ರಾಷ್ಟ್ರ ಮಟ್ಟದ ಅಂತರ್ ಜಿಲ್ಲಾ ಗುಂಡೆಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಅನುರಾಗ್
ಉಡುಪಿ: ಫೆ. 9 ರಿಂದ 12 ರವರೆಗೆ ಪಾಟ್ನಾ ಬಿಹಾರದಲ್ಲಿಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಅಂತರ್ ಜಿಲ್ಲಾ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಅಲೆವೂರು ಕೇಂದ್ರೀಯ ವಿದ್ಯಾಲಯದ 9ನೇ ತರಗತಿಯ ವಿದ್ಯಾರ್ಥಿ ಅನುರಾಗ್ ಜಿ. ಗುಂಡೆಸೆತ ಸ್ಪರ್ಧೆಯ 16 ವರ್ಷ ಒಳಗಿನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಇವರು ಕಾರ್ಕಳ ಬಿ.ಎಸ್.ಎನ್.ಎಲ್ ಉದ್ಯೋಗಿ ಗುರುರಾಜ ಮತ್ತು ಉಡುಪಿ ಜಿಲ್ಲಾಸ್ಪತ್ರೆಯ ನರ್ಸಿಂಗ್ ಅಧಿಕಾರಿ ರಮಣಿ ದಂಪತಿಗಳ ಪುತ್ರ. ಇವರು ಅಂತರಾಷ್ಟ್ರೀಯ ಕ್ರೀಡಾಪಟು ಶಾಲಿನಿ […]
ಸಡನ್ನಾಗಿ ಲವ್ ಆದ್ರೆ ಏನಾಗುತ್ತೆ…? ಗೊತ್ತಾಗ್ ಬೇಕಾದ್ರೆ ವೀಡಿಯೋ ನೋಡಿ…
ಜೆ.ಆರ್.ಎಮ್ ಸ್ಟುಡಿಯೋಸ್ ನಿರ್ಮಾಣದ, ಮಹೇಂದರ್ ಪಿ.ಎನ್.ಜಿ ನಿರ್ದೇಶನದಲ್ಲಿ ಮೂಡಿಬಂದಿರುವ ಶಾರ್ಟ್ ಮೂವಿ ಸಡನ್ನಾಗಿ ಲವ್ ಆದ್ರೆ ಏನಾಗುತ್ತೆ? ಅಫೀಶಿಯಲ್ ವೀಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಪರಿಕಲ್ಪನೆ – ಚಿತ್ರಕಥೆ – ಸಂಭಾಷಣೆ ಬರೆದವರು ಜ್ಯೋತಿ ರಾವ್ ಮೋಹಿತ್. ಛಾಯಾಗ್ರಹಣ – ಸುಮಂತ್ ಆಚಾರ್ಯ. ವಿವೇಕ್ ಗೌಡ ರಮೇಶ್ , ಪಾಯಲ್ ಚೆಂಗಪ್ಪ, ಪ್ರತೀಕ್ ಶೆಟ್ಟಿ, ಗೌರವ್ ಶೆಟ್ಟಿ, ಮಧುಮತಿ, ಸುಧಾಕರ್ ಗೌಡ ಆರ್, ಹೇಮಂತ್ ಗೌಡ ಮುಂತಾದವರು ತಾರಾಗಣದಲ್ಲಿದ್ದಾರೆ.
ಮಣಿಪಾಲದ: ಕೆ.ಎಂ.ಸಿ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನ ನಿಮಿತ್ತ ಕಾರ್ಯಕ್ರಮ
ಮಣಿಪಾಲ: ಸರಿಯಾದ ತಂಡದ ಸಹಾಯದಿಂದ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಬಾಲ್ಯದ ಹೆಚ್ಚಿನ ಕ್ಯಾನ್ಸರ್ ಗಳನ್ನು ಗುಣಪಡಿಸಬಹುದು. ಬಾಲ್ಯದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕ್ಯಾನ್ಸರ್ ಪೀಡಿತ ಮಕ್ಕಳು, ಅವರ ಆರೈಕೆ ಮಾಡುವವರು ಮತ್ತು ಕ್ಯಾನ್ಸರ್ ನಿಂದ ಬದುಕುಳಿದವರಿಗೆ ಬೆಂಬಲ ವ್ಯಕ್ತಪಡಿಸಲು ಜಾಗತಿಕವಾಗಿ ಪ್ರತಿ ವರ್ಷ ಫೆಬ್ರವರಿ 15 ರಂದು ಅಂತರರಾಷ್ಟ್ರೀಯ ಬಾಲ್ಯದ ಕ್ಯಾನ್ಸರ್ ದಿನವನ್ನು (ಐ ಸಿ ಸಿ ಡಿ ) ಆಚರಿಸಲಾಗುತ್ತದೆ. “ಉತ್ತಮ ಬದುಕುಳಿಯುವಿಕೆ ನಿಮ್ಮ ಮೂಲಕ ಸಾಧಿಸಬಹುದಾಗಿದೆ” ಎಂಬುದು ಐ ಸಿ […]
ಶಿವಪಾಡಿ: ಇಂದು ಸಂಜೆ ಯಕ್ಷಗಾನ ಬಯಲಾಟ
ಶಿವಪಾಡಿ: ಶ್ರೀ ಉಮಾಮಹೇಶವರ ದೇವಸ್ಥಾನದಲ್ಲಿ ಶಿವರಾತ್ರಿಯ ಪ್ರಯುಕ್ತ ಪ್ರಾತಃ ಕಾಲದಿಂದ ರಾತ್ರಿ 10.30 ರವರೆಗೆ ವಿಶೇಷ ಸೇವೆಗಳು ನಡೆಯುತ್ತಲಿದ್ದು, ರಾತ್ರಿ 9.30 ರಿಂದ ಪ್ರಾತಃ ಕಾಲದವರೆಗೆ ದೇವಸ್ಥಾನ ಪರಿಸರದಲ್ಲಿ ಅಬ್ಬಗ ದಾರಗ ತುಳು ಯಕ್ಷಗಾನ ಮತ್ತು ಬೇಡರ ಕಣ್ಣಪ್ಪ ಕನ್ನಡ ಯಕ್ಷಗಾನ ಪ್ರಸಂಗ ನಡೆಯಲಿರುವುದು ದೇವಳದ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಬಿಲ್ಲವ-ಮೊಗವೀರ ಸಮಾಜವನ್ನು ಸಂಪೂರ್ಣ ಕಡೆಗಣಿಸಿದ ಬಜೆಟ್: ರಮೇಶ್ ಕಾಂಚನ್ ಆಕ್ರೋಶ
ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಬಿಲ್ಲವರಿಗೆ ಪ್ರತ್ಯೇಕ ನಿಗಮವನ್ನು ಮುಂದಿನ ಬಜೆಟ್ಟಿನಲ್ಲಿ ಘೋಷಣೆ ಮಾಡಿ ಅನುದಾನ ಇಡುವುದಾಗಿ ಹಾಗೂ ಮೀನುಗಾರರಿಗೆ ವಿಶೇಷ ಪ್ಯಾಕೇಜ್ ನೀಡುವುದಾಗಿ ಹೇಳಿ ಪ್ರಚಾರ ಗಿಟ್ಟಿಸಿಕೊಂಡ ಮುಖ್ಯಮಂತ್ರಿ ಬೊಮ್ಮಾಯಿಯವರು ತಮ್ಮ ಬಜೆಟ್ಟಿನಲ್ಲಿ ಬಿಲ್ಲವ ಹಾಗೂ ಮೊಗವೀರ ಸಮುದಾಯವನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಾವಳಿ ಪ್ರದೇಶದಲ್ಲಿ ಬಿಲ್ಲವ ಸಮುದಾಯ ಹಾಗೂ ಮೊಗವೀರ ಸಮುದಾಯವು ಅತೀ ಹೆಚ್ಚು ಪ್ರಾಬಲ್ಯವನ್ನು ಹೊಂದಿದ್ದು ಬಿಲ್ಲವರಿಗೆ […]