ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿ ದೈವಾಧೀನ

ವಿಜಯಪುರ: ಇಲ್ಲಿನ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಸೋಮವಾರದಂದು ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಸಿದ್ದೇಶ್ವರ ಸ್ವಾಮೀಜಿ ಅವರ ಅಂತಿಮ ಸಂಸ್ಕಾರಕ್ಕೆ ಸಂಪೂರ್ಣ ರಾಜ್ಯ ಗೌರವವನ್ನು ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಮಂಗಳವಾರ (ಜನವರಿ 3) ವಿಜಯಪುರದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ಧೇಶ್ವರ ಸ್ವಾಮೀಜಿಯವರು ಸೋಮವಾರ ಕೊನೆಯುಸಿರೆಳೆದಿದ್ದಾರೆ. ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಜ್ಞಾನಯೋಗಾಶ್ರಮದ ಆಧ್ಯಾತ್ಮಿಕ ನಾಯಕ ಸಿದ್ಧೇಶ್ವರ ಸ್ವಾಮೀಜಿ ಅವರನ್ನು […]

ಅಂಜಾರು: ಜ.06 ರಂದು ಜುಮಾದಿ ಬಂಟ ಪರಿವಾರ ದೈವಗಳ ನೇಮೋತ್ಸವ

ಉಡುಪಿ: ಅಂಜಾರು ಗ್ರಾಮ ಮತ್ತಾವು ‘ಶ್ರೀನಿಧಿ’ ಇಲ್ಲಿ ಜುಮಾದಿ ಬಂಟ ಮತ್ತು ಪರಿವಾರ ದೈವಗಳ, ಹರಿಪ್ರಸಾದ್ ಇವರ ಹರಕೆಯ ನೇಮೋತ್ಸವವು ಜ. 06 ಶುಕ್ರವಾರ ನಡೆಯಲಿದ್ದು ಅಂದು ಬೆಳಿಗ್ಗೆ 8:30 ಕ್ಕೆ ಚಪ್ಪರ ಮುಹೂರ್ತ ಮತ್ತು ಬೆಳಿಗ್ಗೆ 9:00 ಗಂಟೆಗೆ ಭಂಡಾರ ಹೊರಡುವುದು. ಮಧ್ಯಾಹ್ನ 12:30ಕ್ಕೆ ಅನ್ನ ಸಂತರ್ಪಣೆ ರಾತ್ರಿ 8.00 ಗಂಟೆಗೆ ಮೂಲ ಮೈಸಂದಾಯ, ಪಂಜುರ್ಲಿ, ಜುಮಾದಿ ಬಂಟ, ದಾರ್ಂಬಳ್ಳಾತಿ ನೇಮೋತ್ಸವವು ಜರಗಲಿರುವುದು. ಭಕ್ತರು ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ, ದೈವದ ಸಿರಿಮುಡಿ ಗಂಧ ಪ್ರಸಾದವನ್ನು […]

ಹಾಲಾಡಿಯಲ್ಲಿ ಆಳುಪರ ಕಾಲದ ಅಪರೂಪದ ಶಾಸನ ಪತ್ತೆ: ಪ್ರೊ.ಟಿ. ಮುರುಗೇಶಿ ಅವರಿಂದ ಸಂಶೋಧನೆ

ಉಡುಪಿ: ಕುಂದಾಪುರ ತಾಲೂಕು 76 ಹಾಲಾಡಿಯ ಹುಯ್ಯಾರುವಿನಲ್ಲಿ ಅತಿ ವಿರಳ ಎನ್ನಬಹುದಾದ ಶಾಸನ ಪತ್ತೆಯಾಗಿದೆ. ಹುಯ್ಯಾರು ಪಟೇಲ್ ದಿ.ಹಿರಿಯಣ್ಣ ಶೆಟ್ಟಿ ಕುಟುಂಬಿಕರ ಜಾಗದಲ್ಲಿ ಈ ಶಾಸನವಿದೆ. ಸುಮಾರು 10 ಅಡಿ ಎತ್ತರ, 5 ಅಡಿ ಅಗಲ ಮತ್ತು 3.5 ಇಂಚು ದಪ್ಪ ಗ್ರಾನೈಟ್ ಶಿಲೆಯಲ್ಲಿ ಶಾಸನವನ್ನು ರಚಿಸಲಾಗಿದೆ. ಆಯತಾಕಾರದ ರಚನೆಯನ್ನು ಹೊಂದಿರುವ ಇದರ ಮೇಲ್ಭಾಗವನ್ನು ಕೋನಾಕೃತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಶಾಸನವನ್ನು ಎರಡು ಪಟ್ಟಿಕೆಗಳನ್ನಾಗಿ ವಿಂಗಡಿಸಲಾಗಿದ್ದು, ಮೇಲಿನ ಕೋನಾಕೃತಿಯ ಪಟ್ಟಿಕೆಯ ಮೇಲೆ ಎಂಟು ಸಾಲುಗಳಲ್ಲಿ ಶಾಸನವನ್ನು ಬರೆಯಲಾಗಿದೆ. ಬರವಣಿಗೆ […]