ಹಾವಂಜೆ: ಗ್ರಾಮ ಪಂಚಾಯತ್ ಮತದಾನ ಹಿನ್ನೆಲೆ ಮದ್ಯ ಮಾರಾಟ ನಿಷೇಧ

ಬ್ರಹ್ಮಾವರ: ಗ್ರಾಮ ಪಂಚಾಯತ್ ಉಪಚುನಾವಣೆಗೆ ಸಂಬಂಧಿಸಿದಂತೆ, ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫೆಬ್ರವರಿ 25 ರಂದು ಮತದಾನ ನಡೆಯಲಿರುವ ಹಿನ್ನೆಲೆ, ಫೆ. 23 ರ ಸಂಜೆ 5 ರಿಂದ ಫೆ. 25 ರ ಸಂಜೆ 5 ರ ವರೆಗೆ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು, ಮದ್ಯ ಮಾರಾಟ ಡಿಪೋಗಳನ್ನು, ಮದ್ಯ ತಯಾರಿಕಾ ಡಿಸ್ಟಲರಿಗಳನ್ನು, ಸ್ಟಾರ್ ಹೋಟೆಲ್‌ಗಳನ್ನು, ಶೇಂದಿ ಅಂಗಡಿಗಳನ್ನು ಮುಚ್ಚಲು ಆದೇಶಿಸಿ, ಮೇಲ್ಕಂಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಣದಿನ ಎಂದು ಘೋಷಿಸಿ, ಮದ್ಯ ಮಾರಾಟ ನಿಷೇಧಿಸಿ, […]

ಕುಂದಾಪುರ: ಕುಲಾಲ ಸಮಾಜ ಸಂಘದ ಕಟ್ಟಡ ನವೀಕರಣಕ್ಕೆ ಧನಸಹಾಯ

ಕುಂದಾಪುರ: ಕುಲಾಲ ಕ್ರೀಡೋತ್ಸವ- 2022ರಲ್ಲಿ ಉಳಿತಾಯವಾದ ಮೊತ್ತ 80400 ರೂ ಗಳನ್ನು ಕುಂದಾಪುರದ ಕುಲಾಲ ಸಮಾಜ ಸುಧಾರಕರ ಸಂಘದ ಕಟ್ಟಡ ನವೀಕರಣಕ್ಕೆ ಧನ ಸಹಾಯ ರೂಪದಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ರಾಘವೇಂದ್ರ ಕುಲಾಲ ಹೆಮ್ಮಾಡಿ, ವಿಠ್ಠಲ ಕುಲಾಲ ಹೆಸ್ಕುತ್ತುರು, ಹರೀಶ ಕುಲಾಲ ಕೆದೂರು, ಮಂಜುನಾಥ ಕುಲಾಲ ನೆಲ್ಲಿಕಟ್ಟೆ, ಹರೀಶ ಕುಲಾಲ ಹೊಂಬಾಡಿ, ಶಂಕರ ಕುಲಾಲ ಮೊಳಹಳ್ಳಿ ಉಪಸ್ಥಿತರಿದ್ದರು.