ಕಕ್ಕುಂಜೆಯ ಪಾದೆಯ ಗುಡ್ಡದಲ್ಲಿ ಬೆಂಕಿ ಅವಘಡ: ತಪ್ಪಿದ ಅನಾಹುತ
ಉಡುಪಿ ಪೆರಂಪಳ್ಳಿ ಸಮೀಪದ ಕಕ್ಕುಂಜೆಯ ಪಾದೆಯ ಬಳಿ ಕಸದ ರಾಶಿಗೆ ಆಕಸ್ಮಿತವಾಗಿ ಬೆಂಕಿ ತಗುಲಿ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಬೆಂಕಿ ಬಿದ್ದ ಪರಿಣಾಮ ಸುತ್ತಮುತ್ತ ದಟ್ಟ ಹೊಗೆ ಆವರಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಗುಡ್ಡದಲ್ಲಿ ಒಣ ಕಸ ಸಾಕಷ್ಟು ಪ್ರಮಾಣದಲ್ಲಿ ಇದ್ದ ಪರಿಣಾಮ ಬೆಂಕಿಯ ಕೆನ್ನಾಲಿಗೆ ದೊಡ್ಡ ಮಟ್ಟದಲ್ಲಿ ಹರಡಿತ್ತು. ಮನೆಯೊಂದರ ಕಂಪೌಂಡ್ ಒಳಭಾಗಕ್ಕೂ ಬೆಂಕಿ ಹಬ್ಬಿತ್ತು. ತಕ್ಷಣವೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅದರಂತೆ ಸ್ಥಳಕ್ಕೆ ದೌಡಾಯಿಸಿದ್ದ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ […]
ರೋಹನ್ ಕಾರ್ಪೋರೇಷನ್ ನಿಂದ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ
ಮಂಗಳೂರು: ಮಾರ್ಚ್ 4 ರಂದು ರೋಹನ್ ಕಾರ್ಪೋರೇಷನ್ ಇಂದಿಯಾ ಪ್ರೈ.ಲಿ ಸಂಸ್ಥೆ ವತಿಯಿಂದ ಮಂಗಳೂರಿನ ಬಿಜೈನಲ್ಲಿರುವ ರೋಹನ್ ಸಿಟಿ ಸೈಟ್ ಪ್ರಾಜೆಕ್ಟ್ನಲ್ಲಿ 52ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನು ಆಚರಿಸಿತು. ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ರೋಹನ್ ಮೊಂತೇರೋ ಸುರಕ್ಷಾ ಧ್ವಜವನ್ನು ಹಾರಿಸಿ, ನೌಕರರಿಗೆ ಕಿರು ಸಂದೇಶವನ್ನು ನೀಡಿದರು.
ಮಾ.5 ರಿಂದ 12 ರವರೆಗೆ ಬ್ರಹ್ಮಾವರ ಜನನಿ ಎಂಟರ್ ಪ್ರೈಸಸ್ ನಲ್ಲಿ ವಿನಿಮಯೋತ್ಸವ: ಈ ಆಫರ್ ನಲ್ಲಿ ಏನೇನಿದೆ ಗೊತ್ತಿದೆಯೆ?
ಬ್ರಹ್ಮಾವರ: ಅತಿ ಕಡಿಮೆ ಅವಧಿಯಲ್ಲಿ ಗ್ರಾಹಕರ ಮನ ಗೆದ್ದಿರುವ ಜನನಿ ಹೊಸ ಹೊಸ ಆಫರ್ ಗಳ ಮೂಲಕವೇ ಗ್ರಾಹಕರನ್ನು ತನ್ನತ್ತ ಆಕರ್ಷಿಸುವುದು ಹೊಸತೇನಲ್ಲ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಅತ್ಯಂತ ಕಡಿಮೆ ದರದಲ್ಲಿ ಅತ್ಯುತ್ತಮ ಸೇವೆಯ ಜೊತೆಗೆ ಆಕರ್ಷಕ ಉಡುಗೊರೆ, ಸುಲಭ ಕಂತುಗಳ ಸೌಲಭ್ಯಗಳೊಂದಿಗೆ ಉಚಿತ ಸಾಗಾಟದ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿದ್ದು, ಈ ಬಾರಿ ತಮ್ಮ ಗ್ರಾಹಕರಿಗಾಗಿಯೆ ಅತಿದೊಡ್ಡ ಎಕ್ಸ್ ಚೇಂಜ್ ಆಫರ್ ಅನ್ನು ಮಾರ್ಚ್ 5 ರಿಂದ 12 ತನಕ ಆಯೋಜಿಸಿದ್ದು, […]
ಮಾ.9 ರಂದು ಉಡುಪಿ ಜಿಲ್ಲಾ ನರ್ಸರಿಮೆನ್ ಅಸೋಸಿಯೇಶನ್ ಉದ್ಘಾಟನೆ
ಉಡುಪಿ ಜಿಲ್ಲಾ ನರ್ಸರಿಮೆನ್ ಅಸೋಸಿಯೇಶನ್ ಸಂಸ್ಥೆಯ ಉದ್ಘಾಟನೆ, ಸಸ್ಯಗಳ ಪ್ರದರ್ಶನ ಮತ್ತು ಮಾರಾಟವು ಮಾ. 9 ರಂದು ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಸುರೇಶ್ ಸುವರ್ಣ ತಿಳಿಸಿದ್ದಾರೆ. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30 ಕ್ಕೆ ಸಂಸ್ಥೆಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಗುರ್ಮೆ ಫೌಂಡೇಶನ್‌ನ ಪ್ರವರ್ತಕ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಕಾರ್ಯಕ್ರಮವನ್ನು […]