ರಾಜೀವ ನಗರದಲ್ಲಿ ಕಾಂಗ್ರೆಸ್ ಬ್ಯಾನರ್ ಹರಿದುಹಾಕಿದ ಕಿಡಿಗೇಡಿಗಳು: ಕಿಡಿಗೇಡಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಕಾಂಗ್ರೆಸ್ ವತಿಯಿಂದ 80 ಬಡಗುಬೆಟ್ಟು ಗ್ರಾಮದ ರಾಜೀವನಗರದಲ್ಲಿ ಅಳವಡಿಸಿರುವ “ಕಾಪುವಿಗಾಗಿ ಕಾಂಗ್ರೆಸ್” ಕಾರ್ಯಕ್ರಮದ ಬ್ಯಾನರ್ ನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ಮಾ.10ರಂದು ಮಧ್ಯರಾತ್ರಿ ನಡೆದಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳಾದ ಗೃಹ ಲಕ್ಷ್ಮೀ, ಅನ್ನ ಭಾಗ್ಯ, ಉಚಿತ ವಿದ್ಯುತ್ ಯೋಜನೆಯ ಜೊತೆಗೆ ಕಾಪುವಿಗಾಗಿ ಕಾಂಗ್ರೆಸ್ ಎಂಬ ಕಾರ್ಯಕ್ರಮದ ಬ್ಯಾನರ್ ನ್ನು ರಾಜೀವನಗರದ ಬಸ್ ನಿಲ್ದಾಣ ಬಳಿ ಅಳವಡಿಸಲಾಗಿತ್ತು. ಈ ಬ್ಯಾನರ್ ಅನ್ನು ಯಾರೋ ದುಷ್ಕರ್ಮಿಗಳು ಹರಿದು ಹಾಕಿದ್ದಾರೆ. ಕಿಡಿಗೇಡಿಗಳು […]
ಶಿವಾಜಿ ಮಹಾರಾಜರ ತತ್ವಾದರ್ಶ ಮೈಗೂಡಿಸಿಕೊಂಡು ಮುನ್ನಡೆದರೆ ಸಮಗ್ರ ಅಭಿವೃದ್ಧಿ ಸಾಧ್ಯ: ದಿನೇಶ್ ಸಿ. ನಾಯ್ಕ್
ಉಡುಪಿ: ರಾಷ್ಟ್ರಕಂಡ ಮೇರು ವ್ಯಕ್ತಿತ್ವದ ಶಿವಾಜಿ ಮಹಾರಾಜರ ಧೈರ್ಯ, ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜವನ್ನು ಮುನ್ನಡೆಸಿದಾಗ ಸಮಗ್ರ ಅಭಿವೃದ್ಧಿ ಸಾಧ್ಯ. ದೇಶದಲ್ಲಿ ಶಿವಾಜಿಯನ್ನು ಬೆಂಬಲಿಸುವ ಸಂಘಟನೆಗಳು ಇನ್ನಷ್ಟು ಬಲಿಷ್ಠವಾಗಬೇಕಿದೆ ಎಂದು ಉಡುಪಿಯ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ, ನ್ಯಾಯವಾದಿ ದಿನೇಶ್ ಸಿ. ನಾಯ್ಕ್ ತಿಳಿಸಿದ್ದಾರೆ. ಉಡುಪಿ ಕೋರ್ಟ್ ರಸ್ತೆಯಲ್ಲಿರುವ ಛತ್ರಪತಿ ಶಿವಾಜಿ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ಶನಿವಾರ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ತಿಥಿಯಾನುಸರವಾಗಿ ಶಿವಾಜಿ ಜಯಂತಿ ಯನ್ನು ಆಚರಿಸಿ ಮಾತನಾಡಿದರು. ಈ ಸಂದರ್ಭ […]
ಸರ್ಕಾರದ ಖರ್ಚಿನಲ್ಲಿ ಬಿಜೆಪಿ ಪ್ರಚಾರದ ಸಭೆ ಖಂಡನೀಯ – ವೆರೋನಿಕಾ ಕರ್ನೆಲಿಯೊ
ಕಟಪಾಡಿಯಲ್ಲಿ ಶುಕ್ರವಾರ ನಡೆದ ಸವಲತ್ತು ವಿತರಣೆ ಕಾರ್ಯಕ್ರಮ ಸರಕಾರಿ ಖರ್ಚಿನಲ್ಲಿ ಬಿಜೆಪಿ ಪ್ರಚಾರದ ಸಭೆಯಾಗಿತ್ತು ಎಂಬ ಕೂಗು ಎಲ್ಲಾ ಕಡೆಗಳಿಂದ ಕೇಳಿಬರುತ್ತಿದೆ ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ತಿಳಿಸಿದ್ದಾರೆ. ಜನರ ತೆರಿಗೆಯ ಹಣದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಎಲ್ಲಾ ಸರಕಾರಿ ಅಧಿಕಾರಿಗಳನ್ನು ಬಳಸಿ ಟಾರ್ಗೆಟ್ ಕೊಟ್ಟು ಜನ ಸೇರಿಸಿರುವುದು ಬಿಜೆಪಿಯ ದಿವಾಳಿತನ ತೋರಿಸುತ್ತದೆ. ಪ್ರತಿ ಪಂಚಾಯತಿಗೆ 2 ಬಸ್ಸು ಕಳುಹಿಸಿ 200 ಜನ ತರಬೇಕು ಎನ್ನುವ ಮೇಲಾಧಿಕಾರಿಗಳ ಮೌಖಿಕ ಆದೇಶ ಜನರಿಗೆ ತಪ್ಪು ಮಾಹಿತಿ ನೀಡಿ, […]
ನಾಳೆ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ: ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಉದ್ಘಾಟನೆ
ಮಂಡ್ಯ: ಬಹು ನಿರೀಕ್ಷಿತ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇ ನಾಳೆ ಲೋಕಾರ್ಪಣೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಪ್ರೆಸ್ ವೇ ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರು ಮತ್ತು ಮೈಸೂರು ಸಂಪರ್ಕಿಸುವ ಈ ಹೆದ್ದಾರಿಯನ್ನು 8480 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು 118 ಕಿಲೋ ಮೀಟರ್ ಉದ್ದವಾಗಿದ್ದು, 75 ನಿಮಿಷದಲ್ಲಿ ಬೆಂಗಳೂರಿನಿಂದ ಮೈಸೂರು ತಲುಪಲು ಸಾಧ್ಯವಾಗಲಿದೆ. ರಾಜ್ಯದ ಜನರ ಜತೆಗೆ ಇದು ಕೇರಳದ ಜನರಿಗೆ ಕೂಡ ಪ್ರಯೋಜನಕಾರಿಯಾಗಿದೆ. ಕೇರಳದ ಕಣ್ಣೂರು, ಕೋಝಿಕೋಡ್ ನಾಗರಿಕರು ಮೈಸೂರು ಮೂಲಕ ಕೇರಳಕ್ಕೆ […]
ಜಿಲ್ಲಾ ಬಾಲಭವನ ಸಮಿತಿ ಸಭೆ
ಉಡುಪಿ: ರಾಜ್ಯ ಬಾಲಭನವ ಸೊಸೈಟಿ (ರಿ) ಅಧ್ಯಕ್ಷೆ ಪೂರ್ಣಿಮಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಗುರುವಾರ ನಗರದ ರಜತಾದ್ರಿಯ ಜಿಲ್ಲಾ ಪಂಚಾಯತ್‌ನಲ್ಲಿ ಜಿಲ್ಲಾ ಬಾಲಭವನ ಸಮಿತಿ ಸಭೆ ನಡೆಯಿತು. ಮಕ್ಕಳಲ್ಲಿ ಕುತೂಹಲ ಮೂಡಿಸುವುದರೊಂದಿಗೆ, ಆಧುನಿಕತೆಗೆ ಪೂರಕವಾದ ನಾವೀನ್ಯತೆಯ ಚಟುವಟಿಕೆಗಳನ್ನು ಜಿಲ್ಲಾ ಹಾಗೂ ತಾಲೂಕು ಬಾಲಭವನದಲ್ಲಿ ಹಮ್ಮಿಕೊಳ್ಳುವಂತೆ ತಿಳಿಸಿದರು. ಹೊರಸಂಚಾರ ಕಾರ್ಯಕ್ರಮದಡಿ ತಾರಾಲಯ, ವಸ್ತು ಸಂಗ್ರಹಾಲಯ, ಸಾಮಾಜಿಕ ಮೌಲ್ಯಗಳನ್ನು ಅರಿಯುವಂತಹ ತಾಣಗಳಿಗೆ ಮಕ್ಕಳನ್ನು ಕರೆದೊಯ್ಯುವಂತೆ ತಿಳಿಸಿದ ಅವರು, ತಾರಸಿ ತೋಟಗಾರಿಕೆ, ಪ್ರಥಮ ಚಿಕಿತ್ಸೆ, ಹಾವು ಕಡಿತಕ್ಕೊಳಗಾದವರಿಗೆ ಚಿಕಿತ್ಸೆ, ವಯೋವೃದ್ಧರ ಆರೈಕೆ ಮುಂತಾದವುಗಳನ್ನು […]