ಶಿವಪಾಡಿ: ಫೆ.25 ರಿಂದ ಮಾ. 5 ರವರೆಗೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಐತಿಹಾಸಿಕ ಅತಿರುದ್ರಯಾಗ

ಮಣಿಪಾಲ: ಇಲ್ಲಿನ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣ ಮತ್ತು ವಿಶ್ವಶಾಂತಿಗಾಗಿ ಐತಿಹಾಸಿಕ ಅತಿರುದ್ರಯಾಗವನ್ನು ಫೆ.25 ರಿಂದ ಮಾ. 4 ರವರೆಗೆ ಆಯೋಜಿಸಲಾಗುವುದು. ಯಾಗದ ಕುರಿತು ನಡೆದ ಸಭೆಯ ಉದ್ಘಾಟನೆಯಲ್ಲಿ ಮಾತನಾಡಿದ ಮಣಿಪಾಲ ವಿಶ್ವ ವಿದ್ಯಾಲಯದ ಸಹಕುಲಪತಿ ಹಾಗೂ ಯಾಗ ಸಮಿತಿಯ ಗೌರವಾಧ್ಯಕ್ಷ ಡಾ. ಎಚ್.ಎಸ್. ಬಲ್ಲಾಳ್, ಕಾರ್ಯಕ್ರಮಕ್ಕೆ ಬೇಕಾಗುವ ಎಲ್ಲ ರೀತಿಯ ಸಹಕಾರವನ್ನು ಸಂಸ್ಥೆಯ ಪರವಾಗಿ ನೀಡಲಾಗುವುದು ಎಂದರು. ಶೃಂಗೇರಿ ಶ್ರೀ ಜಗದ್ಗುರು ಶಂಕರಾಚಾರ್ಯ ಮಠದ ಉಡುಪಿ ಶಾಖೆಯ ಧರ್ಮಾಧಿಕಾರಿ ನಾಗೇಶ್ ಶಾಸ್ತ್ರಿ ಇವರು […]

ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ಮಾಹಿತಿ ಕರಪತ್ರ ಬಿಡುಗಡೆ

ಉಡುಪಿ: ನೂತನವಾಗಿ ಪ್ರಾರಂಭಗೊಂಡ ಕಳತ್ತೂರು ಚಂದ್ರನಗರದಲ್ಲಿರುವ ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ನ ಮಾಹಿತಿ ಕರಪತ್ರವನ್ನು ಮಲ್ಲಾರು-ಮಜೂರು ಬದ್ರಿಯಾ ಜುಮ್ಮಾ ಮಸ್ಜಿದ್ ಧರ್ಮಗುರುಗಳಾದ ಅಬ್ದುರ್ರಶೀದ್ ಸಖಾಫಿ ಅಲ್-ಖಾಮಿಲ್ ರವರು ಕಾಪುವಿನ ಖ್ಯಾತ ಸಮಾಜ ಸೇವಕ ಲೀಲಾದರ.ಕೆ.ಶೆಟ್ಟಿ ಇವರ ನಿವಾಸದಲ್ಲಿ ಬಿಡುಗಡೆಗೊಳಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಲೀಲಾದರ ಶೆಟ್ಟಿ ಇವರು ಮಾತನಾಡಿ, ಫಾರೂಕ್ ಚಂದ್ರನಗರ ಇವರು ಉತ್ತಮ ಸಮಾಜ ಸೇವಕರಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವದಿಂದ ಕಾಣುವ ಹಸನ್ಮುಖಿ ವ್ಯಕ್ತಿ. ಗ್ರಾಮೀಣ ಪ್ರದೇಶದಲ್ಲಿ ಬಟರ್ ಫ್ಲೈ […]

ಮಹೀಂದ್ರಾ ಕಂಪನಿಯ ಎರಡನೇ ತಲೆಮಾರಿನ ಥಾರ್ ಬಿಡುಗಡೆ: ರೂ 9.99 ಲಕ್ಷದಿಂದ ಪ್ರಾರಂಭ

ಮಹೀಂದ್ರಾ ಭಾರತದಲ್ಲಿ ಎರಡನೇ ತಲೆಮಾರಿನ ಥಾರ್‌ನ ರಿಯರ್-ವೀಲ್ ಡ್ರೈವ್ (ಆರ್.ಡಬ್ಲ್ಯೂ.ಡಿ) ರೂಪಾಂತರವನ್ನು ಬಿಡುಗಡೆ ಮಾಡಿದೆ, ಇದರ ಪರಿಚಯಾತ್ಮಕ ಬೆಲೆಗಳು ರೂ 9.99 ಲಕ್ಷದಿಂದ ಪ್ರಾರಂಭವಾಗುತ್ತವೆ (ಎಕ್ಸ್ ಶೋ ರೂಂ). 4ಡಬ್ಲ್ಯೂಡಿ ರೂಪಾಂತರಗಳಂತೆ, ಥಾರ್ ರಿಯರ್-ವೀಲ್ ಡ್ರೈವ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ, ಆದರೂ ನೋಟದಲ್ಲಿ ಗಮನಾರ್ಹ ಬದಲಾವಣೆಗಳಿವೆ. ಭಾರತದಲ್ಲಿ ಮಹೀಂದ್ರಾ ಥಾರ್ ಕಾರುಗಳ ಬಗ್ಗೆ ಖರೀದಿದಾರರಲ್ಲಿ ಹೆಚ್ಚು ಆಸಕ್ತಿ ಇದೆ. ಥಾರ್ 4×4 ರಂತೆ, ಹೊಸ ಥಾರ್ ಆರ್.ಡಬ್ಲ್ಯೂ.ಡಿಯು ಎ.ಎಕ್ಸ್(ಒ) ಮತ್ತು ಎಲ್.ಎಕ್ಸ್ ಟ್ರಿಮ್ […]

ಮಹಿಳಾ ಸ್ವಸಹಾಯ ಸಂಘದ ಸಂಜೀವಿನಿ ಸಂತೆ ಮತ್ತು ಸಾಂಸ್ಕತಿಕ ಕಲರವ ಕಾರ್ಯಕ್ರಮ

ಉಡುಪಿ: ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲು ಸರಕಾರ ಹೆಚ್ಚಿನ ಒತ್ತು ನೀಡುತ್ತಿದ್ದು,ಮಹಿಳೆಯರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಜಿ.ಪಂ.ಸಿಇಓ ಪ್ರಸನ್ನ ಎಚ್.ಹೇಳಿದರು. ಅವರು ಭಾನುವಾರ ಜಿ.ಪಂ., ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ , ಲಿಂಗತ್ವ ಆಧಾರಿತ ದೌರ್ಜನ್ಯ ವಿಮೋಚನ ಅಭಿಯಾನದ ಪ್ರಯುಕ್ತ ಬನ್ನಂಜೆಯ ಬಾಲಭವನ ಬಯಲು ರಂಗಮಂದಿರದಲ್ಲಿ ನಡೆದ ಸಂಜೀವಿನಿ ಸಂತೆ ಮತ್ತು ಸಾಂಸ್ಕತಿಕ ಕಲರವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 86 ಸಾವಿರ ಮಂದಿ ಮಹಿಳೆಯರು ಸಂಜೀವಿನಿಯ ಸದಸ್ಯರಾಗಿದ್ದು, 155 […]

ಅವಿಭಜಿತ ದ.ಕ ಜಿಲ್ಲೆಯ ಸಾರ್ವಜನಿಕರ ಅತ್ಯುತ್ತಮ ಸಹಕಾರದಿಂದ ಅರಣ್ಯ ಸಂಪತ್ತಿನ ರಕ್ಷಣೆ: ಗಣಪತಿ ಕೆ

ಉಡುಪಿ: ಉಡುಪಿ ಮತ್ತು ದ.ಕನ್ನಡ ಜಿಲ್ಲೆಯಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ರಕ್ಷಣೆಯಲ್ಲಿ ಅರಣ್ಯ ಇಲಾಖೆಗೆ ಸಾರ್ವಜನಿಕರು ಅತ್ಯುತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದು, ಇದರಿಂದ ಇಲಾಖೆಯು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿದೆ ಎಂದು ಕಾರ್ಕಳ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಹೇಳಿದರು. ಅವರು ಭಾನುವಾರದಂದು ನಗರದ ಕಿದಿಯೂರು ಹೋಟೆಲ್‍ನ ರೂಫ್ ಟಾಪ್ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘ (ರಿ) ಉಡುಪಿ ಜಿಲ್ಲೆ ಇವರ ವತಿಯಿಂದ ವಾರ್ಷಿಕ ಸಮಾರಂಭ, ನೂತನ ವರ್ಷದ […]