ಮಂಗಳೂರು: ನಾಳೆ ಪುರಭವನದಲ್ಲಿ ಬಡಗುತಿಟ್ಟು ಯಕ್ಷಗಾನ ಪ್ರದರ್ಶನ
ಮಂಗಳೂರು: ಮಂಗಳೂರಿನಲ್ಲಿ ಬಡಗುತಿಟ್ಟು ಯಕ್ಷಗಾನ ತರಬೇತಿಗಾಗಿ ಮೂರು ವರ್ಷಗಳ ಹಿಂದೆ ಯಕ್ಷಾಭಿನಯ ಬಳಗ ಎಂಬ ಸಂಘವನ್ನು ಹುಟ್ಟುಹಾಕಿ ಯಕ್ಷಗುರು ‘ಯಕ್ಷಶ್ರೀ’ಐರೋಡಿ ಮಂಜುನಾಥ ಕುಲಾಲ್ ಯಡ್ತಾಡಿ ಇವರ ನಿರ್ದೇಶನದಲ್ಲಿ ಯಕ್ಷಗಾನ ತರಬೇತಿಯನ್ನು ನೀಡಲಾಗುತ್ತಿದೆ. ಈ ಸಂಘದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಇಳಿವಯಸ್ಸಿನವರು ಕೂಡಾ ಯಕ್ಷಗಾನದ ತಾಳ ಮತ್ತು ಪ್ರಸಂಗ ಅಭ್ಯಾಸ ಮಾಡುತ್ತಿದ್ದಾರೆ. ಗುರುಗಳ ನಿರ್ದೇಶನದಲ್ಲಿ ಸಂಘದ ಸದಸ್ಯರು ಈಗಾಗಲೇ ಹಲವಾರು ಯಕ್ಷಗಾನ ಪ್ರದರ್ಶನಗಳನ್ನು ನೀಡಿರುತ್ತಾರೆ. ಇದೀಗ ಯಕ್ಷಾಭಿನಯ ಬಳಗದ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಸಂಘದ ಸದಸ್ಯರಿಂದ ಜ 8, […]
ಮತ್ತೆ ಒಂದಾದ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಜೋಡಿ: ಮಿ. ಬ್ಯಾಚುಲರ್ ಚಿತ್ರದಲ್ಲಿ ಸಿನಿರಸಿಕರಿಗೆ ಮಾಡಲಿದ್ದಾರೆ ಮೋಡಿ
‘ಲವ್ ಮಾಕ್ಟೇಲ್’ ಸಿನಿಮಾ ನೋಡಿದವರಿಗೆ ಈ ಜೋಡಿ ಚಿರಪರಿಚಿತ. ಸಿದ್ದಸೂತ್ರದ ಚಿತ್ರಗಳನ್ನು ಬಿಟ್ಟು ಹೊಸದಾದ ಪರಿಕಲ್ಪನೆಯೊಂದಿಗೆ ಬಂದಿದ್ದ ಲವ್ ಮಾಕ್ಟೇಲ್ ಚಿತ್ರವನ್ನು ಮೆಚ್ಚದವರು ಕಡಿಮೆ. ಡಾರ್ಲಿಂಗ್’ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿ ಈ ಚಿತ್ರದಲ್ಲಿ ಮೋಡಿ ಮಾಡಿತ್ತು. ಈ ಚಿತ್ರದ ಯಶಸ್ಸಿನ ಬಳಿಕ ‘ಲವ್ ಮಾಕ್ಟೇಲ್ 2’ ಕೂಡಾ ಮಾಡಿತ್ತು ಈ ಜೋಡಿ. ಇದೀಗ ‘ಮಿ. ಬ್ಯಾಚುಲರ್’ ಎನ್ನುವ ಹೊಸ ಚಿತ್ರದಲ್ಲಿ ಈ ಜೋಡಿ ಮತ್ತೊಮ್ಮೆ ಮೋಡಿ ಮಾಡಲು ಸಜ್ಜಾಗಿದೆ. ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ […]
ಕೆ.ಎಂ.ಸಿ: ಎರಡನೇ ಅಂತರರಾಷ್ಟ್ರೀಯ ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಂ ಸಮ್ಮೇಳನ ಉದ್ಘಾಟನೆ
ಮಣಿಪಾಲ: ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿ ವ್ಯೂನಲ್ಲಿ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮಣಿಪಾಲ, ಜಾಗತಿಕ ಕ್ಯಾನ್ಸರ್ ಒಕ್ಕೂಟ ಮತ್ತು ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಗಳು ಜಂಟಿಯಾಗಿ ಎರಡನೇ ಅಂತರರಾಷ್ಟ್ರೀಯ ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಂ ಸಮ್ಮೇಳನವನ್ನು ಜನವರಿ 7 ಮತ್ತು 8 ರಂದು ಆಯೋಜಿಸಿದ್ದು, ಸಮ್ಮೇಳನದಲ್ಲಿ 200 ಕ್ಕೂ ಹೆಚ್ಚು ದೇಶ ವಿದೇಶಗಳ ಪ್ರತಿನಿಧಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದಾರೆ. ಅಂತರರಾಷ್ಟ್ರೀಯ ಸಂಸ್ಥೆಗಳಾದ ಮಾರ್ಕಿ ಕ್ಯಾನ್ಸರ್ ಸೆಂಟರ್, ಮೇಯೊ ಕ್ಲಿನಿಕ್, ಲಾಹೆ ಹಾಸ್ಪಿಟಲ್ ಹಾಗೂ ಮೆಡಿಕಲ್ ಸೆಂಟರ್ […]
ಮಂಗಳೂರು ವಿಮಾನ ನಿಲ್ದಾಣದಲ್ಲಿ ಎಂ.ಎಸ್ ಧೋನಿ: ಕಾಸರಗೋಡಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿ
ಮಂಗಳೂರು: ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕ, ಕ್ಯಾಪ್ಟಲ್ ಕೂಲ್ ಎಂ.ಎಸ್ ಧೋನಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಕರ್ನಾಟಕದ ಗಡಿ ಜಿಲ್ಲೆಯಾದ ಕಾಸರಗೋಡಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದಕ್ಕೆ ತೆರಳುವ ಸಂದರ್ಭ ಮುಂಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಆ ಬಳಿಕ ಶಾಸಕ ಖಾದರ್ ಅವರ ಸಹೋದರ ಯು.ಟಿ ಇಫ್ತಿಕಾರ್ ಅವರ ಕಾರಿನಲ್ಲಿ ಕಾಸರಗೋಡಿನ ಬೇಕಲ್ ಗೆ ತೆರಳಿದ್ದಾರೆ. ಕಾಸರಗೋಡಿನಲ್ಲಿ ನಡೆಯಲಿರುವ ತಮ್ಮ ಸ್ನೇಹಿತ ಡಾ. ಶಾಜಿರ್ ಗಫಾರ್ ಅವರ ತಂದೆ ಪ್ರೊ.ಅಬ್ದುಲ್ ಗಫಾರ್ ಅವರ […]
ಮಣಿಪಾಲ- ಪೆರಂಪಳ್ಳಿ- ಶೀಂಬ್ರ ರಸ್ತೆಗೆ ಜಾಗದ ಸಮಸ್ಯೆ: ಶಾಸಕ ರಘುಪತಿ ಭಟ್ ರಿಂದ ಸ್ಥಳೀಯರ ಮನವೊಲಿಕೆ
ಉಡುಪಿ: ಇಲ್ಲಿನ ಮಣಿಪಾಲ – ಪೆರಂಪಳ್ಳಿ – ಶೀಂಬ್ರ ರಸ್ತೆ ಅಗಲೀಕರಣಗೊಳಿಸಿ ಅಭಿವೃದ್ಧಿ ಪಡಿಸಲು ಶಾಸಕ ಕೆ. ರಘುಪತಿ ಭಟ್ ರವರ ಶಿಫಾರಸ್ಸಿನ ಮೇರೆಗೆ ರೂ. 7.00 ಕೋಟಿ ಅನುದಾನ ಮಂಜೂರಾಗಿ ಭಾಗಶಃ ಕಾಮಗಾರಿ ಪೂರ್ಣಗೊಂಡಿರುತ್ತದೆ. ಈ ರಸ್ತೆ ಹಾದುಹೋಗುವ ಪೆರಂಪಳ್ಳಿಯ ಶೀಂಬ್ರ ಬ್ರಿಡ್ಜ್ ಬಳಿ ರಸ್ತೆ ಅಗಲೀಕರಣಕ್ಕೆ ಖಾಸಗಿ ಜಾಗದ ಸಮಸ್ಯೆ ಉಂಟಾಗಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿತ್ತು. ಇದರಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಸ್ಥಳೀಯರ ಮನವಿಯಂತೆ ಶಾಸಕರು ಶನಿವಾರದಂದು ಜಿಲ್ಲಾಧಿಕಾರಿಗಳಾದ ಕೂರ್ಮಾ ರಾವ್ ಎಂ. ಹಾಗೂ […]