ಕಾಪು: ಮಾರ್ಚ್ 8 ರಂದು ಯಾರ್ಡ್ ಬೀಚ್ ನಲ್ಲಿ ಹೋಲಿ-ಫೆಸ್ಟ್

ಕಾಪು: ಇಲ್ಲಿನ ಯಾರ್ಡ್ ಬೀಚ್ ನಲ್ಲಿ ಮಾರ್ಚ್ 8 ರಂದು ಹೋಲಿ-ಫೆಸ್ಟ್ ಆಯೋಜಿಸಲಾಗಿದ್ದು, ರೈನ್ ಡ್ಯಾನ್ಸ್, ಮ್ಯೂಸಿಕ್, ನಾಸಿಕ್ ಢೋಲ್, ನೈಸರ್ಗಿಕ ಬಣ್ಣ, ಆಹಾರ, ಪಾನೀಯ ಮತ್ತು ಫೇಸ್ ಪೈಂಟ್ ಮುಂತಾದ ಹಲವು ಮನರಂಜನಾ ಕಾರ್ಯಕ್ರಮಗಳಿರಲಿವೆ. ಹೆಚ್ಚಿನ ಮಾಹಿತಿಗಾಗಿ 9880744613 ಅನ್ನು ಸಂಪರ್ಕಿಸಿ

ಕುಂಜಿಬೆಟ್ಟು ವಾರ್ಡ್ ರಸ್ತೆ ಕಾಂಕ್ರೀಟ್ ಕಾಮಗಾರಿ: 30 ದಿನ ಸಂಚಾರ ನಿರ್ಬಂಧ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಕುಂಜಿಬೆಟ್ಟು ವಾರ್ಡಿನ ಶಾರದ ಕಲ್ಯಾಣ ಮಂಟಪ ರಸ್ತೆಯಿಂದ ಸೇತುವೆವರೆಗೆ ರಸ್ತೆ ಕಾಂಕ್ರೀಟ್ ಕಾಮಗಾರಿ ಕೈಗೊಳ್ಳುವ ಪ್ರಯುಕ್ತ 30 ದಿನಗಳವರೆಗೆ ಸದ್ರಿ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಅಕ್ಕ-ಪಕ್ಕದ ಬದಲೀ ರಸ್ತೆಯನ್ನು ಬಳಸಿ, ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

ಕೂದಲುಗಳ ಆರೋಗ್ಯ ಮತ್ತು ಬೆಳವಣಿಗಾಗಿ ಎಸ್‌ಡಿಎಮ್ – ಮಂಜುಶ್ರೀ ಹೇರ್ ಆಯಿಲ್

ಎಸ್‌ಡಿಎಮ್ ಫಾರ್ಮಸಿ ಉಡುಪಿ ಸುಮಾರು ಆರು ದಶಕಕ್ಕೂ ಮಿಕ್ಕಿದ ಅನುಭವ, ಪರಿಶ್ರಮದಿಂದ ಕೂದಲಿನ ಸಮಸ್ಯೆಗಳಿಗೆ ಹಾಗೂ ಆರೋಗ್ಯಕ್ಕೆ ಮಾರ್ಗೋಪಾಯವನ್ನು ಕಂಡುಕೊಂಡಿದೆ. ಕೂದಲಿನ ಬೆಳವಣಿಗೆ ಉತ್ತೇಜಿಸುವುದು, ಆರೋಗ್ಯಕರ ಕೂದಲನ್ನು ಪಡೆಯಲು ಸಾಂಪ್ರದಾಯಿಕ ಆರೋಗ್ಯ ಸೂತ್ರಗಳನ್ನು ಅನುಸರಿಸಿ ‘ಮಂಜುಶ್ರೀ’ ಹೇರ್ ಆಯಿಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಕೂದಲಿನ ರಕ್ಷಣೆ ಮತ್ತು ಪರಿಪೂರ್ಣ ಬೆಳವಣಿಗೆ ಇದರ ಪ್ರಧಾನ ಧ್ಯೇಯವಾಗಿದೆ. ಈ ಪ್ರಕ್ರಿಯೆಯಲ್ಲಿ ಋಷಿಮುನಿ ಪ್ರಣೀತ ಸಾಂಪ್ರದಾಯಿಕ ಸೂತ್ರವನ್ನು ಅಚ್ಚುಕಟ್ಟಾಗಿ ಅನುಸರಿಸಿ ಶಾಸ್ತ್ರೀಯ ತೈಲಪಾಕ, ಕಚ್ಚಾ ವಸ್ತುಗಳ ಸಂಸ್ಕರಣೆ ಹಾಗೂ ಆಧುನಿಕ ತಂತ್ರಜ್ಞಾನಗಳ ಜೊತೆಗೆ […]

ಹೆಬ್ರಿ: ಮಾರ್ಚ್ 4 ರಂದು ಯಕ್ಷೋತ್ಸವ- ಕರ್ಣಾರ್ಜುನ ಯಕ್ಷಗಾನ ಪ್ರಸಂಗ

ಹೆಬ್ರಿ: ಪೆರ್ಡೂರು ಮೇಳ ಸುಪ್ರಸಿದ್ದ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಹೆಬ್ರಿ ಯಕ್ಷೋತ್ಸವ ಬಡಗಿನ ಗಾನ ಗಾರುಡಿಗ ಜನ್ಸಾಲೆ ಸಾರಥ್ಯ ಕರ್ಣಾರ್ಜುನ ಮಾರ್ಚ್ 4 ಶನಿವಾರದಂದು ಹೆಬ್ರಿಯ ಅನಂತ ಪದ್ಮನಾಭ ದೇವಸ್ಥಾನ ವಠಾರದಲ್ಲಿ ಜರಗಲಿದೆ. ಡೈನಾಮಿಕ್ ಸ್ಟಾರ್ ಜಲವಳ್ಳಿಯವರ ಕರ್ಣ ಹಾಗೂ ಇತ್ತೀಚಿಗೆ ಯಕ್ಷರಂಗದಲ್ಲಿ ಕುಣಿತದಲ್ಲಷ್ಟೇ ಅಲ್ಲದೇ ತನ್ನ ವಾಕ್ಚಾತುರ್ಯದಿಂದಲೂ ಪ್ರಖ್ಯಾತಿಗಳಿಸುತ್ತಿರುವ ಹೆನ್ನಾಬೈಲು ವಿಶ್ವನಾಥರ ಶಲ್ಯ…! ಯಕ್ಷ ಸ್ವರ ಸಿಂಹ ಥಂಡಿ ಭಟ್ಟರ ಅರ್ಜುನ – ಹೆಬ್ರಿ ಪರಿಸರದಲ್ಲಿ ಪ್ರಪ್ರಥಮ ಬಾರಿಗೆ ಯಲಗುಪ್ಪರ ಶ್ರೀ ಕೃಷ್ಣ…! ಮತ್ತೆ ಮತ್ತೆ […]

ಶ್ರೀ ಉಮಾಮಹೇಶ್ವರ ದೇವಸ್ಥಾನ: ಅತಿರುದ್ರ ಮಹಾಯಾಗದ ಎರಡನೇ ದಿನದ ಸಭಾ ಕಾರ್ಯಕ್ರಮ

ಶಿವಪಾಡಿ: ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ. 23 ರ ಗುರುವಾರದಂದು ನಡೆದ ಅತಿರುದ್ರ ಮಹಾಯಾಗದ ಎರಡನೇ ದಿನದ ಸಭಾ ಕಾರ್ಯಕ್ರಮವನ್ನು ಕೃಷ್ಣಪ್ಪ ಸಾಮಂತ ಸ್ಮಾರಕ ಸರಕಾರಿ ಮಾದರಿ ಹಿರಿಯ ಪ್ರಾರ್ಥಮಿಕ ಶಾಲೆಯ ಸಂಸ್ಥಾಪಕ ಶ್ರೀಧರ್ ಕೆ. ಸಾಮಂತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷ ಶಾಸಕ ರಘುಪತಿ ಭಟ್, ಬೆಂಗಳೂರಿನ ಬಾಲ ವಾಗ್ಮಿ ಕು. ಹಾರಿಕಾ ಮಂಜುನಾಥ್, ಉಡುಪಿಯ ಶಿವಾನಿ ಡೈಗ್ನೋಸ್ಟಿಕ್ ಸೆಂಟರ್ ನ ಮಾಲೀಕ ಮತ್ತು ವಿಜ್ಞಾನಿ ಡಾ. ಶಿವಾನಂದ […]