ಕೇಂದ್ರ ಬಜೆಟ್ ನಲ್ಲಿ ಪರಿಸರ ಅರ್ಥಶಾಸ್ತ್ರಕ್ಕೆ ನಿರೀಕ್ಷಿತ ಪ್ರಮಾಣದ ಬೆಂಬಲವಿಲ್ಲ: ಡಾ.ರೆಸ್ಮಿ ಭಾಸ್ಕರನ್

ಮಣಿಪಾಲ: ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಲಾದ “ಯೂನಿಯನ್ ಬಜೆಟ್ -2023” ಅನ್ನು ಪರಿಸರ ಅರ್ಥಶಾಸ್ತ್ರದ ದೃಷ್ಟಿಕೋನದಿಂದ ವಿಶ್ಲೇಷಿಸಿದಾಗ ಅದು ನಿರೀಕ್ಷೆಗಳಿಗಿಂತ ಕಡಿಮೆಯಾಗಿದೆ. ಬಜೆಟ್‌ನಲ್ಲಿ ಭರವಸೆ ನೀಡಿರುವ ಹಸಿರು ಬೆಳವಣಿಗೆಯು ಸದ್ಯದ ಪರಿಸರಕ್ಕೆ ಒದಗಿರುವ ಸವಾಲುಗಳನ್ನು ಎದುರಿಸಲು ಸಾಕಾಗುವುದಿಲ್ಲ ಎಂದು ಅರ್ಥಶಾಸ್ತ್ರಜ್ಞೆ ಮತ್ತು ಲೇಖಕಿ ಡಾ.ರೆಸ್ಮಿ ಭಾಸ್ಕರನ್ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (GCPAS) ಆಶ್ರಯದಲ್ಲಿ ‘ಕೇಂದ್ರ ಬಜೆಟ್ ಮತ್ತು ಪರಿಸರ ಅರ್ಥಶಾಸ್ತ್ರ’ದ ಕುರಿತು ಎರಡು ಉಪನ್ಯಾಸಗಳನ್ನು ನೀಡಿ ಮಾತನಾಡಿದ ಡಾ.ರೆಸ್ಮಿ ಭಾಸ್ಕರನ್, […]
ಆದಿವಾಸಿ ಸಮುದಾಯ ಭವನ ಉದ್ಘಾಟನೆ

ಉಡುಪಿ: ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗ ಸಮುದಾಯದವಲ್ಲಿ ಆತ್ಮ ವಿಶ್ವಾಸ ಮೂಡಿಸಿ ಅವರನ್ನು ಇತರ ಸಮುದಾಯಗಳೊಂದಿಗೆ ಮುಕ್ತವಾಗಿ ಬೆರೆಯಲು ಮಾನಸಿಕವಾಗಿ ಸದೃಢಗೊಳಿಸಲು ಎಲ್ಲಾ ಸಮುದಾಯದವರೂ ಪ್ರಯತ್ನಿಸಬೇಕು. ಕೊರಗ ಸಮುದಾಯದ ಜನತೆಯೂ ಸಹ ಸುಶಿಕ್ಷಿತರಾಗಿ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು. ಅವರು ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಉಡುಪಿ ನಗರಸಭೆ ಹಾಗೂ ಕೊರಗ ಸಂಘಟನೆಗಳ ಸಹಯೋಗದೊಂದಿಗೆ, ಪುತ್ತೂರು ನಲ್ಲಿ 3 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಆದಿವಾಸಿ […]
ದೇವಸ್ಥಾನಕ್ಕೂ ಬಂತು ರೋಬೋಟ್ ತಂತ್ರಜ್ಞಾನ: ಕೇರಳದ ದೇವಸ್ಥಾನಕ್ಕೆ ಪೇಟಾ ಸಂಸ್ಥೆಯಿಂದ ಯಾಂತ್ರಿಕ ಆನೆ ಕೊಡುಗೆ

ತ್ರಿಶೂರು: ಇದೇ ಮೊದಲ ಬಾರಿಗೆ, ಕೇರಳದ ತ್ರಿಶೂರ್ ಜಿಲ್ಲೆಯ ಇರಿಂಜದಪ್ಪಿಲ್ಲಿ ಶ್ರೀ ಕೃಷ್ಣ ದೇವಾಲಯದಲ್ಲಿ ಧಾರ್ಮಿಕ ಆಚರಣೆಗಳನ್ನು ನಿರ್ವಹಿಸಲು ಜೀವ ಇರುವಂತೆ ಕಾಣುವ ಯಾಂತ್ರೀಕೃತ ಆನೆಯನ್ನು ಬಳಸಲಾಗಿದ್ದು, ಇದನ್ನು ನಟಿ ಪಾರ್ವತಿ ತಿರುವೋತ್ತು ಅವರ ಬೆಂಬಲದೊಂದಿಗೆ ಪೇಟಾ ಇಂಡಿಯಾ ಸಂಸ್ಥೆಯು ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿದೆ ಎಂದು ಇಂಡಿಯಾ ಟುಡೇ ವರದಿ ಹೇಳಿದೆ. ಇರಿಂಜದಪಿಲ್ಲಿ ರಾಮನ್ ಎಂಬ ಹೆಸರಿನ ಯಾಂತ್ರಿಕ ಆನೆಯು ಹತ್ತೂವರೆ ಅಡಿ ಎತ್ತರ ಮತ್ತು 800 ಕೆಜಿ ತೂಕವಿದೆ. ಸುಮಾರು 4 ಜನರನ್ನು ಸಾಗಿಸುವ ಸಾಮರ್ಥ್ಯ […]
ನಿವೃತ್ತ ಮುಖ್ಯೋಪಾಧ್ಯಾಯ ಹಾಜಿ ಬಾವು ಬ್ಯಾರಿ ಕರಂದಾಡಿ ನಿಧನ

ಕಾಪು: ಕರಂದಾಡಿ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯ ಹಾಜಿ ಬಾವು ಬ್ಯಾರಿ ಕರಂದಾಡಿ ಇವರು ಫೆ. 25 ರಂದು ಅಲ್ಪಕಾಲದ ಅಸೌಖ್ಯದಿಂದ ತನ್ನ ನಿವಾಸದಲ್ಲಿ ನಿಧನರಾದರು. ಮಲ್ಲಾರು ಕರಂದಾಡಿ, ಪುಂಜಾಲಕಟ್ಟೆ, ಪಡುಬಿದ್ರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ಹಾಗೂ ಮುಖ್ಯೋಪಾದ್ಯಾಯರಾಗಿ 35 ವರ್ಷ ಸೇವೆ ಸಲ್ಲಿಸಿದ್ದ ಇವರು ಬದ್ರಿಯ ಜುಮ್ಮಾ ಮಸ್ಜಿದ್ ಮಲ್ಲಾರು-ಮಜೂರು ಆಡಳಿತ ಸಮಿತಿಯ ಅಧ್ಯಕ್ಷರಾಗಿಯೂಕಾರ್ಯನಿರ್ವಹಿಸಿದ್ದರು. ಇವರು ಪತ್ನಿ ಹಾಗೂ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರಾಗಿದ್ದು ಇದೀಗ ವಿದೇಶದಲ್ಲಿರುವ ಡಾ. ಅಬ್ದುಲ್ ರಝಕ್ ಯು.ಕೆ ಸೇರಿದಂತೆ […]
ಮಾ. 01 ರಿಂದ 03 ರವರೆಗೆ ಅಂಜಾರು ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ

ಹಿರಿಯಡಕ: ಅಂಜಾರು ಗ್ರಾಮದ ಬ್ರಹ್ಮಬೈದರ್ಕಳ ಗರಡಿಯ ಕಾಲಾವಧಿ ನೇಮೋತ್ಸವವು ಮಾರ್ಚ್ 01 ರಿಂದ 03 ರವರೆಗೆ ಜರಗಲಿದೆ. ಕಾರ್ಯಕ್ರಮಗಳು: 01.03.2023 ನೇ ಬುಧವಾರ ರಾತ್ರಿ ಗಂಟೆ 9:30ಕ್ಕೆ ಅಗೇಲು ಸೇವೆ 02.03.2023ನೇ ಗುರುವಾರ ರಾತ್ರಿ ಗಂಟೆ 7.00ಕ್ಕೆ ತಡ್ಸಲೆ ಹೊರಡುವುದು ರಾತ್ರಿ ಬೈದರ್ಕಳ ನೇಮೋತ್ಸವ ರಾತ್ರಿ ಗಂಟೆ 12.00ಕ್ಕೆ ಬೈದರ್ಕಳ ಮಹಾಮಾಯಿ ದೇವಿಯ ದರ್ಶನ ಹಾಗೂ ಶಿವರಾಯ ದರ್ಶನ ರಾತ್ರಿ ಗಂಟೆ 2.30 ಕ್ಕೆ ಹುಲಿ ಚಾಮುಂಡಿ ಕೋಲ ರಾತ್ರಿ ಗಂಟೆ 3.00ಕ್ಕೆ ಧೂಮಾವತಿ ಕೋಲ 03.03.2023ನೇ […]