ಸಿಐಟಿಯು ವತಿಯಿಂದ ರಾಜ್ಯ ಮತ್ತು ಕೇಂದ್ರ ಸರಕಾರಗಳ ಬಜೆಟ್ ಕುರಿತು ಸಂವಾದ ಕಾರ್ಯಕ್ರಮ

ಉಡುಪಿ ಮತ್ತು ಬ್ರಹ್ಮಾವರ ಸಿಐಟಿಯು ತಾಲೂಕು ಸಮಿತಿಯು ಜಂಟಿ ಆಶ್ರಯದಲ್ಲಿ, ವಿಮಾ ನೌಕರರ ಸಂಘದ ಕಛೇರಿಯಲ್ಲಿ ರಾಜ್ಯ ಮತ್ತು ಕೇಂದ್ರ ಬಜೆಟ್ 2023ರ ಬಗ್ಗೆ ಸಂವಾದ ಕಾರ್ಯಕ್ರಮವು ಫೆ. 28 ರಂದು ನಡೆಯಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ಸಿಐಟಿಯು ಜಿಲ್ಲಾ ಸಮಿತಿ ಸದಸ್ಯ ಕಾಂ ವಾಮನ ಪೂಜಾರಿ ವಹಿಸಿದ್ದರು. ಉಡುಪಿ ಜಿಲ್ಲೆಯ ಸಿಐಟಿಯುನ ಕಾರ್ಯದರ್ಶಿ ಕಾಂ ಚಂದ್ರಶೇಖರ್ ಮಾತನಾಡಿ, ಬಜೆಟ್ ನಿಂದ ಜನಸಾಮಾನ್ಯರ ಬದುಕಿನ ಮೇಲೆ ಆಗುವಂತಹ ಸಮಸ್ಯೆಗಳ ಬಗ್ಗೆ ವಿವರಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ […]

ಯು.ಎಸ್. ರಾಜಗೋಪಾಲ ಆಚಾರ್ಯರಿಗೆ ‘ಸೇವಾಭೂಷಣ’ ಪ್ರಶಸ್ತಿ

ಉಡುಪಿ: ಸಾತ್ವಿಕ ವ್ಯಕ್ತಿತ್ವದ ಮತ್ತು ಸಾಮಾಜಿಕ ಕಳಕಳಿಯ ಯು. ಎಸ್. ರಾಜಗೋಪಾಲ ಆಚಾರ್ಯರು ಸೇವಾಭೂಷಣ ಪ್ರಶಸ್ತಿಗೆ ಅತ್ಯಂತ ಅರ್ಹ ವ್ಯಕ್ತಿ ಎಂದು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು. ಯಕ್ಷಗಾನ ಕಲಾರಂಗದ ಸಾಮಾಜಿಕ ಬದ್ಧತೆಯ ಚಟುವಟಿಕೆಗಳನ್ನು ಶ್ರೀಪಾದರು ಶ್ಲಾಘಿಸಿದರು. ಅವರು ಮಾರ್ಚ್ 1 ಉಡುಪಿ ಪೇಜಾವರ ಮಠದ ಶ್ರೀರಾಮವಿಠಲ ಸಭಾಭವನದಲ್ಲಿ ಯಕ್ಷಗಾನ ಕಲಾರಂಗದಲ್ಲಿ ದೀರ್ಘಕಾಲ ಕೋಶಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ ಎಸ್. ಗೋಪಾಲಕೃಷ್ಣರ ನೆನಪಿನಲ್ಲಿ ಸಂಸ್ಥೆ ನೀಡುವ ಸೇವಾಭೂಷಣ ಪ್ರಶಸ್ತಿಯನ್ನು ನಿವೃತ್ತ […]

ಶಿವಪಾಡಿ: ಮಾ. 2 ರಿಂದ 4 ರವರೆಗೆ ಶಿವಾರತಿ; ಮಾ.5 ರಂದು ಪೂರ್ಣಾಹುತಿ

ಶಿವಪಾಡಿ: ಇಲ್ಲಿನ ಶ್ರೀ ಉಮಾಮಹೇಶ್ವರ ದೇಗುಲ ಅಭಿವೃದ್ಧಿ ಟ್ರಸ್ಟ್‌ ಮತ್ತು ಅತಿರುದ್ರ ಮಹಾಯಾಗ ಸಮಿತಿ ಆಶ್ರಯದಲ್ಲಿ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ನೇತೃತ್ವದೊಂದಿಗೆ ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಕೈಗೊಳ್ಳಲಾದ ಅತಿರುದ್ರ ಮಹಾಯಾಗವು ಮಾ.5 ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು ಇದೇ ಮೊದಲ ಬಾರಿಗೆ ವಾರಣಾಸಿಯ ಗಂಗಾರತಿ ಮಾದರಿಯಲ್ಲಿ ಶಿವಾರತಿ ನಡೆಯಲಿದೆ. ಮಾ.2 ರಿಂದ 4ರವೆರೆಗೆ ವಾರಣಾಸಿಯಿಂದ ಆಗಮಿಸಿದ 8 ಮಂದಿಯ ತಂಡದಿಂದ […]

ತಿಂಗಳ ಮೊದಲ ದಿನವೆ ಅಡುಗೆ ಅನಿಲ ಬೆಲೆ ಏರಿಕೆಯ ಉಡುಗೊರೆ ನೀಡಿದ ಸರ್ಕಾರ: ರಮೇಶ್ ಕಾಂಚನ್

ಉಡುಪಿ: ತಿಂಗಳ ಮೊದಲ ದಿನವೇ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏಕಾಏಕಿ ರೂ.50 ಏರಿಸುವ ಮೂಲಕ ಜನಸಾಮಾನ್ಯರಿಗೆ ಗಿಫ್ಟ್ ನೀಡುವ ಮೂಲಕ ಶಾಕ್ ನೀಡಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ದೇಶದ ಜನತೆ ಮತ್ತೊಮ್ಮೆ ಮೋದಿ ಸರಕಾರದ ಜನವಿರೋಧಿ ಬೆಲೆ ಏರಿಕೆಯಿಂದ ತತ್ತರಿಸುವಂತಾಗಿದೆ. ಸದಾ ಉದ್ಯಮಿಗಳ ಪರ ನಿಲ್ಲುವ ಬಿಜೆಪಿ ಸರಕಾರ ಎಂದಿಗೂ ಕೂಡ ಬಡ ಹಾಗೂ ಮಧ್ಯಮ ವರ್ಗದವರ ಕಷ್ಟಕ್ಕೆ […]