ನಿರುದ್ಯೋಗ ಸಮಸ್ಯೆಗೆ ಮುಕ್ತಿ ಹಾಡಲು ಪ್ರತಿ ತಿಂಗಳು ಉದ್ಯೋಗ ಮೇಳ: ವಿಜಯ್ ಕೊಡವೂರು
ಉಡುಪಿ: ಜಗದ್ಗುರು ಶ್ರೀ ನಿತ್ಯಾನಂದ ಸ್ವಾಮಿ ದೇವಸ್ಥಾನ ಮಠದ ಆಶ್ರಯದಲ್ಲಿ ರಾಷ್ಟ್ರೀಯ ಪದವಿಪೂರ್ವ ವಿದ್ಯಾರ್ಥಿಗಳ ಪೋಷಕರ ಮತ್ತು ಶಿಕ್ಷಕರ ಸಂಘ, ಸ್ವಾವಲಂಬಿ ಭಾರತ ಮತ್ತು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ ಜಂಟಿ ಸಹಯೋಗದಲ್ಲಿ ಭಾನುವಾರದಂದು ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಉಡುಪಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ಉದ್ಯೋಗ ಮೇಳವನ್ನು ಉದ್ಘಾಟಿಸಿ, ಉದ್ಯೋಗ ಅರಸುವ ಜೊತೆ ಸ್ವಉದ್ಯೋಗ ನಡೆಸುವ ಬಗ್ಗೆ ಕೂಡ ಆಸಕ್ತರಾಗುವಂತೆ […]
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್ ಇನ್ನಿಲ್ಲ
ಬೆಂಗಳೂರು: ದೊರೈ-ಭಗವಾನ್ ಜೋಡಿಯ ಖ್ಯಾತ ನಿರ್ದೇಶಕರಾದ ಎಸ್.ಕೆ ಭಗವಾನ್ ಅನಾರೋಗ್ಯದಿಂದಾಗಿ ಇಂದು ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯ ನಿಮಿತ್ತ ಡಿಸೆಂಬರ್ ನಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದ ಭಗವಾನ್ ಇಂದು ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ದೊರೈ- ಭಗವಾನ್ ಜೋಡಿ 55 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದು, ಇದರಲ್ಲಿ 24 ಸಿನಿಮಾಗಳು ಕಾದಂಬರಿಗಳನ್ನು ಆಧರಿಸಿ ಮಾಡಿದ ಚಿತ್ರಗಳಾಗಿದ್ದವು. ಕನ್ನಡದ ಘಟಾನುಘಟಿ ನಟರು ದೊರೈ-ಭಗವಾನ್ ಚಿತ್ರಗಳಲ್ಲಿ ನಟಿಸಿ ಪ್ರಖ್ಯಾತರಾಗಿದ್ದಾರೆ.
ಕಾಸರಗೋಡು: ಕೋಟಿ ಗೀತಾ ಲೇಖನ ಯಜ್ಞ ದೀಕ್ಷಾ ಸಮಾರಂಭ
ಕಾಸರಗೋಡು: ಪ್ರಶಾಂತಿ ವಿದ್ಯಾಕೇಂದ್ರ ಬಾಯಾರಿನಲ್ಲಿ ಶ್ರೀ ಸುಗುಣೀಂದ್ರ ತೀರ್ಥ ಶ್ರೀಪಾದರು ಸುಮಾರು ಐನೂರು ವಿದ್ಯಾರ್ಥಿಗಳಿಗೆ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ನೀಡಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಕರಾವಳಿ ಯೂತ್ ಕ್ಲಬ್ ಗೆ ಗೌರವಾರ್ಪಣೆ
ಪಡುಬೆಳ್ಳೆ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಕರಾವಳಿ ಯೂತ್ ಕ್ಲಬ್ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಗೌರವ ಪೂರ್ವಕವಾಗಿ ಸನ್ಮಾನ ಪತ್ರವನ್ನು ನೀಡಿ ಸಂಸ್ಥೆಯನ್ನು ಸನ್ಮಾನಿಸಲಾಯಿತು ಹಾಗೂ ಸಂಸ್ಥೆಗೆ 10000 ಹಣವನ್ನು ನೀಡಿ ಗೌರವಿಸಲಾಯಿತು. ಹಣವನ್ನು ಸಂಸ್ಥೆಯ ಮುಂದಿನ ತಿಂಗಳ ಸೇವಾ ಯೋಜನೆಯಲ್ಲಿ ಫಲಾನುಭವಿಗಳಿಗೆ ನೀಡಲಾಗುವುದು ಎಂದು ಕರಾವಳಿ ಯೂತ್ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಪಡ್ಡಂಬೀಡು ಆಳ್ವ ಹೆಗ್ಡೆ ಕುಟುಂಬಸ್ಥರ ಮೂಲ ನಾಗ-ಬ್ರಹ್ಮಸ್ಥಾನ ಪ್ರತಿಷ್ಠಾವರ್ಧಂತಿ ಹಾಗೂ ಬ್ರಹ್ಮಮಂಡಲ ಸೇವೆ
ಹಿರಿಯಡಕ: ಪಡ್ಡಂಬೀಡು “ಆಳ್ವ ಹೆಗ್ಡೆ” ಕುಟುಂಬಸ್ಥರ ಮೂಲ ನಾಗ – ಬ್ರಹ್ಮ ಸ್ಥಾನ ಇದರ ಪ್ರತಿಷ್ಠಾವರ್ಧಂತಿ – ಮಹಾ ಅನ್ನಸಂತರ್ಪಣೆ ಹಾಗೂ “ಬ್ರಹ್ಮಮಂಡಲ (ಢಕ್ಕೆ ಬಲಿ) ಸೇವೆ” ಯು ಇಂದು ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳು ದಿನಾಂಕ: 20.02.2023, ಸೋಮವಾರ ಬೆಳಿಗ್ಗೆ ಗಂಟೆ 9.00 ರಿಂದ : ಫಲನ್ಯಾಸ ಪ್ರಾರ್ಥನೆ, ಗಣಯಾಗ, ಬ್ರಹ್ಮದೇವರಿಗೆ ಪಂಚವಿಂಶತಿ ಕಲಶ ಪೂರ್ವಕ ಅಧಿವಾಸ ಹೋಮ – ನಾಗದೇವರಿಗೆ ಪವಮಾನ ಮಂತ್ರ ಗರ್ಭಿತ ನವಕ ಪ್ರಧಾನ, ತನು – ತಂದಿಲ ಸೇವೆ – ಪರಿವಾರ […]