ಶಿವಪಾಡಿ: ಉಮಾಮಹೇಶ್ವರನಿಗೆ ಗಂಗಾರತಿ ಮಾದರಿ ಶಿವಾರತಿ

ಶಿವಪಾಡಿ: ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿಅತಿರುದ್ರ ಮಹಾಯಾಗದ ಒಂಬತ್ತನೇ ದಿನದಂದು ಪೂಜಾ ಕಾರ್ಯಕ್ರಮಗಳ ಬಳಿಕ ಸಂಜೆ 7 ಗಂಟೆಗೆ ವಾರಣಾಸಿಯ ಗಂಗಾರತಿ ಮಾದರಿಯ ‘ಶಿವಾರತಿ’ ನಡೆಯಿತು. ಶಿವಾರತಿಯ ನಂತರ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮವನ್ನು ಡೈನಾಮಿಕ್ ಗ್ರೂಪ್ ಮುಖ್ಯ ಕಾರ್ಯನಿರ್ವಾಹಕ ನಾಸಿಕ್ ನ ಸಿವಿಲ್ ಇಂಜಿನಿಯರ್ ಗೋಪಾಲ್ ಚಕ್ನಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಸಾದ್ ನೇತ್ರಾಲಯದ ಮುಖ್ಯಸ್ಥ ಡಾ. ಕೃಷ್ಣಪ್ರಸಾದ್ ಮಾತನಾಡಿ, ಉಡುಪಿಯಲ್ಲಿ ನೆಲೆಸಿರುವುದು ನಮ್ಮ ಪುಣ್ಯ. ಶಿವಪಾಡಿಯಲ್ಲಿ ನಡೆದ ಶಿವಾರತಿ, […]
ಮಾ.4 ರಂದು ದ.ಕ ಜಿಲ್ಲಾ ಮಟ್ಟದ ಮಲೆಕುಡಿಯರ ವಾರ್ಷಿಕ ಸಮಾವೇಶ

ಮಂಗಳೂರು: ಮಲೆಕುಡಿಯರ ಸಂಘ ಜಿಲ್ಲಾ ಸಮಿತಿ ದ.ಕ ಜಿಲ್ಲೆ ವತಿಯಿಂದ ಮಾ.4 ರಂದು ದ.ಕ ಜಿಲ್ಲಾ ಮಟ್ಟದ ಮಲೆಕುಡಿಯರ ವಾರ್ಷಿಕ ಸಮಾವೇಶವು ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದಲ್ಲಿರುವ ಮಲೆಕುಡಿಯರ ಸಮುದಾಯ ಭವನ ಶಿವಗಿರಿ ಇಲ್ಲಿ ನಡೆಯಲಿದ್ದು, ಮಲೆಕುಡಿಯ ಸಮುದಾಯದವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.