ರಜತ ಉಡುಪಿ- ಬೀಚ್ ಉತ್ಸವ ಸಮಾರೋಪ ಸಮಾರಂಭ

ಉಡುಪಿ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ರಜತ ಉಡುಪಿ- ಬೀಚ್ ಉತ್ಸವ ಸಮಾರೋಪ ಕಾರ್ಯಕ್ರಮವು ಜನವರಿ 22 ರಂದು ಮಲ್ಪೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಜ್ಯದ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯ ಸಚಿವರಾದ ಆನಂದ್ ಸಿಂಗ್ ಅವರು ಸಮಾರೋಪ ಭಾಷಣ ಮಾಡಲಿದ್ದು, ಶಾಸಕ ಕೆ ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ […]

ನಾಳೆ (ಜ.22) ಸಹಕಾರ ರತ್ನ‌ ಪ್ರಶಸ್ತಿ ಪುರಸ್ಕತ ಜಯಕರ ಶೆಟ್ಟಿ ಇಂದ್ರಾಳಿ ಅವರಿಗೆ ಅಭಿನಂದನಾ ಸಮಾರಂಭ

ಶತಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿರುವ ಉಡುಪಿಯ ಬಡಗಬೆಟ್ಟು ಕೆಡಿಟ್ ಕೋ ಆಪರೇಟಿವ್ ಸೊಸೈಟಿಯನ್ನು ಕಳೆದ 42 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಅಭಿವೃದ್ದಿ ಪಥದಲ್ಲಿ ಮುನ್ನಡೆಸಿದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಇವರಿಗೆ ಪ್ರಸಕ್ತ ವರ್ಷದಲ್ಲಿ ಸಹಕಾರ ಕ್ಷೇತ್ರದ ಮಹೋನ್ನತ ಗೌರವ “ಸಹಕಾರ ರತ್ನ” ಪ್ರಶಸ್ತಿ ಲಭಿಸುವುದರಿಂದ ದಿನಾಂಕ 22.01.2023ರ ಆದಿತ್ಯವಾರದಂದು ಪೂರ್ವಾಹ್ನ ಗಂಟೆ 9 ರಿಂದ ಉಡುಪಿಯ ಮಿಷನ್ ಕಂಪೌಂಡಿನಲ್ಲಿರುವ ಬಾಸೆಲ್ ಮಿಷನರೀಸ್ ಆಡಿಟೋರಿಯಂನಲ್ಲಿ ಅಭಿನಂದನಾ ಸಮಾರಂಭ ಹಾಗೂ ಸೇವಾ ಚಿಂತನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಉಡುಪಿಯ ಶಿವಳ್ಳಿ ಗ್ರಾಮದ […]

ನೀರೆಬೈಲೂರು: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು

ಬೈಲೂರು: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಕಾರ್ಕಳದ ನೀರೆ ಬೈಲೂರಿನ ಬಾದಾಮಿ ಕಟ್ಟೆಯ ಸಮೀಪ ಜ.20 ರಂದು ಸಂಜೆ ವೇಳೆ ನಡೆದಿದೆ. ಕಾರು ಹಿರಿಯಡಕದಿಂದ ಬೈಲೂರಿನ ಕಡೆಗೆ ಬರುತ್ತಿದ್ದು, ಈ ವೇಳೆ ಗುಡ್ಡೆಯಂಗಡಿಯ ಬಾದಾಮಿ ಕಟ್ಟೆ ಬಳಿ ಬರುವಾಗ ಒಮ್ಮೇಲೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆಯ ಬದಿಯ ಮರಕ್ಕೆ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ಮೂವರಲ್ಲಿ ಒಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಜ.22: ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನ ಮತ್ತು ಕಲಾಸ್ತಕರ ಬಳಗದ ವತಿಯಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನ

ಮಂಗಳೂರು: ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನ ಮತ್ತು ಕಲಾಸ್ತಕರ ಬಳಗ, ಕೊಡಿಯಾಲ್ ಬೈಲ್ ಮಂಗಳೂರು ಇವರ ಆಶ್ರಯದಲ್ಲಿ ಶ್ರೀಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನ ಮತ್ತು ರಂಗಸ್ಥಳ ಮಂಗಳೂರು ಇವರ ಪ್ರೋತ್ಸಾಹದೊಂದಿಗೆ ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಇದೇ ಬರುವ ಜನವರಿ ೨೨ ರಂದು ಸಂಜೆ ೪ ರಿಂದ ರಾತ್ರಿ ೧೦ ರವರೆಗೆ ಬಡಗು ತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳವಾಗಿರುವ ಶ್ರೀಕ್ಷೇತ್ರ ಹಟ್ಟಿಯಂಗಡಿ ಮೇಳ, ಇವರಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನವಾಗಿ ‘ಕೃಷ್ಣ ಗಾರುಡಿ’ ಮತ್ತು ‘ಜಾಂಬವತಿ’ ಎಂಬ ಕಥಾನಕ ಪ್ರದರ್ಶನವು […]

ಟೀಮ್ ಅಂಪಾರು ಟ್ರಸ್ಟ್ ಅರ್ಪಿಸುವ ಕಲಾ ಸಂಜೆ -2

ಅಂಪಾರು: ಜನವರಿ 28 ರಂದು ಅಂಪಾರು ಮೆಲ್ಮನೆ ದಿ. ಅಂಪಾರು ಮೀನಾಕ್ಷಿ ಪ್ರಭಾಕರ ಹೆಗ್ಡೆ ವೇದಿಕೆ ಸಹಕಾರಿ ಕ್ರೀಡಾಂಗಣ ಸಂಜಯ ಗಾಂಧಿ ಪ್ರೌಢ ಶಾಲೆ ಅಂಪಾರು ಇಲ್ಲಿ ಕಲಾ ಸಂಜೆ 2, ಸಂಜೆ 5 ಗಂಟೆಗೆ ನಡೆಯಲಿದೆ. ಯಕ್ಷಗಾನ ರಸ ರಾಗ ವೈಭವ, ಕಲಾನ್ವೆಷಣೆ, ಸಂದ್ಯಾನಾದ, ವಾಯ್ಸ್ ಆಫ್ ಕಲಾ ಸಂಜೆ – 2 ಪ್ರತಿಭಾ ಪರ್ವತ ಕಾರ್ಯಕ್ರಮ, ಯಕ್ಷಗಾನ ನತ್ಯ ರೂಪಕ, ಕಾಮಿಡಿ ಕಿಲಾಡಿಗಳ ಕಾರ್ಯಕ್ರಮ, ಡಾನ್ಸ್ ಧಮಾಕಾ,  ಊರಿನ ಸಾಧಕರೊಂದಿಗೆ ಮಾತು – ಕಥೆ […]