚಕ್ರ ಗದಾ ಪದ್ಮ ಭರಿಯಾದ ವಿಗ್ರಹವಾಗಿದೆ. ಹೊಕ್ಕುಳಿನ ಭಾಗದಲ್ಲಿ ಪದ್ಮದ ಚಿಹ್ನೆಗಳಿವೆ. ವಿಗ್ರಹದ ಮೆಲ್ಭಾಗದ ಸುತ್ತ ನಾಗ ದೇವರ ಹೆಡೆ ಚಿತ್ರಿಸಲಾಗಿದೆ. ಹಿಂದುಗಳ ಪವಿತ್ರ ಕ್ಷೇತ್ರವಾದ ತಿರುಮಲವಾಸ ತಿಮ್ಮಪ್ಪನ ಹರಕೆ, ತಪ್ಪು ಮಾಡಿದವರು ಧರ್ಮಸ್ಥಳ ಮಂಜುನಾಥನಿಗೆ ಹಾಕುತ್ತಿದ್ದ ತಪ್ಪು ಕಾಣಿಕೆಗಳು ಕೂಡ ಇಲ್ಲಿ ಹಾಕುತ್ತಿದ್ದರು ಎಂಬ ನಂಬಿಕೆಯು ಇದೆ.ರೋಗ ರುಜಿನಗಳಿಗೆ ಸಂತಾನ ಭಾಗ್ಯಕ್ಕೆ, ಆರೋಗ್ಯ, […]
ಬಿಲ್ಲಾಡಿಯ ಕುಷ್ಠ ಭಂಡಾರ್ತಿ ಕುಟುಂಬಕ್ಕೆ ಮನೆ ಹಸ್ತಾಂತರ
ಕಳೆದ 10ವರ್ಷಗಳಿಂದ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದ ಬಿಲ್ಲಾಡಿಯ ಕುಷ್ಠ ಭಂಡಾರ್ತಿ ಕುಟುಂಬದ ಸಂಕಷ್ಟವನ್ನು ಮನಗಂಡ ಹೋಂ ಡಾಕ್ಟರ್ ಫೌಂಡೇಷನ್ ಉಡುಪಿ ಮತ್ತು ನೆರವು ಫೌಂಡೇಷನ್ ಬಿಲ್ಲಾಡಿ ಹಾಗೂ ಬಿಲ್ಲಾಡಿ ಫ್ರೆಂಡ್ಸ್, ಯುವ ವೇದಿಕೆ ಬಿಲ್ಲಾಡಿ ಇವರು ಜೊತೆಗೂಡಿ ಮನೆಯನ್ನು ಸಂಪೂರ್ಣ ಕಟ್ಟಿಸಿ ಹಸ್ತಾಂತರಿಸಿದೆ.
ಕಠಿಣ ಪರಿಶ್ರಮದ ಸಾಧಕ ಜಿ. ರಾಮಕೃಷ್ಣ ಆಚಾರ್ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್
ಕಠಿಣ ಪರಿಶ್ರಮದ ವಿಭಿನ್ನ ಯೋಜನೆ ಯೋಚನೆ ಪರಿಕಲ್ಪನೆಯ ಸಾಧಕ ಕೃಷಿಕ ಅಂತರಾಷ್ಟ್ರೀಯ ಮಟ್ಟದ ಕೈಗಾರಿಕೋಧ್ಯಮಿಯಾಗಿರುವ ಮೂಡಬಿದರೆ ಎಸ್ ಕೆಎಫ್ ಸಮೂಹ ಸಂಸ್ಥೆ ಮತ್ತು ಮುನಿಯಾಲಿನ ಸಂಜೀವಿನಿ ಫಾರ್ಮ್ ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರದ ಸಂಸ್ಥಾಪಕ ಜಿ.ರಾಮಕೃಷ್ಣ ಆಚಾರ್ ಅವರ ಕೃಷಿ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ಮಂಗಳೂರು ವಿಶ್ವವಿದ್ಯಾನಿಲಯವು ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಜಿ.ರಾಮಕೃಷ್ಣ ಆಚಾರ್ ಸ್ಥಾಪಿಸಿದ ಎಸ್‌ಕೆಎಫ್ ಉದ್ಯಮ ಸಮೂಹ ಸಂಸ್ಥೆಯು ಸಿರಿಧಾನ್ಯಗಳ ಸಂಸ್ಕರಣೆ, ಕುಡಿಯುವ ಸ್ವಚ್ಛ ನೀರಿನ ಪೂರೈಕೆ, ತ್ಯಾಜ್ಯ […]
ಕೊಳ ಹಾಗೂ ವಡಭಾಂಡೇಶ್ವರ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಕೊಳ ಹಾಗೂ ವಡಭಾಂಡೇಶ್ವರ ವಾರ್ಡ್‌ಗಳಲ್ಲಿ ತಾ.15.3.2023ರಂದು ಸಭೆಯನ್ನು ನಡೆಸಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆಯನ್ನು ತೊಟ್ಟಂನಲ್ಲಿರುವ ಮಂಜುನಾಥೇಶ್ವರ ಭಜನಾ ಮಂದಿರದ ವಠಾರದಲ್ಲಿ ಮಾಡಲಾಯಿತು. ರಮೇಶ್ ಕಾಂಚನ್ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತ ಬಿಜೆಪಿ ಸರ್ಕಾರವು ಜನರಿಗೆ ಆಶ್ವಾಸನೆ ನೀಡಿ ಅದರ ತದ್ವಿರುದ್ಧವಾಗಿ ನಡೆಯುತ್ತಿದೆ. ದಿನಬಳಕೆ ವಸ್ತುಗಳ ಮೇಲೆ ಬೆಲೆ ಏರಿಕೆಯಿಂದ ಜನರು ಕಂಗೆಟ್ಟಿದ್ದಾರೆ. ಪೆಟ್ರೋಲ್, ಗ್ಯಾಸ್, ವಿದ್ಯುತ್, ಡಿಸೇಲ್‌ಗಳ ಬೆಲೆ ಏರಿಕೆಯಿಂದ ಜನರಿಗೆ ಜೀವನ ನಡೆಸುವುದು […]
ಬೈಲೂರು: ಮೂಲ ಮಹಿಷಂತಾಯ ಪರಿವಾರ ದೈವಗಳ ಬ್ರಹ್ಮಕಲಶೋತ್ಸವ, ಪುನಃಪ್ರತಿಷ್ಠೆ
ಉಡುಪಿ: ಬೈಲೂರು ಶ್ರೀ ಮಹಿಷಮರ್ದಿನಿ ದೇಗುಲಕ್ಕೆ ಸಂಬಂಧಪಟ್ಟ ಶ್ರೀ ಧೂಮಾವತಿ ದೇವಸ್ಥಾನವನ್ನು ಸುಮಾರು 1.60 ಕೋ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಇನ್ನೂ 1 ಕೋ.ರೂ. ಕಾಮಗಾರಿಯನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು. ದೈವದ ಎಲ್ಲ ಮೂರ್ತಿಗಳು, ಆಯುಧಗಳನ್ನು ಬೆಳ್ಳಿಯಿಂದಲೇ ಮಾಡಲಾಗಿದೆ. ಮಾ.15 ರಿಂದ 18ರ ವರೆಗೆ ಮೂಲ ಮಹಿಷಂತಾಯ, ಧೂಮಾವತಿ, ಬಂಟ, ಪಂಜುರ್ಲಿ ದೈವಗಳ ನೂತನ ಶಿಲಾಮಯ ಆಲಯದಲ್ಲಿ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ, ಅನ್ನ ಸಂತರ್ಪಣೆ, ನೇಮೋತ್ಸವ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ […]