ಶತದಿನೋತ್ಸವ ಆಚರಿಸಿದ ಕಾಂತಾರ: ಅಂದು ಕಾಂತಾರದಲ್ಲಿ ಕೆರಾಡಿ; ಇಂದು ಕೆರಾಡಿಯಲ್ಲಿ ಕಾಂತಾರ

ತುಳುನಾಡಿನ ಸಂಸ್ಕೃತಿಯನ್ನು ಸಾರುವ ಕಾಂತಾರ ಚಲನಚಿತ್ರವು ಶತದಿನೋತ್ಸವವನ್ನು ಆಚರಿಸಿದೆ. ಈ ಬಗ್ಗೆ ಹೊಂಬಾಳೆ ಫಿಲಮ್ಸ್ ತನ್ನ ಸಂತಸವನ್ನು ಹಂಚಿಕೊಂಡಿದೆ. “ಬೆಳಕು ಆದರೆ ಇದು ಬೆಳಕಲ್ಲ100 ದಿನದ ದರ್ಶನ. ನಾವು ಯಾವಾಗಲೂ ಗೌರವಿಸುವ ಚಲನಚಿತ್ರವು ನಮ್ಮನ್ನು ನಮ್ಮ ಮೂಲಕ್ಕೆ ಮರಳಿ ಕರೆದೊಯ್ದು ನಮ್ಮ ಸಂಪ್ರದಾಯಗಳ ಬಗ್ಗೆ ವಿಸ್ಮಯ ಪಡುವಂತೆ ಮಾಡಿತು. ಇದನ್ನು ಮಾಡಿದ ಎಲ್ಲರಿಗೂ ವಂದನೆಗಳು” ಎಂದು ಹೊಂಬಾಳೆ ಟ್ಬೀಟ್ ಮಾಡಿದೆ. ಏತನ್ಮಧ್ಯೆ, ಯಾವ ಕೆರಾಡಿಯೆಂಬ ಹಳ್ಳಿಯಲ್ಲಿ ಕಾಂತಾರ ಚಲನಚಿತ್ರವನ್ನು ಚಿತ್ರೀಕರಿಸಲಾಯಿತೋ ಅಲ್ಲಿ ಜ.8 ಭಾನುವಾರದಂದು ಕಾಂತಾರ ಚಲನಚಿತ್ರ […]
ಮುಖ್ಯ ಚುನಾವಣಾ ಕಚೇರಿಯಿಂದ ಅರ್ಹ ಮತದಾರರ ಅಂತಿಮ ಪಟ್ಟಿಯ ಪಿಡಿಎಫ್ ಮಾದರಿ ಬಿಡುಗಡೆ: ನಿಮ್ಮ ಹೆಸರು ಪರೀಕ್ಷಿಸಿಕೊಳ್ಳಿ

ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯು ಅರ್ಹ ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಇದರಲ್ಲಿ ಮತದಾರರು ತಮ್ಮ ಹೆಸರು ನೋಂದಾವಣೆಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. https://ceo.karnataka.gov.in ವೆಬ್ ಸೈಟ್ ನಲ್ಲಿ ಪಿಡಿಎಫ್ ಮಾದರಿಯಲ್ಲಿ ಮತದಾರರು ತಮ್ಮ ಹೆಸರು ಮುಂತಾದ ವಿವರಗಳು ಪರಿಶೀಲಿಸಬಹುದು. ಮೃತಪಟ್ಟ, ವಿಳಾಸ ಬದಲಿಸಿರುವ ಹಾಗೂ ಕೈಬಿಟ್ಟಿರುವ ಮತದಾರರ ಮಾಹಿತಿಯನ್ನು ಕಾರಣ ಸಮೇತ ಪ್ರಕಟಿಸಲಾಗಿದೆ ಎಂದು ಮುಖ್ಯ ಚುನಾವಣಾ ಕಚೇರಿ ಟ್ವೀಟ್ ಮಾಡಿ ತಿಳಿಸಿದೆ. ನಿಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಲು ಲಿಂಕ್ ಗೆ ಭೇಟಿ ನೀಡಿ https://ceo.karnataka.gov.in/FinalRoll_2023/ https://erms.karnataka.gov.in/2022_ADMS_AFTER_DRAFT/
ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀಶ ಕೊಡವೂರು ನೇಮಕ

ಉಡುಪಿ: ಪ್ರಸಕ್ತ ಸಾಲಿಗೆ ಉಡುಪಿ ನಗರಸಭೆಯ ಸ್ಥಾಯೀ ಸಮಿತಿಯ ಅಧ್ಯಕ್ಷರಾಗಿ ಮೂಡಬೆಟ್ಟು ವಾರ್ಡಿನ ಸದಸ್ಯ ಶ್ರೀಶ ಕೊಡವೂರು ಅವರನ್ನು ಆಯ್ಕೆ ಮಾಡಲಾಗಿದೆ. ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತರ ಯಶವಂತ ಪ್ರಭು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಸಭೆಯಲ್ಲಿ ಸ್ಥಾಯಿ ಸಮಿತಿಯ ಸದಸ್ಯರಾದ ಸಂಪಾವತಿ, ಸಂತೋಷ್ ಜತ್ತನ್, ಡಿ. ಬಾಲಕೃಷ್ಣ ಶೆಟ್ಟಿ, ಯೋಗೀಶ್ ವಿ ಸಾಲ್ಯಾನ್, ಮಾನಸ ಸಿ ಪೈ, ಭಾರತಿ ಪ್ರಶಾಂತ್, ಜಯಂತಿ […]
ಕಿನ್ನಿಗೋಳಿ: ಉಭಯ ಜಿಲ್ಲೆಗಳ ನೇಕಾರರಿಗೆ ಸರ್ಕಾರಿ ಯೋಜನೆಗಳ ಮಾಹಿತಿ ಕಾರ್ಯಕ್ರಮ

ಕಿನ್ನಿಗೋಳಿ: ದ.ಕ. ಮತ್ತು ಉಡುಪಿ ಜಿಲ್ಲೆಗಳ ನೇಕಾರರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮವು ಜ.5 ರಂದು ಕಿನ್ನಿಗೋಳಿಯ ತಾಳಿಪಾಡಿ ನೇಕಾರರ ಸಹಕಾರಿ ಸಂಘದಲ್ಲಿ ನಡೆಯಿತು. ಉಡುಪಿ ಸೀರೆ ಪುನಶ್ಚೇತನಕ್ಕಾಗಿ ಶ್ರಮಿಸುತ್ತಿರುವ ಕದಿಕೆ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ವೀವರ್ಸ್ ಸರ್ವಿಸ್ ಸೆಂಟರ್ ನ ಉಪ ನಿರ್ದೇಶಕ ಮಾರಿಮುತ್ತು ಮತ್ತು ತಾಂತ್ರಿಕ ವಿಭಾಗದ ಅಧಿಕಾರಿ ಮೋಹನ್ ಕುಮಾರ್, ಕೈ ಮಗ್ಗ ಮತ್ತು ಜವಳಿ ಇಲಾಖೆಯ ಉಭಯ ಜಿಲ್ಲೆಗಳ ಉಪ […]