ಉಡುಪಿ: ತಡರಾತ್ರಿಯ ಕ್ಯಾಂಟೀನ್ ಪ್ರಾರಂಭಿಸಿದ ತೃತೀಯಲಿಂಗಿಗಳು; ಮೊದಲ ಎಂಬಿಎ ಪದವೀಧರ ತೃತೀಯಲಿಂಗಿಯಿಂದ ಹೂಡಿಕೆ
ಉಡುಪಿ: ಮೂವರು ತೃತೀಯಲಿಂಗಿಗಳ ಗುಂಪು ನಗರದಲ್ಲಿ ರಾತ್ರಿಯಿಡೀ ನಡೆಯುವ ಕ್ಯಾಂಟೀನ್ ಒಂದನ್ನು ತೆರೆದಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಪೂರ್ವಿ, ವೈಷ್ಣವಿ ಮತ್ತು ಚಂದನಾ ಮೂವರು ತೃತೀಯಲಿಂಗಿಗಳಾಗಿದ್ದು, ಉಡುಪಿಯ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು. ಅನೇಕ ಪ್ರವಾಸಿಗರು ಈ ಪಟ್ಟಣದಲ್ಲಿ ತಡರಾತ್ರಿಯಲ್ಲಿ ಆಹಾರಕ್ಕಾಗಿ ಹುಡುಕುತ್ತಿದ್ದಾರೆ ಎಂದು ಗೊತ್ತಾದಾಗ ಹೊಸ ಪರಿಕಲ್ಪನೆಯ ತಡರಾತ್ರಿಯ ಕ್ಯಾಂಟೀನ್ ಅನ್ನು ಪ್ರಾರಂಭಿಸಲು ನಿರ್ಧರಿಸಿದರು ಮತ್ತು ಅವರ ಈ ಕೆಲಸಕ್ಕೆ ಬೆಂಬಲ ನೀಡಿದ್ದು, ಸಮೀಕ್ಷಾ ಕುಂದರ್, ಕರ್ನಾಟಕದಲ್ಲಿ ಎಂಬಿಎ ವ್ಯಾಸಂಗ ಮಾಡಿದ ಮೊದಲ […]